ಅಡಕೆ-ಬಾಳೆ ತೋಟದಲ್ಲಿಅಗ್ನಿ ಅವಘಡ-ನಷ್ಟ
Team Udayavani, Mar 5, 2021, 9:03 PM IST
ಹಿರೇಕೆರೂರ: ಅಗ್ನಿ ಆಕಸ್ಮಿಕದಿಂದ ಅಡಕೆ ಹಾಗೂಬಾಳೆ ತೋಟ ಸುಟ್ಟು ಅಪಾರ ಹಾನಿ ಸಂಭವಿಸಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪಟ್ಟಣದ ಪ್ರವೀಣ ಅಬಲೂರ ಎಂಬುವವರಿಗೆ ಸೇರಿದತೋಟ ಅಗ್ನಿಗೆ ಆಹುತಿಯಾಗಿದೆ. ಲಕ್ಷಾಂತರ ರೂ. ಮೌಲ್ಯದ ತೋಟ ಹಾಳಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿನಂದಿಸಲು ಶ್ರಮಿಸಿದರು. ಹೊಲದಲ್ಲಿರುವ ವಿದ್ಯುತ್ ತಂತಿಗಳಿಂದ ಪ್ರವಹಿಸಿದ ವಿದ್ಯುತ್‌ನಿಂದ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಅಡಕೆ, ಬಾಳೆ ಬೆಳೆ ಅಲ್ಲದೇ,ವಿದ್ಯುತ್ ಬೋರ್ಡ್, ಹನಿ ನೀರಾವರಿ ಪೈಪ್‌ಗ್ಳು ಕೂಡಸುಟ್ಟು ಹೋಗಿವೆ.
ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆಹೆ ಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಅನಾಹುತಸಂಭವಿಸಿದೆ. ಸಂಬಂಧಪಟ್ಟ ಹೆಸ್ಕಾಂ ಅ ಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕು. ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದುತೋಟದ ಮಾಲಿಕ ಪ್ರವೀಣ ಅಬಲೂರ ಆಗ್ರಹಿಸಿದರು.