ಎಲ್ಲರೂ ಜಲ ಸಂರಕ್ಷಣೆಗೆ ಮುಂದಾಗಿ
Team Udayavani, Apr 10, 2021, 5:05 PM IST
ಹಾವೇರಿ: ನೀರಿನ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಿಮ್ಮ ಕೆರೆ ನಿಮ್ಮ ಭವಿಷ್ಯ ರೂಪಿಸುತ್ತವೆ.ನಮ್ಮ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾದ್ದರಿಂದ ಜಲಸಂರಕ್ಷಣೆ ಅತ್ಯಂತ ಅವಶ್ಯವಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಕುಳೇನೂರು ಗ್ರಾಮದ ನೂತನಕೆರೆ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಕ್ಯಾಚ್ ದ ರೇನ್ ಜಲ ಶಕ್ತಿ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬೇಸಿಗೆ ಮುನ್ನವೇ ನೀರಿನಅಭಾವ ಉಂಟಾಗುತ್ತದೆ. ಜನಸಂಖ್ಯಾ ಸೊ#ಧೀಟಹಾಗೂ ನಮ್ಮ ಅಜಾಗರೂಕತೆಯಿಂದ ನದಿಗಳುಸೇರಿದಂತೆ ಜಲಮೂಲಗಳು ಬೇಸಿಗೆ ಮುನ್ನವೇಬತ್ತಿ ಹೋಗುತ್ತಿವೆ. ಇದೇ ರೀತಿ ಮುಂದುವರೆದರೆನೀರಿನ ಬವಣೆ ಉಂಟಾಗುತ್ತದೆ. ನೀರಿನ ಮಿತಬಳಕೆ ಹಾಗೂ ಜಲ ಮೂಲಗಳ ಸಂರಕ್ಷಣೆಮೂಲಕ ಪ್ರತಿಯೊಬ್ಬರು ಕ್ಯಾಚ್ ದ್ ರೇನ್‌ಜಲಶಕ್ತಿ ಅಭಿಯಾನಕ್ಕೆ ಮುಂದಾಗಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಮ್ಮದ್ ರೋಷನ್ ಮಾತನಾಡಿ,ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮನ್ವಯದೊಂದಿಗೆ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ, ಜಲಮೂಲಗಳ ಸಂರಕ್ಷಣೆ ಹಾಗೂಅಂತರ್ಜಲ ಪುನಃಶ್ಚೇತನವನ್ನು ನೂರರಷ್ಟುಯಶಸ್ವಿಗೊಳಿಸಲಾಗುವುದು. ಗ್ರಾಮಗಳಲ್ಲಿ ರಸ್ತೆ,ಚರಂಡಿ ನಿರ್ಮಾಣದೊಂದಿಗೆ ಗ್ರಾಮದ ಸ್ವತ್ಛತೆಗೆಆದ್ಯತೆ ನೀಡಬೇಕೆಂದು ಹೇಳಿದರು.
19 ಲಕ್ಷ ರೂ. ಅನುದಾನದಲ್ಲಿ ಈ ಕೆರೆಯನ್ನುಸಮಗ್ರ ಅಭಿವೃದ್ಧಿಪಡಿಸಲಾಗುವುದು ಹಾಗೂ ಇಲ್ಲಿಒಂದು ಬಂಡ್ ನಿರ್ಮಾಣ ಮಾಡಿ ಕಾಮಗಾರಿ ಯಶಸ್ವಿಗೊಳಿಸಲಾಗುವುದು. ರೈತ ಕ್ರಿಯಾಯೋಜನೆಯಡಿ 10 ದಿನಗಳಲ್ಲಿ ಸುಮಾರು ಹತ್ತುಸಾವಿರ ಎನ್‌ಎಂಆರ್ ನೋಂದಣಿ(ನಾಮಿನಲ್‌ಮಾಸ್ಟರ್ ರೋಲ್) ಮೂಲಕ ಹಾವೇರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮದ ಅಭಿವೃದ್ಧಿಗೆ ನೂತನ ಗ್ರಾಪಂ ಅಧ್ಯಕ್ಷರು, ಸದಸ್ಯರ ಜವಾಬ್ದಾರಿ ಅಧಿಕವಾಗಿದೆ. ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಹಿಸಿದರೆ ಜಲಶಕ್ತಿ ಅಭಿಯಾನ ಯಶ್ವಸಿಯಾಗಲು ಸಾಧ್ಯ ಎಂದರು.
ನಿರ್ಮಲ ಹಾವೇರಿ ಯೋಜನೆಯಡಿ ಪ್ರತಿ ಗ್ರಾಮದಲ್ಲೂ ಬಚ್ಚಲ ನೀರು ಹಾಗೂ ಕೊಳಚೆನೀರು ಚರಂಡಿ ಮೂಲಕವೇ ಹರಿಯುವಂತೆ ವ್ಯವಸ್ಥೆ ಮಾಡಲಾಗುವುದು. ಎಲ್ಲ ಕೊಳಚೆ ನೀರನ್ನುಒಂದೇ ಗುಂಡಿಯಲ್ಲಿ ಸಂಗ್ರಹಿಸಿ ನೈಸರ್ಗಿಕವಾಗಿಶುದ್ಧೀಕರಿಸಿ ಗುಣಮಟ್ಟದ ನೀರನ್ನು ಕೆರೆಗೆಹರಿಸಲಾಗುವುದು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಇದೇ ವೇಳೆ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ವಿತರಿಸಲಾಯಿತು. ಜಿಪಂಸದಸ್ಯೆ ಶಶಿಕಲಾ ಲಮಾಣಿ, ಕುಳೇನೂರು ಗ್ರಾಪಂಅಧ್ಯಕ್ಷೆ ನೀಲಮ್ಮ ಕೆಂಗೊಂಡನವರ, ಉಪಾಧ್ಯಕ್ಷ ಸಿದ್ದಪ್ಪ ಲಮಾಣಿ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಹಾವೇರಿ ಇತರರು ಉಪಸ್ಥಿತರಿದ್ದರು. ಉದ್ಯೋಗ ಖಾತ್ರಿ ನೋಡೆಲ್ ಅಧಿಕಾರಿ ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾವೇರಿತಾಪಂ ಇಒ ಬಸವರಾಜ ಡಿ. ಸ್ವಾಗತಿಸಿದರು.
ಶ್ರಮದಾನ: ತಾಲೂಕಿನ ಕುಳೇನೂರು ಗ್ರಾಮದಲ್ಲಿ ನಡೆದ ಹೊಸ ಕೆರೆ ನಿರ್ಮಾಣ ಕಾಮಗಾರಿಯಲ್ಲಿಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿಹಾಗೂ ಜಿಪಂ ಸಿಇಒ ಮಹಮ್ಮದ್ ರೋಷನ್‌ಅವರು ಕೂಲಿಕಾರ್ಮಿಕರೊಂದಿಗೆ ಶ್ರಮದಾನದಲ್ಲಿ ಭಾಗವಹಿಸಿದರು.
ರೈತರು ಕೆರೆ ಮಣ್ಣನನ್ನು ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋಗಲು ಮುಂದಾದರೆ ಕೆರೆ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಬಿಡುಗಡೆಮಾಡಲಾಗುವುದು. ರೈತರು ತಮ್ಮಖರ್ಚಿನಲ್ಲಿ ಮಣ್ಣು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಬಹುದು. –ವಿರುಪಾಕ್ಷಪ್ಪ ಬಳ್ಳಾರಿ, ಶಾಸಕ