ಬಿಎಸ್ ವೈ ಸರಕಾರದ ಪತನದ ಮುನ್ಸೂಚನೆ ನೀಡಿದ ಕೋಡಿಹಳ್ಳಿ ಸ್ವಾಮೀಜಿ
Team Udayavani, Sep 19, 2019, 3:58 PM IST
ಹಾವೇರಿ: ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಇನ್ನು ಮೂರು ನಾಲ್ಕು ತಿಂಗಳಳ್ಳಿ ಪತನವಾಗುತ್ತದೆ ಎಂದು ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸದ್ಯ ಹದಿನಾಲ್ಕು,ಹದಿನೈದು ತಿಂಗಳು ಮುಗಿದಿದೆ,ಇನ್ನೂ ಮೂರು ನಾಲ್ಕು ತಿಂಗಳು ಸಮಯ ಇದೆ ಬಿತ್ತಿದ ಬೆಳೆ ಪರರು ಕೊಯ್ದಾರು, ಬೆಳೆಯೊಂದು
ಫಸಲು ಇನ್ನೊಂದು, ಯಾವುದೇ ಸರಕಾರ ಬಂದರೂ ಮತ ಕೇಳ್ತಾರೆ ಎಂದು ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. ಈ ಹೇಳಿಕೆ ಚುನಾವಣೆ ಪೂರ್ವದಲ್ಲಿ ಹೇಳಿದ್ದೆ,ಇದೀಗ ಮೈತ್ರಿ ಸರಕಾರ 14 ತಿಂಗಳಿಗೆ ಪತನವಾಗಿದೆ.ಇನ್ನೂ ಕಾಲಾವಕಾಶ ಇದೆ ಕಾದು ನೋಡಿ ಎಂದರು
ರಾಜ್ಯದಲ್ಲಿ ಪ್ರವಾಹದ ಲಕ್ಷಣ ಕಾರ್ತಿಕ ಕಳೆಯುವವರೆಗೂ ಇರಲಿದೆ, ಡಿ ಕೆ ಶಿವಕುಮಾರ್ ಇಡಿ ಪ್ರಕರಣ ಹಾಗೂ ಅನರ್ಹ ಶಾಸಕರ ಪ್ರಕರಣದ ಭವಿಷ್ಯ ಹೇಳುವುದರೆ,ದೈವತ್ವದ ಬೆಲೆ ಇಲ್ಲದಾಗುತ್ತೆ,ದೇವರು,ಧರ್ಮ ಹೇಳಬಹುದು. ರಾಜಕೀಯ ಏನು ಮಾಡೋಕೆ ಹೇಳೋದು ಎಂದರು. ಭಾರತದ ಮೇಲೆ ಪಾಕ್ ಯುದ್ಧೋನ್ಮಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಾಯಾದಿಗಳ ಕಲಹ ಮೊದಲಿನಿಂದಲೂ ಬಂದಿದೆ, ಭಾರತ ನಡೆತ್ತಲೇ ಬಂದಿದೆ, ಇದು ಅದರಂತೆ ನಡೆಯುತ್ತದೆ . ಚಂದ್ರಯಾನದ 2 ವಿಚಾರದಲ್ಲಿ ನಾನು ಸಂಗಮೇಶನೊಲಿವನೆ ಆದರೆ ಒಳಹಡ್ಡ ಬಂದಿದೆ ಎಂದು ಹೇಳಿರುವೆ. ಇದು ರಾಷ್ಟಕ್ಕೂ ಆಗುತ್ತೆ, ರಾಜ್ಯಕ್ಕೂ ಅನ್ವಯಿಸುತ್ತೆ ಎಂದರು.