Udayavni Special

ನಾಡದೊರೆ ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತರು

Team Udayavani, Aug 31, 2019, 11:32 AM IST

hv-tdy-1

ಹಾವೇರಿ: ಪ್ರಸಕ್ತ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆ. 31ರಂದು ಆಗಮಿಸುತ್ತಿರುವ ಬಿ.ಎಸ್‌. ಯಡಿಯೂರಪ್ಪ ಭೇಟಿಯಿಂದ ಜಿಲ್ಲೆಯ ನೆರೆ ನಿರ್ವಹಣೆಗೆ ಹೆಚ್ಚಿನ ಅನುದಾನ, ಹೆಚ್ಚಿನ ಸೌಲಭ್ಯ ಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.

ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ನೂರಾರು ಕೋಟಿ ರೂ.ಗಳಷ್ಟು ಆಸ್ತಿಪಾಸ್ತಿ ಹಾನಿಯಾಗಿದ್ದು, ನಷ್ಟ ಪರಿಹಾರ ಒದಗಿಸುವುದು, ಮೂಲಸೌಲಭ್ಯ ಕಲ್ಪಿಸುವುದು ಮತ್ತು ಮನೆ ಕಳೆದುಕೊಂಡವರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಪ್ರಥಮ ಹಂತವಾಗಿ ಜಿಲ್ಲೆಗೆ 20 ಕೋಟಿ ರೂ. ಬಿಡುಗಡೆಯಾಗಿದ್ದು, ನೆರೆಪೀಡಿತ ಗ್ರಾಮಗಳು ಇನ್ನಷ್ಟು ಅನುದಾನದ ನಿರೀಕ್ಷೆಯಲ್ಲಿವೆ.

ಜಿಲ್ಲೆಯಲ್ಲಿ ಹರಿದ ತುಂಗಭದ್ರಾ, ವರದಾ ನದಿಗಳ ಭೀಕರ ಪ್ರವಾಹದ ಪರಿಣಾಮ ಹಲವು ಗ್ರಾಮಗಳ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ನದಿ ದಂಡೆಯಲ್ಲಿರುವ ಗ್ರಾಮಗಳನ್ನು ಸ್ಥಳಾಂತರಿಸಿ ನವಗ್ರಾಮ ನಿರ್ಮಿಸುವಂತೆ ನೆರೆ ಸಂತ್ರಸ್ತರಿಂದ ಒತ್ತಾಯ ಕೇಳಿಬರುತ್ತಿದೆ. ನೆರೆ ಹಾವಳಿಯಿಂದ ಹಾವೇರಿ, ಹಾನಗಲ್ಲ, ಸವಣೂರು ತಾಲೂಕಿನ ವರದಾ ಹಾಗೂ ಧರ್ಮಾ ನದಿ ದಂಡೆಯ ಬಹುತೇಕ ಗ್ರಾಮಗಳು ಜಲಾವೃತದಿಂದ ಸಂಪರ್ಕ ಕಳೆದುಕೊಂಡು ನಡುಗಡ್ಡೆಗಳಾಗಿದ್ದವು. ಇಲ್ಲಿ ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಪ್ರವಾಹದ ರೌದ್ರ ನರ್ತನದಿಂದ ಮನೆಗಳು, ರಸ್ತೆ, ಶಾಲೆ, ದೇವಸ್ಥಾನ ಕುಸಿದು ಪ್ರವಾಹ ಪೀಡಿತ ಗ್ರಾಮಗಳು ಪರಿಹಾರ ಕಾರ್ಯದ ನಿರೀಕ್ಷೆಯಲ್ಲಿವೆ. ಈ ಕಾರಣದಿಂದಾಗಿ ಮುಖ್ಯಮಂತ್ರಿಯವರ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಅಪಾರ ಹಾನಿ: ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ 22 ಗ್ರಾಮಗಳು ಜಲಾವೃತಗೊಂಡಿದ್ದವು. ರೈತನೊಬ್ಬ ನದಿಯಲ್ಲಿ ಕೊಚ್ಚಿ ಹೋದರೆ, 134 ಜಾನುವಾರುಗಳ ಜೀವ ಹಾನಿಯಾಗಿದೆ. ಒಟ್ಟು 15387 ಮನೆಗಳು ಹಾನಿಯಾಗಿವೆ. 123065 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿ ಅಂದಾಜು 75092 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. 13039 ಹೆಕ್ಟೇರ್‌ ಮಣ್ಣು ಹಾನಿಯಾಗಿದ್ದು 3592ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. 13649 ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು 1719 ಲಕ್ಷ ರೂ.ಗಷ್ಟು ನಷ್ಟವಾಗಿದೆ. 228 ಹೆಕ್ಟೇರ್‌ ತೋಟಗಾರಿಕೆ ಕೃಷಿ ಭೂಮಿಗೆ ಹಾನಿಯಾಗಿದ್ದು ಅಂದಾಜು 45.53ಲಕ್ಷ ರೂ.ಗಳಷ್ಟು ನಷ್ಟವಾಗಿದೆ.

