ಕರ್ತವ್ಯಕ್ಕೆ ಗೈರಾದ್ರೆ ವಿಪತ್ತು ಕಾಯ್ದೆಯಡಿ ಕ್ರಮ

ಅಧಿಕಾರಿಗಳು-ನೌಕರರಿಗೆ ಡಿಸಿ ಶೆಟ್ಟೆಣ್ಣವರ ಎಚ್ಚರಿಕೆ­ ! ಸೋಂಕಿತರ ಪತ್ತೆ ಕಾರ್ಯ ತಿವ್ರಗೊಳಿಸಿ

Team Udayavani, Apr 30, 2021, 7:46 PM IST

gturuytuty

ಹಾವೇರಿ: ಕೋವಿಡ್‌-19 ಎರಡನೇ ಅಲೆಯ ನಿಯಂತ್ರಣದ ನಿಟ್ಟಿನಲ್ಲಿ ವಿವಿಧ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು ಹಾಗೂ ನೌಕರರು ಗೈರಾದರೆ ವಿಪತ್ತು ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಕೋವಿಡ್‌ ನಿಯಂತ್ರಣ ದೈನಂದಿನ ಪ್ರಗತಿ ಮಾಹಿತಿ ಪಡೆದುಕೊಂಡ ಅವರು, ಕೋವಿಡ್‌ ಕರ್ತವ್ಯಕ್ಕೆ ನೇಮಕಗೊಂಡವರು ಗೈರಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ಬಂದವರ ಮಾಹಿತಿ ಸಂಗ್ರಹ ತಪಾಸಣೆ, ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ತ್ವರಿತಗೊಳಿಸಿ ನಿಖರವಾಗಿ ದಾಖಲಿಸುವ ಕಾರ್ಯ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್‌ ಪ್ರಕರಣಗಳ ನಿರ್ವಹಣೆಗೆ ಜಿಲ್ಲೆಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಹಾಗೂ ಪ್ಯಾರಾಮೆಡಿಕಲ್‌ ಸಿಬ್ಬಂದಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಿ. ಎಂಬಿಬಿಎಸ್‌ ವೈದ್ಯರು ದೊರೆಯದಿದ್ದರೆ ಬಿಡಿಎಸ್‌ ದಂತ ವೈದ್ಯರು, ಆಯುಷ್‌ ವೈದ್ಯರನ್ನು ನೇಮಕ ಮಾಡಿಕೊಳ್ಳಿ ಎಂದು ಹೇಳಿದರು. ಸರ್ಕಾರದ ಪ್ರಾಮಾಣೀಕೃತ ಮಾರ್ಗಸೂಚಿ ಅನುಸಾರವಾಗಿ ಅಗತ್ಯವಿದ್ದವರಿಗೆ ಮಾತ್ರ ರೆಮಿಡಿಸಿವರ್‌ ವೈಲ್‌ ನೀಡಬೇಕು. ಈ ಕುರಿತು ಸರಿಯಾಗಿ ಆಡಿಟ್‌ ಮಾಡಬೇಕು. ಜಿಲ್ಲೆಯ ಕೋವಿಡ್‌ ಹೆಲ್ಪ್ಲೈನ್‌ ಕಾರ್ಯಾರಂಭಿಸಬೇಕು. ನಗರ ವ್ಯಾಪ್ತಿಯಲ್ಲಿ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದೆ. ಅದು ಹೆಚ್ಚಿಗೆ ಆಗುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.

ಸೋಂಕಿತರ ಸಂಪರ್ಕ ಪತ್ತೆ, ಟ್ರಾಕಿಂಗ್‌, ಐಸೋಲೇಷನ್‌ ದಾಖಲೀಕರಣ ಕಾರ್ಯದ ಬಗ್ಗೆ ಜಿಪಂ ಸಿಇಒ ಮಹಮ್ಮದ್‌ ರೋಷನ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡಬೇಕು. ಎರಡೂ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿ ಎಂದು ತಾಕೀತು ಮಾಡಿದರು.

