ಸಾಂಸ್ಕೃತಿಕ ಚಟುವಟಿಕೆ ಬದುಕಿನ ಭಾಗ

Team Udayavani, Sep 2, 2019, 12:43 PM IST

ರಾಣಿಬೆನ್ನೂರ: ವಲಯ ಮಟ್ಟದ ಕಾಲೇಜುಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯನ್ನು ಆರ್‌.ಬಿ.ತೋಟಗೇರ ಉದ್ಘಾಟಿಸಿದರು.

ರಾಣಿಬೆನ್ನೂರ: ಹಿಂದಿನ ಕಾಲಕ್ಕೆ ತುಲನೆ ಮಾಡಿದರೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಂಪನ್ಮೂಲಗಳ ಕೊರತೆ ಇಲ್ಲ. ಆದರೆ, ಅದನ್ನು ಸದ್ಬಳಕೆ ಮಾಡಿಕೊಂಡು ದೇಶದ ಮಾನವಸಂಪನ್ಮೂಲವಾಗಿ ಹೊರ ಹೊಮ್ಮಬೇಕಿದೆ ಎಂದು ನಗರಸಭೆ ಪೌರಾಯುಕ್ತ ಡಾ| ಎನ್‌. ಮಹಾಂತೇಶ ಹೇಳಿದರು.

ಶನಿವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌ ಹಾಗೂ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು, ಏಕಾಗ್ರತೆ ಮೈಗೂಡಿಸಿಕೊಂಡು ಛಲದಿಂದ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಎಂತಹ ದೊಡ್ಡ ಸ್ಥಾನಕ್ಕೂ ಹೋಗಬಹುದು. ಹೆತ್ತವರ ಕನಸು ನನಸು ಮಾಡಿ, ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.

ಧಾರವಾಡದ ಡಾ| ಗೋವಿಂದರಾಜ ತಲಕೋಡ ಮಾತನಾಡಿ, ಟಿಕ್‌ಟಾಕ್‌ಗಳಂತಹ ಮೊಬೈಲ್ ಆ್ಯಪ್‌ಗ್ಳಿಗೆ ಮೊರೆ ಹೋದ ಇಂದಿನ ಯುವಜನರು, ಹೆಚ್ಚು ಹೊತ್ತು ಅದರಲ್ಲೇ ಕಾಲ ಕಳೆಯುತ್ತಿದ್ದಾರೆ, ಇವುಗಳಿಂದ ಹೊರ ಬಂದು ಪುಸ್ತಕಗಳನ್ನು ಓದುವ ಗೀಳು ಹಚ್ಚಿಕೊಂಡಲ್ಲಿ ಜೀವನದಲ್ಲಿ ಸಾರ್ಥಕ ಬದುಕು ಕಟ್ಟಿಕೊಳ್ಳಬಹುದು ಎಂದರು.

ಕನ್ನಡ ಕೋಗಿಲೆ ಸೀಜನ್‌-2ರ ವಿಜೇತ ಖಾಸಿಂ ಅಲಿ ಮಾತನಾಡಿ, ಕಷ್ಟಗಳು-ನೋವುಗಳು ಪ್ರತಿಯೊಬ್ಬರಿಗೂ ಇವೆ. ನಮ್ಮ ಕಷ್ಟಗಳನ್ನೆಲ್ಲ ನಾವೇ ಮೆಟ್ಟಿ ನಿಂತಾಗ ಭವ್ಯ ಜೀವನದ ಆಶಾ ಕಿರಣಗಳು ನಮ್ಮನ್ನು ಮುತ್ತಿಕೊಳ್ಳಲಿವೆ. ಆವಾಗ ಹೊಸ ಜೀವನಕ್ಕೆ ದಾರಿ ದೊರೆಯುತ್ತದೆ ಎಂದರು.

ಕೊಡದ ಉಪನ್ಯಾಸಕ ಪ್ರಭುಲಿಂಗಪ್ಪ ಹಲಗೇರಿ ಅವರು, ತಮ್ಮ ಹಾಸ್ಯ ಚಟಾಕಿಗಳ ಮೂಲಕ ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳಿಕೊಟ್ಟರು. ಪ್ರಾಂಶುಪಾಲ ಎಲ್.ವಿ. ಸಂಗಳದ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಜೆ.ಐ.ಉಕ್ಕುಂದ, ಪ್ರಾಧ್ಯಾಪಕ ಡಾ| ಬಿ.ರವಿ, ಡಾ| ಅರುಣಕುಮಾರ ಚಂದನ, ಗೀತಾ ಕೋಟೆಣ್ಣವರ, ಡಾ| ಕೆ.ರಾಘವೇಂದ್ರ, ಪ್ರೊ| ಆರ್‌.ಎಫ್‌.ಅಯ್ಯಗೌಡ್ರ, ಪ್ರೊ| ಶೋಭಾ ಸಾವಕಾರ ಸೇರಿದಂತೆ ಮತ್ತಿತರರು ಇದ್ದರು.

ಡಾ| ಅರುಣಕುಮಾರ ಚಂದನ್‌ ಸ್ವಾಗತಿಸಿದರು. ಡಾ| ವಿಜಯಲಕ್ಷಿ ್ಮೕ ಆರ್‌. ಪ್ರಾಸ್ತಾವಿಕ ಮಾತನಾಡಿದರು. ಶ್ರುತಿ ಬಿ.ಎನ್‌. ನಿರೂಪಿಸಿದರು. ಡಾ| ಸಿದ್ದಲಿಂಗಮ್ಮ ಬಿ.ಜಿ. ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಹಾವೇರಿ: ಅಕ್ಷರ ಜ್ಞಾನದ ಜತೆಗೆ ಇಂದಿನ ಕಂಪ್ಯೂಟರ್‌ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್‌ ಜ್ಞಾನ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಾಕ್ಷರತಾ ಮಿಷನ್‌ ಗಮನಹರಿಸಬೇಕು...

  • ಹಾವೇರಿ: ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು...

  • ಬ್ಯಾಡಗಿ: ಇಲ್ಲಿನ ಮುಖ್ಯರಸ್ತೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದು ಸೇರಿದಂತೆ ಆಣೂರ ಮತ್ತು ಬುಡಪನಹಳ್ಳಿ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ...

  • ಹಾವೇರಿ: ಜಿಲ್ಲೆಯ ರಾಣಿಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಸೆ.23ರಿಂದಲೇ ಅ ಧಿಸೂಚನೆ ಹೊರಡಿಸಲಾಗುವುದು....

  • ರಾಣಿಬೆನ್ನೂರ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾನಗಲ್ಲ ತಾಲೂಕಿನ ಶಿಗ್ಗಿಹಳ್ಳಿ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ಪ್ರಮುಖ್ಯತೆ ಕುರಿತ ತರಬೇತಿ...

ಹೊಸ ಸೇರ್ಪಡೆ