ಶೈಕ್ಷಣಿಕ ತಂತ್ರಜ್ಞಾನ ಪ್ರಗತಿಗೆ ಬಳಕೆಯಾಗಲಿ


Team Udayavani, Jul 14, 2019, 10:45 AM IST

hv-tdy-3..

ಹಾವೇರಿ: ನಗರದಲ್ಲಿ ನಡೆದ ಚಿಂತನಗೋಷ್ಠಿಯನ್ನು ನಿವೃತ್ತ ಡಿಡಿಪಿಐ ಎಸ್‌.ಬಿ. ಕೊಡ್ಲಿ ಉದ್ಘಾಟಿಸಿದರು.

ಹಾವೇರಿ: ವಿಜ್ಞಾನ, ತಂತ್ರಜ್ಞಾನ, ಆಧುನಿಕ ಉಪಕರಣಗಳು ಶೈಕ್ಷಣಿಕ ಪ್ರಗತಿಗೆ ಸಾಧನವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕೇ ವಿನಃ ದುರ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿಗೆ ಮಾರಕವಾಗುವಂತಿರಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಸ್‌.ಬಿ. ಕೊಡ್ಲಿ ಹೇಳಿದರು.

ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹಾಗೂ ಮಕ್ಕಳ ಸಾಹಿತ್ಯ ವೇದಿಕೆ ಸಂಘಟಿಸಿದ್ದ ‘ಗುಣಮಟ್ಟದ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣ ಮತ್ತು ಪರಿಹಾರ’ ಕುರಿತ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತವರು, ಶಿಕ್ಷಕರು, ಪೋಷಕರು, ಶಿಕ್ಷಣ ಇಲಾಖೆ ಒಟ್ಟಾಗಿ ಮಕ್ಕಳ ಮೇಲಿನ ಕಾಳಜಿಯಿಂದ ದುಡಿದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ. ಇದರಿಂದ ನೈತಿಕತೆ ಹಾಗೂ ಮೌಲ್ಯವನ್ನೊಳಗೊಂಡ ಮಾನವೀಯ ಗುಣ ಮೈಗೂಡಿಸಿಕೊಂಡ ವಿದ್ಯಾರ್ಥಿ ಸಮುದಾಯವನ್ನು ಸಮಾಜಕ್ಕೆ ನೀಡಬಹುದು ಎಂದರು.

ಧಾರವಾಡದ ಡಯಟ್‌ನ ನಿವೃತ್ತ ಉಪನ್ಯಾಸಕ ರಾಮಚಂದ್ರ ಪಾಟೀಲ ಮಾತನಾಡಿ, ಮಕ್ಕಳ ಹೃದಯದಲ್ಲಿ ಮೌಲ್ಯಗಳನ್ನು ತುಂಬುವ ಜೊತೆಗೆ ತಲೆಯಲ್ಲಿ ಜ್ಞಾನ ತುಂಬಬೇಕು. ಮೌಲ್ಯಗಳ ಬಗ್ಗೆ ಪರೀಕ್ಷೆಯಲ್ಲಿ ಅಂಕಗಳಿರಬೇಕು. ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ತಜ್ಞರಿರಬೇಕು ಎಂದರು.

ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಜೆ.ಎಂ. ಮಠದ ಮಾತನಾಡಿ, ಟಿ.ವಿ, ಮೊಬೈಲ್ ಹಾವಳಿಯಲ್ಲಿ ಓದುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿದೆ. ಶಿಕ್ಷಣದ ಗುಣಮಟ್ಟ ಕುಸಿಯಲು ಎಲ್ಲರೂ ಕಾರಣ. ಈ ಕುರಿತು ಚಿಂತನ-ಮಂಥನ ನಡೆಯಬೇಕು ಎಂದರು.

ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಶಂಕರ ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಹಿತಿ ಗಂಗಾಧರ ನಂದಿ, ಶಿಕ್ಷಣ ಚಿಂತಕ ನಿವೃತ್ತ ಪ್ರಾಚಾರ್ಯ ಬಿ.ಬಸವರಾಜ, ನಿಜಲಿಂಗಪ್ಪ ಬಸೇಗಣ್ಣಿ, ಶಶಿಕಲಾ ಅಕ್ಕಿ, ಧಾರವಾಡದ ಬಸವರಾಜ ಗಡದ, ಮಂಜುನಾಥ ಸಣ್ಣಿಂಗಣ್ಣನವರ ವೇದಿಕೆಯಲ್ಲಿದ್ದರು. ಹಿರಿಯ ಸಾಹಿತಿ ಎಂ.ಬಿ. ಹುಲಗಣ್ಣನವರ, ಇಂಗಳಗೊಂದಿ, ಮಹಾವಿದ್ಯಾಲಯದ ಸಿಬ್ಬಂದಿ ಸೇರಿದಂತೆ ಪದವಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪ್ರಾಚಾರ್ಯೆ ಡಾ. ಸವಿತಾ ಹಿರೇಮಠ ಸ್ವಾಗತಿಸಿದರು. ಶಶಿಕಲಾ ಸಿದ್ದಾಪುರ ನಿರೂಪಿಸಿದರು. ಸಾಹಿತಿ ಹನುಮಂತಗೌಡ ಗೊಲ್ಲರ ವಂದಿಸಿದರು.

ಟಾಪ್ ನ್ಯೂಸ್

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

2PSI

ಪಿಎಸ್‌ಐ ಅಕ್ರಮ: ಇನ್‌ಸ್ಪೆಕ್ಟರ್‌ ಸೇರಿ ಇಬ್ಬರ ಬಂಧನ

Karnataka’s anil hegde rajyasabha candidate from bihar

ಬಿಹಾರ ರಾಜ್ಯಸಭಾ ಚುನಾವಣೆ ರೇಸ್‌ನಲ್ಲಿ ಕನ್ನಡಿಗ; ಕುಂದಾಪುರದ ಅನಿಲ್‌ ಹೆಗ್ಡೆ JDU ಅಭ್ಯರ್ಥಿ

Gyanvapi mosque committee Shivling as fountain.

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

ಕಾಯಿಲೆಗೆ ಶೀಘ್ರ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ

ಬಸವರಾಜ ಬೊಮ್ಮಾಯಿ ಎದುರಾಳಿ ಯಾರು?

ಬಸವರಾಜ ಬೊಮ್ಮಾಯಿ ಎದುರಾಳಿ ಯಾರು?

ನರೇಗಾ; 60 ಲಕ್ಷ ಮಾನವ ದಿನ ಸೃಜನೆ ಗುರಿ

ನರೇಗಾ; 60 ಲಕ್ಷ ಮಾನವ ದಿನ ಸೃಜನೆ ಗುರಿ

14

ಕಳಪೆ ಕಾಮಗಾರಿ ವಿರುದ್ಧ ಕೈ ಅಭಿಯಾನ ಶೀಘ್ರ

13

ಪಶು ವೈದ್ಯ ಸೇವೆ ಪುಣ್ಯ ಕಾರ್ಯ: ಜಿಲ್ಲಾಧಿಕಾರಿ ಶೆಟ್ಟೆಣ್ಣವರ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

7

ಮಾರುತಿ ದೇವಸ್ಥಾನಕ್ಕೆ ಮಹಾದ್ವಾರ ಸಮರ್ಪಣೆ

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

drainage

ಕುತ್ಪಾಡಿ: ವಾಣಿಜ್ಯ ಕಟ್ಟಡಗಳ ಡ್ರೈನೇಜ್‌ ನೀರು, ತ್ಯಾಜ್ಯ ತೋಡಿಗೆ

6

ಅರಣ್ಯ ಭೂಮಿ ಹಕ್ಕು ಸಮಸ್ಯೆ ಪರಿಹರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.