ಇನ್ನು ಮೂಲಭೂತ ಸೌಕರ್ಯಗಳಿಗೆ ಸಂಬಂಸಿ 39285 ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಇದರಲ್ಲಿ 1444 ಪ್ರಾಥಮಿಕ ಶಾಲಾ ಕೊಠಡಿಗಳು, 275 ಅಂಗನವಾಡಿ ಕಟ್ಟಡಗಳು, 49 ಕಿಮೀ ರಾಜ್ಯ ಹೆದ್ದಾರಿ ರಸ್ತೆ, 466ಕಿಮೀ ಮುಖ್ಯ ಜಿಲ್ಲಾ ರಸ್ತೆಗಳು, 65 ಸೇತುವೆಗಳು, 32 ಸರ್ಕಾರಿ ಕಟ್ಟಡಗಳು, 875 ಕಿಮೀ ಗ್ರಾಮೀಣ ರಸ್ತೆಗಳು, 69 ಸಣ್ಣ ಸೇತುವೆಗಳು, 150 ಕುಡಿಯುವ ನೀರಿನ ಯೋಜನೆಗಳು, 39 ಕೆರೆ ಮತ್ತು ಕುಡಿಯುವ ನೀರಿನ ಮೂಲಸೌಲಭ್ಯಗಳು, 24 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 111 ಸಣ್ಣ ನೀರಾವರಿ ಯೋಜನೆಗಳು, 139 ಬೃಹತ್‌ ನೀರಾವರಿ ಯೋಜನೆಗಳು, 47 ಖಾಸಗಿ ಕಟ್ಟಡಗಳು ಹಾಗೂ 375 ಲಕ್ಷ ರೂ.ಗಳ ವಿದ್ಯುತ್‌ ಉಪಕರಣಗಳು ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿದೆ. ಹೀಗೆ ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು ಮುಖ್ಯ ಮಂತ್ರಿಯವರ ಭೇಟಿಯಿಂದ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಜಿಲ್ಲೆಗೆ ಸಿಗಬಹುದು ಎಂದು ಜನತೆ ನಿರೀಕ್ಷಿಸಿದೆ.

ಮನೆಗಾಗಿ ಒತ್ತಡ: ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಬರೋಬರಿ 15387 ಮನೆಗಳಿಗೆ ಹಾನಿಯಾಗಿದ್ದು, ಎಲ್ಲ ನೆರೆಪೀಡಿತ ಗ್ರಾಮಗಳ ಜನರು ಮೊದಲ ಆದ್ಯತೆಯಾಗಿ ಮನೆಯ ಬೇಡಿಕೆ ಮುಂದಿಡುತ್ತಿದ್ದಾರೆ. ಮನೆಗಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನು ಕೆಲವು ಕಡೆ ಶಾಶ್ವತ ಪರಿಹಾರಕ್ಕಾಗಿ ನವಗ್ರಾಮ ನಿರ್ಮಾಣದ ಬೇಡಿಕೆ ಇಡುತ್ತಿದ್ದಾರೆ.

ಅಧಿಕಾರದಲ್ಲಿದ್ದವರು ನೆರೆ ಹಾಗೂ ಅತಿವೃಷ್ಟಿಯ ಪರಿಣಾಮವನ್ನು ಸಮರ್ಥವಾಗಿ ಎದುರಿಸಿ, ಜನರನ್ನು ಸಂತೈಸಲೇಬೇಕಾಗಿದ್ದು ಇದಕ್ಕಾಗಿ ನೂರಾರು ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ನೂತನ ಸಚಿವ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯಲ್ಲಿ ಆಗಿರುವ ನೆರೆ ನಷ್ಟವನ್ನು ಮುಖ್ಯಮಂತ್ರಿಯವರಿಗೆ ಯಾವ ರೀತಿ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಅನುದಾನಗಿಟ್ಟಿಸಿಕೊಳ್ಳುತ್ತಾರೆ, ಅದಕ್ಕೆ ಮುಖ್ಯಮಂತ್ರಿಯವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಸಹ ಕುತೂಹಲ ಕೆರಳಿಸಿದೆ.

