ಸ್ಥಳೀಯ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

Team Udayavani, May 9, 2019, 2:15 PM IST

ಬ್ಯಾಡಗಿ: ಮೇ 29 ರಂದು ನಡೆಯಲಿರುವ ಸ್ಥಳೀಯ ಪುರಸಭೆಯ ಚುನಾವಣೆಗೆ ಮೇ 9 ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಹಶೀಲ್ದಾರ್‌ ಕೆ.ಗುರುಬಸವರಾಜ ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 9 ರಿಂದ 16ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದ್ದು ಮೇ 17 ನಾಮಪತ್ರ ಪರಿಶೀಲನೆ, ಮೇ 20 ನಾಮಪತ್ರ ಪಡೆಯಲು ಅಂತಿಮ ದಿನ, ಮೇ 29 ರಂದು ಮತದಾನ ಹಾಗೂ ಅವಶ್ಯಕತೆ ಇದ್ದಲ್ಲಿ ಮೇ 30 ರಂದು ಮರು ಮತದಾನಕ್ಕೆ ದಿನ ನಿಗದಿ ಪಡಿಸಲಾಗಿದ್ದು, ಮೇ 31 ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.

ಒಟ್ಟು 23182 ಮತದಾರರು: ಇಪ್ಪತ್ಮೂರು ವಾರ್ಡ್‌ಗಳಿಂದ 11288 ಪುರುಷರು ಹಾಗೂ 11880 ಮಹಿಳೆಯರು ಇತರೆ 4 ಸೇರಿದಂತೆ ಒಟ್ಟು 23182 ಮತದಾರರಿದ್ದಾರೆ ಎಂದರು. ಪ್ರಸಕ್ತ ಚುನಾವಣೆಯಲ್ಲಿ ಮತದಾನಕ್ಕೆ ಬ್ಯಾಲೆಟ್ ಪೇಪರ್‌ ಬದಲಾಗಿ ಇವಿಎಂ ಮಿಷನ್‌ಗಳನ್ನು ಬಳಕೆ ಮಾಡಲಾಗುತ್ತಿದೆಯಾದರೂ, ಹಾಕಿದ ಮತವನ್ನು ದೃಢೀಕರಿಸಿಕೊಳ್ಳಲು ಬಳಕೆ ಮಾಡಲಾಗುತ್ತಿದ್ದ ವಿವಿ ಪ್ಯಾಟ್ ಮಾತ್ರ ಈ ಚುನಾವಣೆಯಲ್ಲಿ ಬಳಕೆಯಾಗುತ್ತಿಲ್ಲ ಎಂದರು.

ಮೕವರು ಚುನಾವಣಾಧಿಕಾರಿಗಳು: ವಾರ್ಡ್‌ಗಳಿಗನುಸಾರ ಮೂವರು ಆರ್‌ಒ (ರಿಟರ್ನಿಂಗ್‌ ಆಫಿಸರ್‌) ಹಾಗೂ ಮೂವರು ಏಪಿ ಆರ್‌ಒಗಳನ್ನು ಆಯೋಜನೆ ಮಾಡಲಾಗಿದೆ. ಅದರಲ್ಲಿ ವಾರ್ಡ್‌ ಸಂಖ್ಯೆ 1 ರಿಂದ 8ರ ವರೆಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎನ್‌.ತಿಮ್ಮಾರೆಡ್ಡಿ, (ಮೊ.9480835636) ಅವರನ್ನು ಸಹಾಯಕ ಅಧಿಕಾರಿಯಾಗಿ ಕೃಷಿ ಅಧಿಕಾರಿ ಆರ್‌.ಮಂಜುನಾಥ (ಮೊ.8277931830) ಅವರನ್ನು, ವಾರ್ಡ್‌ ಸಂಖ್ಯೆ 9 ರಿಂದ 16ರ ವರೆಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಫ್‌ ಬಾರ್ಕಿ (ಮೊ.9480695253) ಸಹಾಯಕ ಅಧಿಕಾರಿಯಾಗಿ ಟ.ಎಸ್‌.ಲಮಾಣಿ (ಮೊ.9448927085), ವಾರ್ಡ್‌ ಸಂಖ್ಯೆ 17 ರಿಂದ 23ರ ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರುದ್ರಮುನಿ (ಮೊ.9480695246) ಸಹಾಯಕ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಪುಂಡಲಿಕ ಮಾನನವರ ಅವರನ್ನು ನಿಯೋಜನೆ ಮಾಡಲಾಗಿದೆ ಎಂದರು.

