ಬೆಳೆವಿಮೆ ಮಂಜೂರು; ಚೇತರಿಸಿಕೊಂಡ ರೈತರು

•6 ತಾಲೂಕಿಗೆ ಒಟ್ಟು 158 ಕೋ. ರೂ. ಬೆಳೆವಿಮೆ ಮಂಜೂರು•ಮುಂಗಾರು ಕೃಷಿ ಚಟುವಟಿಕೆ ಚುರುಕು

Team Udayavani, Jul 16, 2019, 10:30 AM IST

hv-tdy-1..

ಸಂಗ್ರಹ ಚಿತ್ರ

ಹಾವೇರಿ: ನಿರಂತರ ಬರದಿಂದ ತತ್ತರಿಸಿರುವ ಜಿಲ್ಲೆಯ ಅನ್ನದಾತರಿಗೆ ಬೆಳೆ ವಿಮೆ ಹಣ ಮಂಜೂರಿಯಾಗಿದ್ದು, ಇದರಿಂದಾಗಿ ಅನ್ನದಾತರು ತುಸು ಚೇತರಿಸಿಕೊಂಡು, ಈ ಬಾರಿ ಮತ್ತೆ ಮುಂಗಾರು ಹಂಗಾಮಿನ ಕೃಷಿಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಿದೆ.

ಹಿರೇಕೆರೂರ ಹೊರತುಪಡಿಸಿ ಉಳಿದ ಆರು ತಾಲೂಕುಗಳಲ್ಲಿ ಪ್ರಮುಖ ಹಾಗೂ ಇತರ ಬೆಳೆಗಳು ಸೇರಿ ಒಟ್ಟು 158.38ಕೋಟಿ ರೂ.ಗಳ ವಿಮೆ ಬಂದಿದ್ದು, ಇದು 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆಯಾಗಿದೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಣಿಬೆನ್ನೂರ ತಾಲೂಕು ಬರಪೀಡಿತವಾಗಿದ್ದರಿಂದ ಅಲ್ಲಿನ 23,913ರೈತರಿಗೆ 44.74ಕೋಟಿ ರೂ.ಗಳ ವಿಮೆ ಮಂಜೂರಾಗಿದೆ. ಇದು ಜಿಲ್ಲೆಯಲ್ಲಿಯೇ ಅತಿಹೆಚ್ಚು ವಿಮೆ ಹಣ ಮಂಜೂರಾದ ತಾಲೂಕಾಗಿದೆ. ಹಾವೇರಿ ತಾಲೂಕಿನ 10,619 ರೈತರಿಗೆ 15.36ಕೋಟಿ ರೂ. ವಿಮೆ ಮಂಜೂರಾಗಿದ್ದು ಇದು ಜಿಲ್ಲೆಯಲ್ಲಿ ಅತಿಕಡಿಮೆ ವಿಮೆ ಮಂಜೂರಾಗಿರುವ ತಾಲೂಕಾಗಿದೆ.

ತಾಲೂಕಾವಾರು ವಿವರ: ಬ್ಯಾಡಗಿ ತಾಲೂಕಿನ 8,238 ರೈತರಿಗೆ ಸಂಬಂಧಿಸಿ 16,96,02,220 ರೂ., ಹಾನಗಲ್ಲ ತಾಲೂಕಿನ 15,092 ರೈತರಿಗೆ ಸಂಬಂಧಿಸಿ 35,68,58,453 ರೂ., ಹಾವೇರಿ ತಾಲೂಕಿನ 10,169 ರೈತರಿಗೆ ಸಂಬಂಧಿಸಿ 15,36,48,544ರೂ., ರಾಣಿಬೆನ್ನೂರ ತಾಲೂಕಿನ 23,913 ರೈತರಿಗೆ ಸಂಬಂಧಿಸಿ 44,74,75,356 ರೂ., ಸವಣೂರ ತಾಲೂಕಿನ 5,190 ರೈತರಿಗೆ ಸಂಬಂಧಿಸಿ 14,07,55,191ರೂ. ಹಾಗೂ ಶಿಗ್ಗಾವಿ ತಾಲೂಕಿನ 10,374 ರೈತರಿಗೆ ಸಂಬಂಧಿಸಿ 31,54,80,864 ರೂ. ಹೀಗೆ ಒಟ್ಟು 72,976 ರೈತರಿಗೆ ಸಂಬಂಧಿಸಿ 158,38,20,630 ರೂ. ಬೆಳೆವಿಮೆ ಜಿಲ್ಲೆಗೆ ಈ ವರೆಗೆ ಮಂಜೂರಾಗಿದೆ.

ಒಂದು ಬೆಳೆಯನ್ನು ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 50 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದರೆ ಅದು ವಿಮೆ ಲೆಕ್ಕಾಚಾರದ ಪ್ರಕಾರ ಪ್ರಮುಖ ಬೆಳೆಯಾಗುತ್ತದೆ. ಒಂದು ಹೋಬಳಿ ವ್ಯಾಪ್ತಿಯಲ್ಲಿ ಕನಿಷ್ಠ 125ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದರೆ ಅದನ್ನು ಇತರೆ ಬೆಳೆ ಎಂದು ಪರಿಗಣಿಸಿ ವಿಮೆ ನೀಡಲಾಗುತ್ತದೆ. ಈ ಪ್ರಕಾರವಾಗಿ ಬ್ಯಾಡಗಿ, ಹಾನಗಲ್ಲ, ಹಾವೇರಿ, ರಾಣಿಬೆನ್ನೂರ ತಾಲೂಕುಗಳಲ್ಲಿ ಪ್ರಮುಖ ಬೆಳೆಗೆ ಹೆಚ್ಚು ರೈತರಿಗೆ ವಿಮೆ ಬಂದಿದ್ದರೆ, ಶಿಗ್ಗಾವಿ ಹಾಗೂ ಸವಣೂರ ತಾಲೂಕಿನಲ್ಲಿ ಇತರೆ ಬೆಳೆಗಳಿಗೆ ಸಂಬಂಧಿಸಿ ವಿಮೆ ಬಂದಿದೆ.

ಜಿಲ್ಲೆಯ ಆರು ತಾಲೂಕುಗಳಿಗೆ ವಿಮೆ ಹಣ ಮಂಜೂರಾಗಿದೆ. ಆದರೆ, ಹಿರೇಕೆರೂರ ತಾಲೂಕಿನಲ್ಲಿ ಈ ಬಾರಿ ರಟ್ಟಿಹಳ್ಳಿಯೂ ಹೊಸ ತಾಲೂಕಾಗಿರುವುದರಿಂದ ವಿಮೆ ವಿಂಗಡಣೆಯಲ್ಲಿ ತಾಂತ್ರಿಕ ಅಡೆತಡೆಗಳಾಗಿರುವುದರಿಂದ ಹಿರೇಕೆರೂರ ತಾಲೂಕಿನ ರೈತರಿಗೆ ಇನ್ನೂ ಬೆಳೆ ವಿಮೆ ಬಂದಿಲ್ಲ. ಹಿರೇಕೆರೂರು ತಾಲೂಕಿನ ರೈತರು ಬೆಳೆ ವಿಮೆಗಾಗಿ ಕಾಯುತ್ತಿದ್ದಾರೆ.

•ಎಚ್.ಕೆ. ನಟರಾಜ್‌

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.