Udayavni Special

155 ಜನರಿಗೆ ಸೋಂಕು-4 ಸಾವು

Team Udayavani, Sep 4, 2020, 5:55 PM IST

155 ಜನರಿಗೆ ಸೋಂಕು-4 ಸಾವು

ಹಾವೇರಿ: ಸರ್ಕಾರಿ ವೈದ್ಯ, ನೇತ್ರಾಧಿಕಾರಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಉದ್ಯೋಗಿಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಗುರುವಾರ 155 ಜನರಿಗೆ ಕೋವಿಡ್‌-19 ಪಾಸಿಟಿವ್‌ ದೃಢಪಟ್ಟಿದೆ ಹಾಗೂ 101 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 4792 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಗುರುವಾರದ ವರೆಗೆ 3262 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಗುರುವಾರದ ನಾಲ್ಕು ಪ್ರಕರಣ ಸೇರಿ ಈವರೆಗೆ 119 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 1411 ಸಕ್ರಿಯ ಪ್ರಕರಣಗಳಿವೆ. 1047 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ 364 ಸೋಂಕಿತರು ಕೋವಿಡ್‌ ಕೇರ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಹೆಲ್ತ್‌ ಸೆಂಟರ್‌, ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಸವಣೂರು ತಾಲೂಕು-09, ಬ್ಯಾಡಗಿ ತಾಲೂಕು-12, ಹಿರೇಕೆರೂರು ತಾಲೂಕು-19, ಹಾವೇರಿ ತಾಲೂಕು-21, ಹಾನಗಲ್ಲ ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ತಲಾ 24, ರಾಣೆಬೆನ್ನೂರು ತಾಲೂಕಿನಲ್ಲಿ-44 ಹಾಗೂ ಇತರೆ ಎರಡು ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ ಹಿರೇಕೆರೂರು ತಾಲೂಕು-02, ಹಾನಗಲ್‌ ತಾಲೂಕು-08, ಸವಣೂರು ತಾಲೂಕು-09, ಹಾವೇರಿ ತಾಲೂಕು-15, ಬ್ಯಾಡಗಿ ತಾಲೂಕು-17, ರಾಣೆಬೆನ್ನೂರು ತಾಲೂಕು-18, ಶಿಗ್ಗಾವಿ ತಾಲೂಕಿನ 32 ಜನರು ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್‌ ಝೋನ್‌ ಹಾಗೂ ಬಫರ್‌ ಝೋನ್‌ ಆಗಿ ಘೋಷಿಸಲಾಗಿದೆ. ಆಯಾ ತಾಲೂಕು ದಂಡಾಧಿಕಾರಿಗಳನ್ನು ಇನ್ಸಿಡೆಂಟಲ್‌ ಕಮಾಂಡರ್‌ ಆಗಿ ನೇಮಿಸಲಾಗಿದೆ.

ನಾಲ್ವರ ಸಾವು: ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮದ 70 ವರ್ಷದ ಮಹಿಳೆ(ಪಿ-377463), ಹಿರೇಕೆರೂರು ತಾಲೂಕು ದೊಡ್ಡಗುಬ್ಬಿ ಗ್ರಾಮದ 72 ವರ್ಷದ ಪುರುಷ(ಪಿ-311919), ಶಿಗ್ಗಾಂವ ತಾಲೂಕು ಚಾಕಾಪುರದ 45 ವರ್ಷದ ಪುರುಷ(ಪಿ-365115) ಹಾಗೂ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿಯ 70 ವರ್ಷದ ಪುರುಷ (ಪಿ-370786)  ಸೇರಿದಂತೆ ನಾಲ್ಕು ಜನರ ಮರಣವನ್ನು ಗುರುವಾರ ದೃಢೀಕರಿಸಲಾಗಿದೆ. ಕೋವಿಡ್‌ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ಟಾಪ್ ನ್ಯೂಸ್

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

dandeli

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

fcgdgr

ಕೋವಿಡ್ : ರಾಜ್ಯದಲ್ಲಿಂದು  789 ಪ್ರಕರಣ|1050 ಸೋಂಕಿತರು ಗುಣಮುಖ

dxfre

ಆನೆ ರಕ್ಷಣೆ ಕಾರ್ಯಾಚರಣೆ ವರದಿಗೆ ತೆರಳಿದ್ದ ಪತ್ರಕರ್ತ ಸಾವು ! ವಿಡಿಯೋ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

haveri news

ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಿಸಿ

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ghytyrty

ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ಗುಡಿಸಲಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ

ನಗರದ ಮನೆಮನೆ ಕಸದಿಂದ ರಸ

ನಗರದ ಮನೆಮನೆ ಕಸದಿಂದ ರಸ

vghftyt

ಅಪಘಾತದಲ್ಲಿ ಮೆದುಳು ನಿಷ್ಕ್ರಿಯ; ಪುತ್ರಿಯ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು 

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

dandeli

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.