ವಿಡಿಯೋ ಕಾನ್ಪರೆನ್ಸ್‌ ಸಭೆಯಲ್ಲಿ ವಿವಿಧ ಜಿಲ್ಲಾ ಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಾತನಾಡಿ, ಕೋವಿಡ್‌ ನಿಯಂತ್ರಣ ಕ್ರಮಗಳು ಹಾಗೂ ವೈದ್ಯಕೀಯ ವ್ಯವಸ್ಥೆ ಕುರಿತಂತೆ ಜಿಲ್ಲಾವಾರು ಮಾಹಿತಿ ಪಡೆದುಕೊಂಡು ಮೇ 12ರವರೆಗೆ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಮುಲಾಜಿಲ್ಲದೆ ಕಾರ್ಯರೂಪಗೊಳಿಸಿ ಕೋವಿಡ್‌ ನಿಯಂತ್ರಣಕ್ಕೆ ತರಬೇಕು. ಇಲ್ಲವಾದರೆ ಕರ್ಫ್ಯೂ ವಿಸ್ತರಿಸಬೇಕಾದೀತು ಎಂದು ಎಚ್ಚರಿಸಿದರು.

ಮನೆಯಲ್ಲೆ ಚಿಕಿತ್ಸೆ ಪಡೆಯುವವರಿಗೆ ವೈದ್ಯಕಿಯ ನಿಗಾ ವಹಿಸಿ, ಮೆಡಿಕಲ್‌ ಕಿಟ್‌ಗಳನ್ನು ನೀಡಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿ. ರೆಮ್‌ಡಿಸಿವಿಯರ್‌ ಅಗತ್ಯವಿದ್ದವರಿಗೆ ಮಾತ್ರ ಬಳಸಿ ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾ ಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವಂತೆ ಸೂಚಿಸಿದರು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಮಾತನಾಡಿ, ಗ್ರಾಮೀಣ ಕೋವಿಡ್‌ ಟಾಸ್ಕ್ಫೋರ್ಸ್‌ ಚುರುಕುಗೊಳಿಸಿ, ಹಳ್ಳಿಗೆ ಬಂದವರ ತಪಾಸಣೆ ನಡೆಸಿ, ನಿಗಾ ವಹಿಸಬೇಕು. ಹಳ್ಳಿ ಹಳ್ಳಿಗಳಲ್ಲೂ ಕರ್ಫ್ಯೂ ಬಿಗಿಗೊಳಿಸಿ ಸರ್ಕಾರದ ಹೊಸ ಮಾರ್ಗ ಸೂಚಿಯಂತೆ ತಪಾಸಣೆ ಲಸಿಕೆ, ಸಂಪರ್ಕ ಪತ್ತೆ, ಐಸೋಲೇಷನ್‌ ವ್ಯವಸ್ಥೆ ಸಮಪರ್ಕವಾಗಿ ಕೈಗೊಳ್ಳಿ. ಅಗತ್ಯವಾದ ವೈದ್ಯಕೀಯ ಅಗತ್ಯಗಳನ್ನು ಸ್ಥಳೀಯವಾಗಿಯೇ ಖರೀದಿಗೆ ಅವಕಾಶ ನೀಡಲಾಗಿದೆ. ಜಿಲ್ಲಾ ಧಿಕಾರಿಗಳಿಗೆ ಎಲ್ಲಾ ಅ ಧಿಕಾರ ನೀಡಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಗಳಿಗೆ ಸರ್ಕಾರದಿಂದ ಎಲ್ಲ ನೆರವು ನೀಡಲಾಗುವುದು ಎಂದರು. ಎಸ್ಪಿ ಕೆ.ಜಿ.ದೇವರಾಜ, ಹೆಚ್ಚುವರಿ ಎಸ್ಪಿ ಸಂತೋಷ ವಿಜಯಕುಮಾರ, ಡಿಎಚ್‌ಒ ಇತರ ಅ ಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಹಿಮಾಚಲ ಪ್ರದೇಶ: ಆಳವಾದ ಕಂದಕಕ್ಕೆ ಉರುಳಿಬಿದ್ದ ಬಸ್, ವಿದ್ಯಾರ್ಥಿಗಳು ಸೇರಿ 16 ಸಾವು

ಹಿಮಾಚಲ ಪ್ರದೇಶ: ಆಳವಾದ ಕಂದಕಕ್ಕೆ ಉರುಳಿಬಿದ್ದ ಬಸ್, ವಿದ್ಯಾರ್ಥಿಗಳು ಸೇರಿ 16 ಸಾವು

ನಾನೆಂದೂ ಮುಖ್ಯಮಂತ್ರಿಯ ಹುದ್ದೆಯನ್ನು ಕೇಳಿಲ್ಲ: ಮಹಾ ಸಿಎಂ ಏಕನಾಥ ಶಿಂಧೆ

ನಾನೆಂದೂ ಮುಖ್ಯಮಂತ್ರಿ ಹುದ್ದೆಯನ್ನು ಕೇಳಿಲ್ಲ: ಮಹಾ ಸಿಎಂ ಏಕನಾಥ ಶಿಂಧೆ

ಆರ್ಥಿಕ ಬಿಕ್ಕಟ್ಟು-ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆ; ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಆರ್ಥಿಕ ಬಿಕ್ಕಟ್ಟು-ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆ; ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

