ಹಲ್ಲೆಗೈದವರ ಬಂಧನಕ್ಕೆ ಒತ್ತಾಯ

Team Udayavani, Jun 6, 2019, 2:35 PM IST

ಹಾವೇರಿ: ನ್ಯಾಯವಾದಿ ಎಸ್‌.ಆರ್‌. ಹೆಗಡೆ ಹಾಗೂ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಾವೇರಿ: ಅಕ್ರಮ ಗೋ ಸಾಗಾಣಿಕೆ ತಡೆಯಲು ಮುಂದಾದ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಮೂರು ದಿನಗಳೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾ ಬಂದ್‌ ಕರೆ ಕೊಟ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂಪರ ಸಂಘಟನೆಯ ಪ್ರಮುಖ, ನ್ಯಾಯವಾದಿ ಎಸ್‌.ಆರ್‌. ಹೆಗಡೆ ಎಚ್ಚರಿಕೆ ನೀಡಿದರು.

ಬುಧವಾರ ನಗರದ ಪ್ರವಾಸಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಬಸವೇಶ್ವರ ನಗರದಲ್ಲಿ ಮಂಗಳವಾರ ರಾತ್ರಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿರುವ ಬಗ್ಗೆ ಸಂಶಯಗೊಂಡು ಹಿಂದೂಪರ ಸಂಘಟನೆ ಕಾರ್ಯಕರ್ತರು ಗಾಡಿ ನಿಲ್ಲಿಸಿ ವಿವರಣೆ ಕೇಳುತ್ತಿದ್ದಾಗ 50 ಜನರ ಗುಂಪೊಂದು ಹಿಂದೂಪರ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ವರುಣ ಆನವಟ್ಟಿ, ಮನೋಜ ಜಾಧವ್‌, ಷಣ್ಮುಖ ನೀರಲಗಿ, ಹರೀಶ ಮಡಿವಾಳರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೂಗಳ ಮೇಲಿನ ಹಲ್ಲೆ ಖಂಡನೀಯ ಎಂದರು.

ಕಳೆದ ಎರಡು ವರ್ಷಗಳಲ್ಲಿ ಕೆಲ ಅನ್ಯ ಕೋಮಿನ ಯುವಕರ ದಂಡು ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಮೂರು ಬಾರಿ ಹಲ್ಲೆ ನಡೆಸಿದೆ. ಅಲ್ಲದೇ ನಗರದಲ್ಲಿ ಕೆಲವರು ಅನಾವಶ್ಯಕವಾಗಿ ಹಿಂದೂಗಳ ಮೇಲೆ ಕೋಮು ಪ್ರಚೋದಿತವಾಗಿ ಹಲ್ಲೆ ಮಾಡುತ್ತಿದ್ದಾರೆ. ಅದೇ ರೀತಿ ಮಂಗಳವಾರ ಸಹ ದನ-ಕರುಗಳನ್ನು ರಕ್ಷಿಸಲು ಮುಂದಾದಾಗ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದರು.

ಜಮೀರ್‌ಅಹ್ಮದ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ದಬ್ಟಾಳಿಕೆಯನ್ನು ನಾವು ಸಹಿಸುವುದಿಲ್ಲ. ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಕಸಾಯಿಖಾನೆ ತೆರವುಗೊಳಿಸುವುದು ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ವಿಚಾರವಾಗಿ ಕೇಂದ್ರ ಗೃಹ ಇಲಾಖೆಗೂ ದೂರು ನೀಡಲಾಗುವುದು ಎಂದರು.

ಹಿಂದೂಪರ ಸಂಘಟನೆ ಕಾರ್ಯಕರ್ತರಾದ ವಿಜಯಕುಮಾರ ಚಿನ್ನಿಕಟ್ಟಿ, ಸಂತೋಷ ಆಲದಕಟ್ಟಿ, ಕಿರಣ ಅಂಗಡಿ, ಪ್ರಶಾಂತ ಗಾಣಿಗೇರ ಹಾಗೂ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಂಕಾಪುರ: ಪಟ್ಟಣದ ಜನತೆಗೆ ವರದಾ ನದಿಯ ನೀರು ತಲುಪಿಸುವ ಉದ್ದೇಶದಿಂದ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕವೆಲ್‌ಗೆ ಪುರಸಭೆ ಆಡಳಿತ ಬೀಗ ಜಡೆದಿರುವುದರಿಂದ...

  • ಹಾವೇರಿ: ಜಿಲ್ಲೆಯ ಎರಡು ದಶಕಗಳ ಬೇಡಿಕೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಡಾವಣೆ ಅಭಿವೃದ್ಧಿ...

  • ಹಿರೇಕೆರೂರ: ರಾಮಾಯಣವು ಸರ್ವಕಾಲಕ್ಕೂ ಪ್ರಸ್ತುತವಾದ ಮಹಾಗ್ರಂಥ ವಾಗಿದ್ದು, ನಮ್ಮ ಬದುಕು ತಿದ್ದಿಕೊಳ್ಳುವ ಸರಳ ಹಾಗೂ ಸುಂದರ ಸಾಧನವಾಗಿದೆ. ನಾವು ಮಹಾಪುರುಷರ...

  • ಹಾವೇರಿ: ನೆನೆಗುದಿಗೆ ಬಿದ್ದಿರುವ ನಗರದಲ್ಲಿನ ವಾಲ್ಮೀಕಿ ಸಭಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ...

  • ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ಆರಾಧ್ಯ ದೇವತೆ ಶ್ರೀದ್ಯಾಮಮ್ಮನ ದೇವಸ್ಥಾನದಲ್ಲಿ 9 ದಿನ ನಡೆದ ದೇವಿ ಪುರಾಣ ಸಂಪನ್ನಗೊಂಡಿತು. ದ್ಯಾಮಮ್ಮನ...

ಹೊಸ ಸೇರ್ಪಡೆ