ಆರು ಮಂದಿಗೆ ಜಾನಪದ ವಿವಿ ಗೌರವ ಡಾಕ್ಟರೆಟ್
Team Udayavani, Nov 28, 2022, 11:33 PM IST
ಶಿವರಾಮ ಶೆಟ್ಟಿ, ಜೀವನ್ ರಾಂ
ಹಾವೇರಿ: ಗೋಟಗೋಡಿ ಜಾನಪದ ವಿವಿ 6 ಮತ್ತು 7ನೇ ವಾರ್ಷಿಕ ಘಟಿಕೋತ್ಸವವನ್ನು ಡಿ.1ರಂದು ವಿವಿ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, 6 ಮಂದಿ ಗಣ್ಯರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುವುದು ಎಂದು ಜಾನಪದ ವಿವಿ ಕುಲಪತಿ ಪ್ರೊ| ಟಿ. ಎಂ. ಭಾಸ್ಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಣೆಬೆನ್ನೂರು ತಾಲೂಕು ಅರೆಮಲ್ಲಾಪೂರ ಗ್ರಾಮದ ಜಾನಪದ ಕ್ಷೇತ್ರದ ಕೆಂಚಪ್ಪ ಚನ್ನಬಸಪ್ಪ ನಾಗರಜ್ಜಿ, ದಕ್ಷಿಣ ಕನ್ನಡ ಜಿಲ್ಲೆ ಹಳೆಗೇಟ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಜೀವನ್ ರಾಂ ಸುಳ್ಯ ಹಾಗೂ ಉಡುಪಿ ಜಿಲ್ಲೆಯ ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 6ನೇ ವಾರ್ಷಿಕ ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಅಂತಾರಾಷ್ಟ್ರೀಯ ಕಲಾವಿದ ಯಶವಂತ ಸರದೇಶಪಾಂಡೆ, ಗದುಗಿನ ಪಾರಂಪರಿಕ ವೈದ್ಯ ಬಸವರಾಜು ಮಲರಾಜಪ್ಪ ಕಂಚಿಗೇರಿ, ಬಾಗಲಕೋಟೆಯ ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ ಸುಗೇತಕರ್ ಅವರಿಗೆ 7ನೇ ವಾರ್ಷಿಕ ಘಟಿಕೋತ್ಸವದ ಡಾಕ್ಟರೆಟ್ ಪ್ರದಾನ ಮಾಡಲಾಗುವುದು.
ಅಲ್ಲದೆ, 2020ನೇ ಸಾಲಿನ ಎರಡು ಮತ್ತು 2021ನೇ ಸಾಲಿನ ಮೂರು ವಿದ್ಯಾರ್ಥಿಗಳು ಸೇರಿ ಐವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೈನುಗಾರಿಕೆಗೆ ಸಹಾಯಧನ ವಿತರಿಸಲು ಮುಂದಾಗಿ; ರಘುನಂದನ್ ಮೂರ್ತಿ
ಹಸೆಮಣೆ ಏರಿದಾಕ್ಷಣ ರಕ್ತದಾನ ಮಾಡಿದ ನವಜೋಡಿ; ಲಗ್ನಪತ್ರಿಕೆಯಲ್ಲಿ ಮಾಹಿತಿ
ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ
ಕ್ಷೇತ್ರದ ಜನತೆಯ ಎದುರು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಚಿರಸ್ಮರಣೀಯ : ಸಿಎಂ ಬೊಮ್ಮಾಯಿ
ಬಿಜೆಪಿ ಲೋಕಾ ಅಸ್ತ್ರ: ಕಾಂಗ್ರೆಸ್ನ 59 ಪ್ರಕರಣ ಲೋಕಾಯುಕ್ತಕ್ಕೆ: ಬೊಮ್ಮಾಯಿ