Udayavni Special

ಸಾವಿನ ಸಂಖ್ಯೆ ಮರೆಮಾಚಿದ ಸರ್ಕಾರ:ಬಸವರಾಜ ಶಿವಣ್ಣವನರ

ಇಬ್ಬರು ಮುಖಂಡರ ಜಗಳದಲ್ಲಿ ಕಾರ್ಯಕರ್ತರು ಬಡವಾಗುತ್ತಿದ್ದಾರೆ.

Team Udayavani, Jul 20, 2021, 6:55 PM IST

Basava

ಬ್ಯಾಡಗಿ: ಕೋವಿಡ್‌ನಿಂದಾಗಿ ಮೃತ ಪಟ್ಟಿರುವವರ ಅಂಕಿ ಸಂಖ್ಯೆಗಳ ನಿಜಾಂಶವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಚ್ಚಿಡುವ ಮೂಲಕ ಬಿಜೆಪಿ ದೇಶದ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣವನರ ಆರೋಪಿಸಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ನಡೆದ ಬ್ಯಾಡಗಿ ಹಾಗೂ ಕಾಗಿನೆಲೆ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆ, ಕೋವಿಡ್‌ ಸಹಾಯ ಹಸ್ತ ಹಾಗೂ ಕಾಂಗ್ರೆಸ್‌ ಪ್ರಜಾಪ್ರತಿನಿಧಿ  ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಕೇವಲ 34 ಸಾವಿರ ಜನರು ಸಾವನ್ನಪ್ಪಿದ್ದಾಗಿ ಸರಕಾರ ಹೇಳುತ್ತಿದೆ. ಆದರೆ, ಇದು ಶುದ್ಧ ಸುಳ್ಳು. ಕನಿಷ್ಟ 3 ಲಕ್ಷ ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಆದರೆ ನಿಜಾಂಶವನ್ನು ಮುಚ್ಚಿಡುತ್ತಿರುವ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಗ್ರಾಮಕ್ಕೂ ತೆರಳಿ ಮಾಹಿತಿ ಸಂಗ್ರಹ ಮಾಡಿ, ರಾಜ್ಯದ ಜನತೆಯ ಮುಂದೆ ನಿಜವಾದ ಅಂಕಿ ಸಂಖ್ಯೆಗಳನ್ನಿಟ್ಟು ಬಿಜೆಪಿ ಬಣ್ಣ ಬಯಲು ಮಾಡಲಿದ್ದಾರೆ ಎಂದರು.

ಮಹಿಳೆಯರ ಬಲ ಬೇಕಿದೆ: ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ, ಗ್ರಾಮ ಮಟ್ಟದಲ್ಲಿ ಮಹಿಳೆಯರನ್ನು ಸೇರಿಸಿ ಪಕ್ಷ ಸಂಘಟನೆ ಮಾಡಲು ಅವಕಾಶ ಕಲ್ಪಿಸಿದಲ್ಲಿ ಪಕ್ಷಕ್ಕೆ ಬಲ ಬರಲಿದೆ. ಈಗಾಗಲೇ ಶೇ.50 ರಷ್ಟು ಮೀಸಲಾತಿಯಡಿ ಗ್ರಾಪಂಗಳಿಗೆ
ಆಯ್ಕೆಯಾಗಿರುವ ಮಹಿಳಾ ಸದಸ್ಯರು ಈ ಕಾರ್ಯಕ್ಕೆ ಮುಂದಾಗಬೇಕೆಂದರು.

ಯುವಕರಿಗೆ ಆದ್ಯತೆ: ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಮಾತನಾಡಿ, ಎಲ್ಲ ಜಾತಿ, ಸಮುದಾಯದ ಜನರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಿ, ಪಕ್ಷದಲ್ಲಿನ ಹಿರಿಯರು ಯುವಕರನ್ನು ಮುಖ್ಯ ವಾಹಿನಿಗೆ ತಂದಲ್ಲಿ ಕಾಂಗ್ರೆಸ್‌ಗೆ ಬಲ ಬರಲಿದೆ. ನಮ್ಮ ನಮ್ಮಲ್ಲಿಯೇ ಭಿನ್ನಾಭಿಪ್ರಾಯ ಬೇಡ. ಕಾಂಗ್ರೆಸ್‌ ಮುಕ್ತ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದರ ಬಗ್ಗೆ ಹಗಲುಗನಸು ಕಾಣುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸೋಣ ಎಂದರು.

ಒಳಜಗಳಕ್ಕೆ ಪಕ್ಷ ಬಲಿ: ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಮುಖಂಡರಲ್ಲಿ ಒಡಕಿರುವ ಕಾರಣ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗಿದೆ. ಇಬ್ಬರು ಮುಖಂಡರ ಜಗಳದಲ್ಲಿ ಕಾರ್ಯಕರ್ತರು ಬಡವಾಗುತ್ತಿದ್ದಾರೆ. ಕೂಡಲೇ ಪಕ್ಷದ ಹೈಕಮಾಂಡ್‌ ಒಂದು ಹಂತದಲ್ಲಿ ಮಾತುಕತೆ ನಡೆಸುವ ಮೂಲಕ ಕಾಂಗ್ರೆಸ್‌ ಕಾರ್ಯರ್ತರಲ್ಲಿ ಒಗ್ಗಟ್ಟು ಮೂಡಿಸಬೇಕಾಗಿದೆ ಎಂದರು.

