ಕೃಷಿ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

Team Udayavani, Jun 16, 2019, 2:16 PM IST

ಬ್ಯಾಡಗಿ: ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಬೇಜವಾಬ್ದಾರಿ ವರ್ತನೆಗೆ ಬೇಸತ್ತು ರೈತರು ಪ್ರತಿಭಟಿಸಿದರು.

ಬ್ಯಾಡಗಿ: ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಕೃಷಿ ಇಲಾಖೆ ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತರು ಹಾಗೂ ಸಾರ್ವಜನಿಕರು ಕಚೇರಿ ಎದುರು ಪ್ರತಿಭಟಿಸಿದರು.

ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರ ಹಾಗೂ ಇನ್ನಿತರ ಕಾರ್ಯಗಳಿಗೆ ಬೆಳಗ್ಗೆ 10:20ಕ್ಕೆ ಕಚೇರಿಗೆ ಆಗಮಿಸಿದ್ದ ರೈತರಿಗೆ ಕಚೇರಿಯಲ್ಲಿ ಡಿ. ದರ್ಜೆ ನೌಕರರನ್ನು ಬಿಟ್ಟರೆ ಯಾರೊಬ್ಬರೂ ಇರದೇ ಇರುವುದು ಶಾಕ್‌ ನೀಡಿತ್ತು. ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕಾದುಕುಳಿತವರಿಗೆ 11.40ಗಂಟೆಯಾದರೂ ಕೃಷಿ ಅಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಕಚೇರಿಗೆ ಬರದೇ ಇರುವುದು ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿತು. ದೂರವಾಣಿ ಮೂಲಕ ಕರೆ ಮಾಡಿ ವಿಚಾರಿಸಿದಾಗಲೂ ಹಾರಿಕೆ ಉತ್ತರ ನೀಡಿದ್ದರಿಂದ ರೈತರ ಆಕ್ರೋಶದ ಕಟ್ಟೆ ಒಡೆಯಿತು.

ಕೃಷಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕಚೇರಿ ಎದುರು ರೈತರು ಪ್ರತಿಭಟಿಸಿದರು. ರೈತ ರಹಮತ ಹಿತ್ತಲಮನಿ ಮಾತನಾಡಿ, ಈಗಾಗಲೇ ಗೋವಿನಜೋಳ ಬಿತ್ತನೆ ಮಾಡಿದ್ದು ಉಳಿದ 3 ಎಕರೆಯಲ್ಲಿ ಶೇಂಗಾ ಬಿತ್ತನೆ ಬೀಜಕ್ಕಾಗಿ ವಾರದಿಂದ ಅಲೆದಾಡುತ್ತಿದ್ದೇನೆ. 3 ದಿನಗಳಿಂದ ಕಚೇರಿಗೆ 10.30ಕ್ಕೆ ಬರುತ್ತಿದ್ದೇನೆ. ಯಾವೊಬ್ಬ ಅಧಿಕಾರಿಯೂ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಪ್ರಶ್ನಿಸಿದರೆ ನಮ್ಮ ಮೇಲೆಯೇ ದಬ್ಟಾಳಿಕೆ ನಡೆಸುತ್ತಿದ್ದಾರೆ. ಇಂಥ ಬೇಜವಾಬ್ದಾರಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೂಡಲೇ ಜಿಲ್ಲಾ ಕೃಷಿ ಅಧಿಕಾರಿಗಳು ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ರಾಣಿಬೆನ್ನೂರ: ಸಂಸ್ಕಾರವು ಭಾರತದಜೀವಾಳವಾಗಿದ್ದು, ಅದರಲ್ಲಿ ಕರಿಬಸವೇಶ್ವರ ಕ್ಷೇತ್ರ ಒಂದಾಗಿದೆ. ಸ್ವಾಮಿಯು ನೊಂದು-ಬೆಂದು ಬಂದವರ ಬಾಳಿಗೆ ಅಭಯ ನೀಡುತ್ತಿದ್ದು,...

  • ಎಚ್‌.ಕೆ. ನಟರಾಜ ಹಾವೇರಿ: ಮಳೆ ಹಾಗೂ ನೆರೆ ಕಾರಣದಿಂದ ಈ ಬಾರಿ ಮಳೆಗಾಲದಲ್ಲಿ ಗ್ರಾಮೀಣ ರಸ್ತೆಗಳಿಗೆ ಹೆಚ್ಚು ಧಕ್ಕೆಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಂದಾಜು...

  • ಹಾವೇರಿ: ಹಿರೇಕೆರೂರು ಹಾಗೂ ರಾಣಿಬೆನ್ನೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ತಿಂಗಳಿಂದ ಸುತ್ತಾಡಿದ ಅಭ್ಯರ್ಥಿಗಳು ಮತದಾನದ...

  • ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್‌ಐವಿ(ಏಡ್ಸ್‌) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ....

  • ಹಾವೇರಿ: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ವಿರೋಧಿ ಸಿ, ಪಶುವೈದ್ಯೆ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಡೆದ ಎಂಟು ವರ್ಷದ ಬಾಲಕಿ ಮೇಲಿನ ಹತ್ಯಾಚಾರ...

ಹೊಸ ಸೇರ್ಪಡೆ