ಜೀವ-ಜೀವನ ಬೇಕಾದರೆ ಕೋವಿಡ್ ಜಾಗೃತಿ ವಹಿಸಿ
Team Udayavani, Apr 12, 2021, 3:50 PM IST
ರಟ್ಟೀಹಳ್ಳಿ: ಇಂದಿನ ಆಧುನಿಕ ಜೀವನ ಶೈಲಿಯಲ್ಲಿಅಜಾಗರೂಕತೆಯಿಂದ ಎಷ್ಟೋ ಜನರು ನಮ್ಮಎದುರು ಮಣ್ಣು ಪಾಲಾಗಿದ್ದು, ಇಂತಹಪರಿಸ್ಥಿತಿಯಲ್ಲಿ ನಮಗೆ ಜೀವ ಮತ್ತು ಜೀವನಬೇಕಾದರೆ ಜಾಗ್ರತೆ ವಹಿಸಬೇಕೆಂದು ರಟ್ಟೀಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಕೃಷ್ಣಪ್ಪ ತೋಪಿನ ಹೇಳಿದರು.
ರಟ್ಟೀಹಳ್ಳಿ ಪೊಲೀಸ್ ಠಾಣೆ, ತಾಲೂಕುಆಡಳಿತ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ಜಾಗೃತಿ ಜಾಥಾಗೆ ಚಾಲನೆ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯ ಮತ್ತು ದೇಶದಲ್ಲಿ ಕೋವಿಡ್ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಮ್ಮ ಜೀವ ನಮ್ಮ ಕೈಯಲ್ಲಿದೆ. ಹಾಗಾಗಿ, ಸಾರ್ವಜನಿಕರುಎಷ್ಟು ಜಾಗ್ರತೆಯಿಂದ ಇರುತ್ತಾರೆ ಅಷ್ಟು ಒಳ್ಳೆಯದು.ನಾವು ಚೆನ್ನಾಗಿದ್ದು, ನಮ್ಮ ಸುತ್ತಮುತ್ತಲಿನ ಜನರುಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಮಾಸ್ಕ್ಧರಿಸಬೇಕು. ಸಾಮಾಜಿಕ ಅಂತರದೊಂದಿಗೆಕಾರ್ಯನಿರ್ವಹಿಸಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಉಮೇಶ ಗುಡ್ಡದ ಮಾತನಾಡಿ, ಪ್ರತಿ ಶುಕ್ರವಾರ ರಟ್ಟೀಹಳ್ಳಿಯಲ್ಲಿಸಂತೆ ನಡೆಸಲಾಗುತ್ತಿದ್ದು, ಅಂಗಡಿ ಹಾಕಿದಸ್ಥಳದ ಎದುರು ಸಾಮಾಜಿಕ ಅಂತರದ ಬಾಕ್ಸ್‌ಹಾಕಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಹೊರಗಡೆ ಬರಬೇಕು. ಈ ಬಗ್ಗೆ ಅರಿತು ವರ್ತಿಸಿದರೆ ಎಲ್ಲರಿಗೂ ಒಳ್ಳೆಯದು.ಇಲ್ಲದಿದ್ದರೆ ದಂಡ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೋವಿಡ್ ವೈರಸ್ ತೊಂದರೆಮತ್ತು ಅದರ ಜಾಗೃತಿ ಕ್ರಮಗಳ ಬಗ್ಗೆ ತಹಶೀಲ್ದಾರ್ ಕೆ.ಗುರುಬಸವರಾಜ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ
ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ
ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್ ಜಾನ್ಸನ್