ಟಿಕೆಟ್‌ ತಂದವರಿಗೆ ಸಾಥ್‌: ದಾನಪ್ಪ ಚೂರಿ ಮಾತನಾಡಿ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿದ್ದರೂ ಪಕ್ಷ ಪರಾಜಯ ಹೊಂದಿದೆ. ಮುಂದೆ ಹಾಗಾಗುವುದು ಬೇಡ. ಪಕ್ಷದಿಂದ ಯಾರೇ ಟಿಕೆಟ್‌ ತರಲಿ, ಅವರಿಗೆ ನಾನೂ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಬೆಂಬಲಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ವೇದಿಕೆಯಲ್ಲಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಮಾಜಿ ಅಧ್ಯಕ್ಷ ಬೀರಪ್ಪ ಬಣಕಾರ, ಮುಖಂಡರಾದ ಜಗದೀಶ ಪೂಜಾರ, ಮಹೇಶಗೌಡ ಪಾಟೀಲ, ಖಾದರಸಾಬ ದೊಡ್ಮನಿ, ಶಂಕರಗೌಡ ಪಾಟೀಲ, ಯೂನಸ್‌ ಅಹಮ್ಮದ ಸವಣೂರ, ರಮೇಶ ಸುತ್ತಕೋಟಿ. ರೇಖಾ ದೊಡ್ಮನಿ, ಡಿ.ಎಚ್‌.ಬುಡ್ಡನಗೌಡ, ಪ್ರಭುಗೌಡ ದೊಡ್ಮನಿ, ಮುನಾಫ್‌ ಎರೇಶೀಮಿ ಇನ್ನಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

vijayendra

ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ… ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿಜಯೇಂದ್ರ

surathkal

ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿಯಾದ ಯುವಕ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನ

samsung galaxy a22 5g

ಹೊಸ ಸ್ಯಾಮ್‍ ಸಂಗ್‍ ಗೆಲಾಕ್ಸಿ ಎ22 5ಜಿ ಹೀಗಿದೆ ನೋಡಿ

Lawyer files complaint against Rahul Gandhi for disclosing Nangal rape victim’s identity

ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋ ಹಂಚಿಕೊಂಡ ರಾಹುಲ್ ಮೇಲೆ ಎಫ್ ಐ ಆರ್..!

zameer ahmed, roshan baig

ಜಮೀರ್ ಅಹಮದ್, ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ: ಐಎಂಎ ನಂಟು?

ಮುಂಬಯಿ ಷೇರುಪೇಟೆ;ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಏರಿಕೆ, ಬಳಿಕ ಕುಸಿತ ಕಂಡ ಸೆನ್ಸೆಕ್ಸ್

ಮುಂಬಯಿ ಷೇರುಪೇಟೆ;ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಏರಿಕೆ, ಬಳಿಕ ಕುಸಿತ ಕಂಡ ಸೆನ್ಸೆಕ್ಸ್

Flood alert issued in Andhra’s Krishna district after gate of Pulichintala dam washes away

ತಾಂತ್ರಿಕ ಸಮಸ್ಯೆಯಿಂದ ಕೊಚ್ಚಿ ಹೋದ ಪುಲಿಚಿಂತಲ ಅಣೆಕಟ್ಟಿನ 16ನೇ ಗೇಟ್..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-Haveri

ಕೋವಿಡ್‌ ಮೂರನೇ ಅಲೆ ಭೀತಿ ಶುರು; ತಗ್ಗಿದ ಸೋಂಕಿನ ಸಂಖ್ಯೆ-ನಿಲ್ಲದ ಸಾವಿನ ಪ್ರಮಾಣ

hjh

ಯಾವ ಖಾತೆ ಕೊಟ್ಟರೂ ನಿರ್ವಹಣೆ : ಬಿ.ಸಿ.ಪಾಟೀಲ

rgsfaew

ಮೂರ್ತಿ ತಯಾರಕರಿಗೆ 3ನೇ ಅಲೆ ಭೀತಿ

rgrretre

ಹಾವೇರಿ ಜಿಲ್ಲೆಯಲ್ಲಿ ಗರಿಗೆದರಿದ ಸಚಿವ ಸ್ಥಾನ ನಿರೀಕ್ಷೆ

dfgr

ಏಲಕ್ಕಿ ನಾಡಿಗೆ ಭರಪೂರ ಯೋಜನೆ ನಿರೀಕ್ಷೆ

MUST WATCH

udayavani youtube

ಪಾಕಿಸ್ತಾನ ಹಿಂದೂ ದೇವಾಲಯದ ಮೇಲೆ ದಾಳಿ , ಧ್ವಂಸ !

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

ಹೊಸ ಸೇರ್ಪಡೆ

vijayendra

ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ… ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿಜಯೇಂದ್ರ

surathkal

ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿಯಾದ ಯುವಕ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನ

samsung galaxy a22 5g

ಹೊಸ ಸ್ಯಾಮ್‍ ಸಂಗ್‍ ಗೆಲಾಕ್ಸಿ ಎ22 5ಜಿ ಹೀಗಿದೆ ನೋಡಿ

Lawyer files complaint against Rahul Gandhi for disclosing Nangal rape victim’s identity

ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋ ಹಂಚಿಕೊಂಡ ರಾಹುಲ್ ಮೇಲೆ ಎಫ್ ಐ ಆರ್..!

zameer ahmed, roshan baig

ಜಮೀರ್ ಅಹಮದ್, ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ: ಐಎಂಎ ನಂಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.