ಕೊಟ್ಟೂರು ಜಾತ್ರೆಗೆ ಭಕ್ತರ ದಂಡು


Team Udayavani, Feb 27, 2019, 10:46 AM IST

27-february-13.jpg

ಕೊಟ್ಟೂರು: ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ವಿವಿಧ ಕಡೆಯಿಂದ ಸಾವಿರಾರು ಭಕ್ತಾದಿ ಗಳು ಪಾದಯಾತ್ರೆ ಮೂಲಕ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಪಾದಯಾತ್ರೆ ಮೂಲಕ ಬಂದ ಭಕ್ತಾದಿಗಳಿಗೆ ಇಲ್ಲಿನ ಸಂಘ-ಸಂಸ್ಥೆ ಮತ್ತು ಜನರು ತಮ್ಮ ಕೈಲಾದ ಮಟ್ಟಿಗೆ ಉಪಾಹಾರ, ಊಟ ಸೇರಿದಂತೆ ಮೂಲ ಸೌಲಭ್ಯ ಒದಗಿಸುತ್ತಿದ್ದಾರೆ.

ಫೆ.28ರಂದು ಜರುಗುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ದಾವಣಗೆರೆಯಿಂದ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಮಂಗಳವಾರವೇ ಆಗಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಪ್ರತಿ ವರ್ಷ ಸ್ವಾಮಿಯ ರಥೋತ್ಸವಕ್ಕೆ ದಾವಣಗೆರೆಯಿಂದ ಪಾದಯಾತ್ರಿಗಳು ಅಧಿಕ ಸಂಖ್ಯೆಯಲ್ಲಿ ಬರುವುದು ವಾಡಿಕೆ. ಪ್ರಸಕ್ತ ವರ್ಷ ಈ ಸಂಖ್ಯೆ ಲಕ್ಷಕ್ಕೂ ಹೆಚ್ಚು ದಾಟಿದೆ.

ಬೆಂಗಳೂರು, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಹುಬ್ಬಳ್ಳಿ, ಹಾಸನ, ಮುಂಡರಗಿ, ಗದಗ, ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ಕೊಪ್ಪಳ, ಹೊಸಪೇಟೆ, ಹರಪನಹಳ್ಳಿ ಮತ್ತು ಹರಿಹರ ಸೇರಿದಂತೆ ವಿವಿಧೆಡೆಯಿಂದ ಬಂಡಿಯಲ್ಲಿ ಬಂದು ಕೊಟ್ಟೂರೇಶ್ವರನ ರಥೋತ್ಸವ ಕಣ್ತುಂಬಿಕೊಳ್ಳುವ ಭಕ್ತಾದಿಗಳು ಅಧಿ ಕ ಸಂಖ್ಯೆಯಲ್ಲಿದ್ದಾರೆ. ಪಾದಯಾತ್ರೆ ಮೂಲಕ ಆಗಮಿಸುವವರನ್ನು ಸ್ವಾಗತಿಸಲೆಂದು ಪಟ್ಟಣದ ವಿವಿಧ ವರ್ಗದ ಜನರು ಮತ್ತು ಸಂಘ-ಸಂಸ್ಥೆಗಳು ನಿಂತಿವೆ.

ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್‌ ತಮ್ಮ ತೋಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರಿಗಳಿಗೆ ಸ್ನಾನ, ಅಡುಗೆ, ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಪಾದಯಾತ್ರಿಗಳಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಪಾಯಸ, ಅನ್ನಸಾರು, ಕಾಫಿ, ಟೀ ಸೇವೆ ಗೈಯುತ್ತಿದ್ದಾರೆ. ಪಾದಯಾತ್ರಿಯಲ್ಲಿ ನಿತ್ರಾಣ ಆದವರು, ನೋವು ಅನುಭವಿಸುವವರ ಆರೈಕೆ ಮತ್ತು ಶ್ರೂಶುಷೆ ಮಾಡುವಲ್ಲಿ ಖರೀದಿ ಮತ್ತು ದಲ್ಲಾಲರ ಸಂಘದ ಅಧ್ಯಕ್ಷ ಪತ್ತಿಕೊಂಡ ಗಣೇಶ ದಂಪತಿ ನಿರತರಾಗಿದ್ದಾರೆ.

ಬಸವೇಶ್ವರ ಸ್ವಾಮಿಗೆ ಅರ್ಪಿಸಲು ರುದ್ರಾಕ್ಷಿ ಮಾಲೆ ಸಿದ್ಧ
ಪಟ್ಟಣದ ಹರಪನಹಳ್ಳಿ ರಸ್ತೆಯುದ್ದಕ್ಕೂ ಪಾದಯಾತ್ರಿಗಳಿಗೆ ಎಳೆನೀರು, ಶರಬತ್ತು, ಮಜ್ಜಿಗೆ, ತಂಪು ಪಾನೀಯ, ಕಲ್ಲು ಸಕ್ಕರೆ, ಐಸ್‌, ದ್ರಾಕ್ಷಿ, ಗೋಡಂಬಿ, ಹಾಲು, ಕಾಫಿ  ವಿತರಿಸಲು ಕೆಲವರು ಮುಂದಾಗಿದ್ದಾರೆ. ಹಾವೇರಿ ಜಿಲ್ಲೆ ಕೆಸರಳ್ಳಿ ಗ್ರಾಮದ ಮೂಳೆ ತಜ್ಞ ಕುಲಕರ್ಣಿ ಹಾಲಯ್ಯ ಸ್ವಾಮಿ, ಕೊಟ್ರಯ್ಯ ಸ್ವಾಮಿ ಸಹೋದರರು ಒಂದುವರೆ ಲಕ್ಷದ ರೂ. ಮೌಲ್ಯದ ರುದ್ರಾಕ್ಷಿ ಮಾಲೆಯನ್ನು ಶ್ರೀಗುರು ಕೊಟ್ಟೂರು ಬಸವೇಶ್ವರ ಸ್ವಾಮಿಗೆ ಸಮರ್ಪಿಸಲು ಸಿದ್ಧಗೊಳಿಸಿದ್ದಾರೆ. ಜಾತ್ರೆ ನಿಮಿತ್ತ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

„ರವಿಕುಮಾರ ಎಂ

ಟಾಪ್ ನ್ಯೂಸ್

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

Lok Sabha Election; ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.