ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ

ಒಟ್ಟು 181 ಮಂಜೂರಾತಿ ಹುದ್ದೆಗಳಲ್ಲಿ 106 ಹುದ್ದೆ ಭರ್ತಿ-ಉಳಿದ 75 ಹುದ್ದೆಗಳು ಖಾಲಿ

Team Udayavani, Jan 6, 2021, 3:13 PM IST

ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ

ಹಾವೇರಿ: ಅಗ್ನಿ ಅವಘಡದಂತಹ ತುರ್ತು ಸಂದರ್ಭದಲ್ಲಿ ಶೀಘ್ರ ನೆರವಿಗೆ ಬರಬೇಕಾದಅಗ್ನಿಶಾಮಕದಳ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಇದರಿಂದ ಸಕಾಲಕ್ಕೆ ಸಮರ್ಪಕ ಸೇವೆ ಒದಗಿಸಲು ಅಡಚಣೆಯಾಗುತ್ತಿದೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಯಲ್ಲಿ ಒಟ್ಟು 181 ಮಂಜೂರಾತ ಹುದ್ದೆಗಳಿದ್ದು, ಇದರಲ್ಲಿ 106 ಹುದ್ದೆಗಳುಭರ್ತಿಯಾಗಿವೆ. ಉಳಿದ 75 ಹುದ್ದೆಗಳು ಖಾಲಿಇವೆ. ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ 6,ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ13, ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ 13,ಹಿರೇಕೆರೂರು ಅಗ್ನಿಶಾಮಕ ಠಾಣೆಯಲ್ಲಿ 12,ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ 11, ಬ್ಯಾಡಗಿಅಗ್ನಿಶಾಮಕ ಠಾಣೆಯಲ್ಲಿ 10, ಸವಣೂರು ಅಗ್ನಿಶಾಮಕ ಠಾಣೆಯಲ್ಲಿ 10 ಹುದ್ದೆಗಳು ಖಾಲಿ ಇವೆ.

ಮೂರು ಕಡೆ ಠಾಣಾಧಿ ಕಾರಿಗಳೇ ಇಲ್ಲ:

ಹಿರೇಕೆರೂರು, ಬ್ಯಾಡಗಿ, ಸವಣೂರು ಅಗ್ನಿಶಾಮಠ ಠಾಣೆಗಳಲ್ಲಿ ಠಾಣಾಧಿಕಾರಿಗಳೇ ಇಲ್ಲ. ಹಾನಗಲ್ಲನಲ್ಲಿ ಸಹಾಯಕ ಠಾಣಾಧಿಕಾರಿಯೂ ಇಲ್ಲದ ಪರಿಸ್ಥಿತಿಇದೆ. ಹಾನಗಲ್ಲ, ಹಿರೇಕೆರೂರು ಹಾಗೂ ಬ್ಯಾಡಗಿಠಾಣೆಗಳಲ್ಲಿ ಚಾಲಕ ತಂತ್ರಜ್ಞರು ಒಬ್ಬರೂಇಲ್ಲ. ಹಾನಗಲ್ಲ ಹಾಗೂ ಶಿಗ್ಗಾವಿ ಠಾಣೆಯಲ್ಲಿಪ್ರಮುಖ ಅಗ್ನಿಶಾಮಕರ ಕೊರತೆಯೂ ಇದೆ. ಈತುರ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವಅಗ್ನಿಶಾಮಕರ ಸಂಖ್ಯೆಯೂ ಅರ್ಧಕ್ಕರ್ಧ ಖಾಲಿಇದೆ.

ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾಅಗ್ನಿಶಾಮಕ ಅಧಿಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾಧಿಕಾರಿಗಳು 7, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳು 6, ಚಾಲಕ ತಂತ್ರಜ್ಞರು 6, ಪ್ರಮುಖ ಅಗ್ನಿಶಾಮಕರು 27,ಅಗ್ನಿಶಾಮಕ ಚಾಲಕರು 32, ಅಗ್ನಿಶಾಮಕರು 102 ಹೀಗೆ ಒಟ್ಟು 181 ಮಂಜೂರಾತಿ ಹುದ್ದೆಗಳಿವೆ.ಆದರೆ, ಅಗ್ನಿಶಾಮಕ ಠಾಣಾ ಧಿಕಾರಿಗಳ 3ಹುದ್ದೆ, ಸಹಾಯಕ ಠಾಣಾಧಿ ಕಾರಿಗಳ ಒಂದುಹುದ್ದೆ, ಚಾಲಕ ತಂತ್ರಜ್ಞರ 3 ಹುದ್ದೆ, ಪ್ರಮುಖಅಗ್ನಿಶಾಮಕರ 2 ಹುದ್ದೆ, ಅಗ್ನಿಶಾಮಕ ಚಾಲಕರ10 ಹುದ್ದೆ ಹಾಗೂ ಅಗ್ನಿಶಾಮಕರ 56 ಹುದ್ದೆಗಳು ಖಾಲಿ ಇವೆ.

ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆ ಒಂದು,ಅಗ್ನಿಶಾಮಕ ಠಾಣಾಧಿಕಾರಿಗಳು 4, ಸಹಾಯಕಠಾಣಾ ಧಿಕಾರಿಗಳು 5, ಚಾಲಕ ತಂತ್ರಜ್ಞರು 3, ಪ್ರಮುಖ ಅಗ್ನಿಶಾಮಕರು 25, ಅಗ್ನಿಶಾಮಕಚಾಲಕರು 22, ಅಗ್ನಿಶಾಮಕರು 46 ಹೀಗೆ ಒಟ್ಟು106 ಹುದ್ದೆಗಳು ಮಾತ್ರ ಭರ್ತಿಯಾಗಿವೆ.ಸಿಬ್ಬಂದಿ ಕೊರತೆಯ ನಡುವೆಯೂಅಗ್ನಿಶಾಮಕ ದಳ ಇರುವಷ್ಟು ಸಿಬ್ಬಂದಿಬಳಸಿಕೊಂಡು ತುರ್ತು ಸೇವೆಯಲ್ಲಿ ನಿರತವಾಗಿದೆ. ಸರ್ಕಾರ ಕೂಡಲೇ ಖಾಲಿ ಇರುವಹುದ್ದೆಗಳನ್ನು ಭರ್ತಿ ಮಾಡಿ ಸಿಬ್ಬಂದಿ ಮೇಲಿನಕೆಲಸದ ಒತ್ತಡ ಕಡಿಮೆ ಮಾಡುವ ಮೂಲಕ ಅಗ್ನಿಶಾಮಕ ದಳಕ್ಕೆ ಇನ್ನಷ್ಟು ಬಲ ತುಂಬಬೇಕಿದೆ.

ಅಗ್ನಿಶಾಮಕ ಠಾಣೆ-ಹುದ್ದೆಗಳ ವಿವರ :

ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 25 ಮಂಜೂರಾತಿ ಹುದ್ದೆಗಳಿದ್ದು 19 ಹಾಲಿ ಹುದ್ದೆಗಳು ಭರ್ತಿಯಾಗಿವೆ. 6 ಹುದ್ದೆಗಳು ಖಾಲಿ ಇವೆ. ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳು ಖಾಲಿ ಇವೆ. ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳುಖಾಲಿ ಇವೆ. ಹಿರೇಕೆರೂರು ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 15 ಹಾಲಿ ಹುದ್ದೆಗಳು ಭರ್ತಿಯಾಗಿವೆ. 12 ಹುದ್ದೆಗಳು ಖಾಲಿ ಇವೆ. ಶಿಗ್ಗಾವಿಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 16 ಹಾಲಿ ಹುದ್ದೆಗಳುಭರ್ತಿಯಾಗಿವೆ. 11 ಹುದ್ದೆಗಳು ಖಾಲಿ ಇವೆ. ಬ್ಯಾಡಗಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು24 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳುಖಾಲಿ ಇವೆ. ಸವಣೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 24 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು ಖಾಲಿ ಇವೆ.

ಜಿಲ್ಲೆಯ ಅಗ್ನಿಶಾಮಕ ಠಾಣೆಗಳ ಕಚೇರಿಯಲ್ಲಿ ಒಟ್ಟು 181 ಮಂಜೂರಾತಿ ಹುದ್ದೆಗಳಿದ್ದು,106 ಹುದ್ದೆಗಳು ಭರ್ತಿಯಾಗಿವೆ. 75 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆ ಮಧ್ಯೆಯೂ ಸಾರ್ವಜನಿಕರಿಗೆ ತುರ್ತು ನೆರವು ನೀಡಲಾಗುತ್ತಿದೆ. ಸರ್ಕಾರ ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ನೀರಿಕ್ಷೆ ಇದೆ.  –ಸೋಮಶೇಖರ ಅಗಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಹಾವೇರಿ

 

-ವೀರೇಶ ಮಡ್ಲೂರ

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಹಾವೇರಿ: ಲಾರಿ ಪಲ್ಟಿಯಾಗಿ ಮೂವರು ದಾರುಣ ಸಾವು

ಸೆರತಯರಜಹಗ್ದಸಅ

ಸಾರ್ಥಕ ಜೀವನಕ್ಕೆ ಅಧ್ಯಾತ್ಮದ ಚಿಂತನೆ ಸಹಕಾರಿ

ಸೆರತೆತಯರಕಜಹಗ್ದ

ಮಹಾತ್ಮರ ಆದರ್ಶ ಪಾಲಿಸಿ

ರತಯುಇಇಕುಜಹಗ್ದಸ

ಸ್ಪರ್ಧಾತ್ಮಕ ಪೈಪೋಟಿಗೆ ವಿದ್ಯಾರ್ಥಿಗಳಿಗೆ ಅವಕಾಶ

ದ್ಗತರಯಿಕಜಹಗ್ದಸಅ

ಕನ್ನ ಡ ಭಾಷೆ ಶ್ರೀಮಂತಗೊಳಿಸಲು ಲಿಂಗಯ್ಯ ಸಲಹೆ

MUST WATCH

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

ಹೊಸ ಸೇರ್ಪಡೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಸ್ಗ್ಸಗಸ್ಗದಸ

ಅನುಮತಿ ಇಲ್ಲದ್ದರಿಂದ ತೆರವು

ಯತೆಯತೆಹತೆಹಗ

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ: ಸಿದ್ದು 

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಹುಣಸೂರಿನಲ್ಲಿ ಮತಾಂತರ ಕಾಯ್ದೆ ವಿರುದ್ದ ಕರಪತ್ರ ಚಳುವಳಿ

ಹುಣಸೂರಿನಲ್ಲಿ ಮತಾಂತರ ಕಾಯ್ದೆ ವಿರುದ್ದ ಕರಪತ್ರ ಚಳುವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.