•ಎಚ್.ಕೆ. ನಟರಾಜ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

vಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

ಡ್ರಗ್ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೇಶ್ ಕೊಡಿಯೇರಿ ಇಡಿ ವಶಕ್ಕೆ

ಡ್ರಗ್ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೇಶ್ ಕೊಡಿಯೇರಿ ಇಡಿ ವಶಕ್ಕೆ

ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ

ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ

ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

ಸಚಿವರು, ಸಂಸದರ ಫೋಟೊಗಳನ್ನು ರೂಪಾಯಿ ಬೆಲೆಗೆ ಹರಾಜು ಹಾಕಿ ವಾಟಾಳ್ ನಾಗರಾಜ್  ಪ್ರತಿಭಟನೆ

ಸಚಿವರು, ಸಂಸದರ ಫೋಟೊಗಳನ್ನು ರೂಪಾಯಿ ಬೆಲೆಗೆ ಹರಾಜು ಹಾಕಿ ವಾಟಾಳ್ ನಾಗರಾಜ್ ಪ್ರತಿಭಟನೆ

ಪಶ್ಚಿಮಬಂಗಾಳ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸುಕುಮಾರ್ ವಿಧಿವಶ

ಪಶ್ಚಿಮಬಂಗಾಳ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸುಕುಮಾರ್ ವಿಧಿವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರಂತರ ಮಳೆಗೆ ಬೆಳೆ ಹಾನಿ: ಎರಡನೇ ಬಾರಿಗೆ ಬಿತ್ತನೆಗೆ ರೈತರ ಅಣಿ

ನಿರಂತರ ಮಳೆಗೆ ಬೆಳೆ ಹಾನಿ: ಎರಡನೇ ಬಾರಿಗೆ ಬಿತ್ತನೆಗೆ ರೈತರ ಅಣಿ

ಪೊಲೀಸ್‌ ತನಿಖಾಧಿಕಾರಿಗಳಿಗೆ ಕಾನೂನು ಜಾಗೃತಿ

ಪೊಲೀಸ್‌ ತನಿಖಾಧಿಕಾರಿಗಳಿಗೆ ಕಾನೂನು ಜಾಗೃತಿ

ಆಹಾರ ಉದ್ದಿಮೆಗಳ ಅವಕಾಶ ಸದ್ಬಳಕೆ ಅಗತ್ಯ

ಆಹಾರ ಉದ್ದಿಮೆಗಳ ಅವಕಾಶ ಸದ್ಬಳಕೆ ಅಗತ್ಯ

ಅನುದಾನ ರಹಿತ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸಿ

ಅನುದಾನ ರಹಿತ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸಿ

hv-tdy-1

ಪ್ರೊ| ಸಂಕನೂರಗೆ ಮತ ನೀಡಿ ಗೆಲ್ಲಿಸಿ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಬೆಳಪು ನಲ್ಲಿ ಪೊಲೀಸ್‌ ಸಂಶೋಧನಾ ಕೇಂದ್ರ, ವಸತಿ ಗೃಹ ನಿರ್ಮಾಣಕ್ಕೆ ಚಿಂತನೆ

ಬೆಳಪು ನಲ್ಲಿ ಪೊಲೀಸ್‌ ಸಂಶೋಧನಾ ಕೇಂದ್ರ, ವಸತಿ ಗೃಹ, ಕವಾಯತು ಮೈದಾನ ನಿರ್ಮಾಣಕ್ಕೆ ಚಿಂತನೆ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

vಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

ಡ್ರಗ್ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೇಶ್ ಕೊಡಿಯೇರಿ ಇಡಿ ವಶಕ್ಕೆ

ಡ್ರಗ್ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೇಶ್ ಕೊಡಿಯೇರಿ ಇಡಿ ವಶಕ್ಕೆ

ಗೋವಾದಲ್ಲಿ ಗಗನಕ್ಕೇರಿದ ಈರುಳ್ಳಿ ದರ! ಪಡಿತರದ ಜೊತೆ ಈರುಳ್ಳಿ ನೀಡಲು ಸರಕಾರದ ಚಿಂತನೆ

ಗೋವಾದಲ್ಲಿ ಗಗನಕ್ಕೇರಿದ ಈರುಳ್ಳಿ ದರ! ಪಡಿತರದ ಜೊತೆ ಈರುಳ್ಳಿ ನೀಡಲು ಸರಕಾರದ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.