ಅಭ್ಯರ್ಥಿಗಳಿಗೀಗ ರಿಲ್ಯಾಕ್ಸ್‌ ಮೂಡ್‌

Team Udayavani, Dec 7, 2019, 4:36 PM IST

ಹಾವೇರಿ: ಹಿರೇಕೆರೂರು ಹಾಗೂ ರಾಣಿಬೆನ್ನೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ತಿಂಗಳಿಂದ ಸುತ್ತಾಡಿದ ಅಭ್ಯರ್ಥಿಗಳು ಮತದಾನದ ಮರುದಿನ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದರು.

ರಾಣಿಬೆನ್ನೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡ ಶುಕ್ರವಾರ ಮನೆಯಲ್ಲೇ ಕಾಲ ಕಳೆದರು. ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೆಳಗ್ಗೆಯಿಂದಲೇ ಕೋಳಿವಾಡರ ಮನೆಗೆ ಆಗಮಿಸುತ್ತಿದ್ದರು. ಬಂದ ಎಲ್ಲರೊಂದಿಗೆ ಮತದಾನ, ಫಲಿತಾಂಶದ ಬಗ್ಗೆ ಚರ್ಚಿಸಿದರು.

ರಾಣಿಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ತನ್ನ ನೆಚ್ಚಿನ ಮನೆ ಶ್ವಾನದ ಜೊತೆ ಕೆಲ ಹೊತ್ತು ಕಳೆದರು. ನಂತರ ತಮ್ಮ ಇಟ್ಟಂಗಿ ಭಟ್ಟಿ ಕಡೆ ಸುತ್ತಾಡಿದರು. ಬಳಿಕ ತಮ್ಮ ಕುಟುಂಬದ ಜತೆ ಸಮಯ ಕಳೆದರು. ಸಂಜೆ ಹೊತ್ತು ತಮ್ಮ ಆಪರೊಂದಿಗೆ ಮತದಾನ, ಪ್ರಚಾರ ಪ್ರಕ್ರಿಯೆ, ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದರು.

ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಶುಕ್ರವಾರ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಉಪಹಾರ ಸೇವಿಸಿ, ಸದಸ್ಯರೊಂದಿಗೆ ಕಾರ್ಯಕರ್ತರ ಮಿತ್ರರ ಮದುವೆ, ಶುಭ ಸಮಾರಂಭಗಳಲ್ಲಿ ಭಾಗಿಯಾಗಿದರು. ಬಳಿಕ ಕಾರ್ಯಕರ್ತರು, ಮುಖಂಡರೊಂದಿಗೆ ಮತ ಲೆಕ್ಕಾಚಾರದಲ್ಲಿ ತೊಡಗಿದರು.

ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌. ಬನ್ನಿಕೋಡ, ಮನೆಗೆ ಆಗಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮತದಾನದ ಲೆಕ್ಕಚಾರ ಹಾಕಿದರು. ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲೇ ಕಾಲಕಳೆದ ಬನ್ನಿಕೋಡ ಸಂಪೂರ್ಣ ದಿನವನ್ನು ಕಾರ್ಯಕರ್ತರೊಡನೆ ಚರ್ಚೆ ಮಾಡುವ ಮೂಲಕವೇ ಕಳೆದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