1accident

ಪುತ್ತೂರು: ಮಗನನ್ನು ಬಸ್‌ಗೆ ಬಿಡಲು ತೆರಳುತ್ತಿರುವ ವೇಳೆ ಅಫಘಾತ; ತಂದೆ ಸಾವು

ಇಂದು ಪ್ರಜ್ವಲ್‌ ಹುಟ್ಟುಹಬ್ಬ: ‘ಮಾಫಿಯಾ’ ತಂಡದಿಂದ ಹೊಸ ಪೋಸ್ಟರ್‌ ಗಿಫ್ಟ್

ಇಂದು ಪ್ರಜ್ವಲ್‌ ಹುಟ್ಟುಹಬ್ಬ: ‘ಮಾಫಿಯಾ’ ತಂಡದಿಂದ ಹೊಸ ಪೋಸ್ಟರ್‌ ಗಿಫ್ಟ್

thumb 3 t20

ಹರ್ಷಲ್ ಪಟೇಲ್ ಬೊಂಬಾಟ್ ಬ್ಯಾಟಿಂಗ್: ಎರಡನೇ ಟಿ20 ಅಭ್ಯಾಸ ಪಂದ್ಯವನ್ನೂ ಗೆದ್ದ ಭಾರತ

thumb news

ಅಡಿಕೆ ಬೆಳೆಗಾರರ ಉಸಿರು ಟಿಎಸ್‌ಎಸ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

2

ಪತ್ರಕರ್ತರಿಗೆ ಕ್ರೀಡೆ, ಮನರಂಜನೆ ಅವಶ್ಯಕ: ಡಿ.ವೈ.ಎಸ್.ಪಿ. ರವಿಪ್ರಸಾದ್

3mullamari

ಮುಲ್ಲಾಮಾರಿ ಜಲಾಶಯದಿಂದ ನೀರು ಹರಿವು

1

ತೋಡಿನಂತಿರುವ ರಸ್ತೆ ಅಭಿವೃದ್ಧಿಯೇ ಬೇಡಿಕೆ

2crop

ಮತ್ತೆ ಮಳೆ ಕಣ್ಣು ಮುಚ್ಚಾಲೆ: ರೈತರಿಗೆ ಆತಂಕ

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

ಉದಯಪುರದ ಕನ್ನಯ್ಯಲಾಲ್ ಕೊಲೆ ಖಂಡಿಸಿ ಬಳ್ಳಾರಿ ಬಂದ್

2

ಪತ್ರಕರ್ತರಿಗೆ ಕ್ರೀಡೆ, ಮನರಂಜನೆ ಅವಶ್ಯಕ: ಡಿ.ವೈ.ಎಸ್.ಪಿ. ರವಿಪ್ರಸಾದ್

ಹಿಮಾಚಲ ಪ್ರದೇಶ: ಆಳವಾದ ಕಂದಕಕ್ಕೆ ಉರುಳಿಬಿದ್ದ ಬಸ್, ವಿದ್ಯಾರ್ಥಿಗಳು ಸೇರಿ 16 ಸಾವು

ಹಿಮಾಚಲ ಪ್ರದೇಶ: ಆಳವಾದ ಕಂದಕಕ್ಕೆ ಉರುಳಿಬಿದ್ದ ಬಸ್, ವಿದ್ಯಾರ್ಥಿಗಳು ಸೇರಿ 16 ಸಾವು

ನಾನೆಂದೂ ಮುಖ್ಯಮಂತ್ರಿಯ ಹುದ್ದೆಯನ್ನು ಕೇಳಿಲ್ಲ: ಮಹಾ ಸಿಎಂ ಏಕನಾಥ ಶಿಂಧೆ

ನಾನೆಂದೂ ಮುಖ್ಯಮಂತ್ರಿ ಹುದ್ದೆಯನ್ನು ಕೇಳಿಲ್ಲ: ಮಹಾ ಸಿಎಂ ಏಕನಾಥ ಶಿಂಧೆ

3mullamari

ಮುಲ್ಲಾಮಾರಿ ಜಲಾಶಯದಿಂದ ನೀರು ಹರಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.