ಒಟ್ಟು 23 ಮತಗಟ್ಟೆಗಳು: ಪ್ರತಿ ವಾರ್ಡಗೆ ಒಂದರಂತೆ ಒಟ್ಟು 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರದಲ್ಲದೇ ಮಸ್ಟ ರಿಂಗ್‌ ಡಿಮಸ್ಟರಿಂಗನ್ನು ತಹಶೀಲ್ದಾರ ಕಚೇರಿಯಲ್ಲಿಯೇ ನಡೆಸಲಾಗುವುದು ಎಂದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿನ ಸೂಚನೆ ಮೇರೆಗೆ ವಿಶೇಷಚೇತನರ ಮತದಾನಕ್ಕೆ ವಿಶೇಷವಾದ ಸೌಲಭ್ಯ ಕಲ್ಪಿಸಲಾಗುವುದು ಎಂದರು.

3 ಸ್ಥಳದಲ್ಲಿ ನಾಮ ಪತ್ರ ಸಲ್ಲಿಕೆ: ಮೇ 9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮೂರು ಸ್ಥಳಗಳಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಪಂಚಾಯತ್‌ ಸಭಾಂಗಣ, ಪುರಸಭೆ ಬ್ಯಾಡಗಿ ಮತ್ತು ಸಾಮರ್ಥ್ಯಸೌಧದಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ ಎಂದರು.

ಶೈಕ್ಷಣಿಕ ಹಿನ್ನಡೆಗೆ ಅವಕಾಶ ಮಾಡಬೇಡಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಇಬ್ಬಿಬ್ಬರು ಅಧಿಕಾರಿಗಳನ್ನು ಆರ್‌ಒ, ಎಆರ್‌ಒಗಳನ್ನಾಗಿ ನೇಮಕ ಮಾಡಿದ್ದರ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಟಿ.ಎಸ್‌.ಲಮಾಣಿ ಹಾಗೂ ಸಮನ್ವಯಾಧಿಕಾರಿ ಎಂ.ಎಫ್‌.ಬಾರ್ಕಿ ಮಾತನಾಡಿ, ಇನ್ನೇನು ಕೇವಲೆ ದಿನಗಳಲ್ಲಿ ಶಾಲೆಗಳು ಆರಂಭವಾಗಲಿವೆ. ಮೇ 20ರಿಂದ ಪುಸ್ತಕ ವಿತರಣೆ ಸೇರಿದಂತೆ ಮೇ 28ಕ್ಕೆ ಶಾಲಾ ಪ್ರಾರಂಭೋತ್ಸವ ಹಾಗೂ ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಇಬ್ಬರಲ್ಲಿ ಯಾರಾದರು ಒಬ್ಬರನ್ನು ಚುನಾವಣೆ ಕಾರ್ಯದಿಂದ ಕೈ ಬಿಟ್ಟಲ್ಲಿ ಅನೂಕೂಲವಾಗಲಿದೆ. ಇಲ್ಲದೇ ಹೋದಲ್ಲಿ ಶೈಕ್ಷಣಿಕ ಕಾರ್ಯಗಳಿಗೆ ಹಿನ್ನಡೆಯಾಲಿದ್ದು. ಈ ಕುರಿತಂತೆ ಮತ್ತೂಮ್ಮೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು. ಇದೇ ರೀತಿಯ ಸಮಸ್ಯೆ ನಮ್ಮ ಇಲಾಖೆಯದ್ದು ಆಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಈ-ಮೇಲ್ ಮೂಲಕ ಮನವಿ ಸಲ್ಲಿಸಿರುವುದಾಗಿ ಲಮಾಣಿ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೀದರ್‌: ಅಪ್ಪಟ ಗ್ರಾಮೀಣ ಪ್ರತಿಭೆ, ಮಾಡೆಲಿಂಗ್‌ ಲೋಕದಲ್ಲಿ ಹೆಜ್ಜೆಯನ್ನಿಟ್ಟಿರುವ ಜಿಲ್ಲೆಯ ಧುಮ್ಮನಸೂರು ಗ್ರಾಮದ ಬೆಡಗಿ ನಿಶಾ ತಾಳಂಪಳ್ಳಿ ಈಗ "ಮಿಸ್‌ ಇಂಡಿಯಾ...

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...