ಉದಾಸಿಗೆ ವರವಾದ ಮೋದಿ ಅಲೆ

Team Udayavani, May 24, 2019, 2:40 PM IST

ಹಾವೇರಿ: ಭಾರೀ ಕುತೂಹಲ ಕೆರಳಿಸಿದ್ದ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ಅಲೆ ಕೈ ಹಿಡಿದರೆ, ರಾಹುಲ್ ಗಾಂಧಿ ಭಾಷಣ ಕಾಂಗ್ರೆಸ್‌ಗೆ ಕೈಕೊಟ್ಟಿದೆ.

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಬಿಜೆಪಿ, ಎರಡು ಕಾಂಗ್ರೆಸ್‌ ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಇದ್ದಾರೆ. ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರ ಸಂಖ್ಯೆ ಅಧಿಕವಾಗಿದ್ದರಿಂದ ಹಾಗೂ ಶಿವಕುಮಾರ ಉದಾಸಿ ಸಹ ಹಾಲಿ ಸಂಸದರಾಗಿರುವುದರಿಂದ ಬಿಜೆಪಿ ಇಮ್ಮಡಿಸಿತು.

ಮೋದಿ ಅಲೆ ಈ ದೊಡ್ಡ ಪ್ರಮಾಣದಲ್ಲಿ ಉದಾಸಿಯವರಿಗೆ ಕೈ ಹಿಡಿದಿರುವುದರಿಂದ ಗೆಲುವಿನ ಅಂತರ 1.40 ಲಕ್ಷಕ್ಕೆ ಏರಿತು. ಕಳೆದ ಬಾರಿ ಗೆಲುವಿನ ಅಂತರ 87 ಸಾವಿರ ಇತ್ತು. ಈ ಬಾರಿ ಶೇ.74.01 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.3 ಮತದಾನ ಹೆಚ್ಚಳವಾಗಿತ್ತು. ಯುವ ಮತದಾರರು ಮೋದಿ ಕಡೆ ಆಕರ್ಷಿತರಾಗಿರುವುದು ಸಹ ಉದಾಸಿಯವರಿಗೆ ಜಯದ ಹಾದಿ ಸುಗಮವಾಯಿತು. ಶಿವಕುಮಾರ ಉದಾಸಿ ಹಾಲಿ ಸಂಸದರಾಗಿದ್ದು, ಅವರ ಅವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ, ಕೇಂದ್ರ ಸರ್ಕಾರದ ಸಾಧನೆ, ವರ್ಷದ ಮೊದಲೇ ಪಕ್ಷದಿಂದ ಹಾಲಿ ಸಂಸದರಿಗೆ ಟಿಕೆಟ್ ಖಚಿತವಾಗಿದ್ದು, ಉದಾಸಿಯವರಿಗೆ ವರವಾ ಯಿತು. ಮೋದಿ ಅಲೆ ಜತೆಗೆ ಸರ್ಜಿಕಲ್ ಸೈóಕ್‌ ವಿಚಾರ ಹೆಚ್ಚು ಮತ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಬಾರಿ ಲೋಕಸಭೆ ಚುನಾವಣೆ ಮತದಾನ ಶೇ. 74.01ರಷ್ಟಾಗಿದೆ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.71.59 ಮತದಾನವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ. 2.42 ಮತದಾನ ಹೆಚ್ಚಳವಾಗಿತ್ತು. ಹೆಚ್ಚಳ ಮತದಾನ ಬಿಜೆಪಿಗೆ ಲಾಭ ತಂದುಕೊಟ್ಟಿದೆ.

ಕಾಂಗ್ರೆಸ್‌ ಸೋಲಿಗೆ ಕಾರಣವೇನು?: ಕಾಂಗ್ರೆಸ್‌ 1962ರಿಂದ 2014ರ ವರೆಗೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯವರಿಗೆ ಟಿಕೆಟ್ ನೀಡುತ್ತ ಬಂದಿತ್ತು. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಮುಸ್ಲೀಮೇತರರಿಗೆ ಟಿಕೆಟ್ ನೀಡುವ ಮೂಹಾವೇರಿ: ಭಾರೀ ಕುತೂಹಲ ಕೆರಳಿಸಿದ್ದ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ಅಲೆ ಕೈ ಹಿಡಿದರೆ, ರಾಹುಲ್ ಗಾಂಧಿ ಭಾಷಣ ಕಾಂಗ್ರೆಸ್‌ಗೆ ಕೈಕೊಟ್ಟಿದೆ.

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಬಿಜೆಪಿ, ಎರಡು ಕಾಂಗ್ರೆಸ್‌ ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಇದ್ದಾರೆ. ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರ ಸಂಖ್ಯೆ ಅಧಿಕವಾಗಿದ್ದರಿಂದ ಹಾಗೂ ಶಿವಕುಮಾರ ಉದಾಸಿ ಸಹ ಹಾಲಿ ಸಂಸದರಾಗಿರುವುದರಿಂದ ಬಿಜೆಪಿ ಇಮ್ಮಡಿಸಿತು.

ಮೋದಿ ಅಲೆ ಈ ದೊಡ್ಡ ಪ್ರಮಾಣದಲ್ಲಿ ಉದಾಸಿಯವರಿಗೆ ಕೈ ಹಿಡಿದಿರುವುದರಿಂದ ಗೆಲುವಿನ ಅಂತರ 1.40 ಲಕ್ಷಕ್ಕೆ ಏರಿತು. ಕಳೆದ ಬಾರಿ ಗೆಲುವಿನ ಅಂತರ 87 ಸಾವಿರ ಇತ್ತು. ಈ ಬಾರಿ ಶೇ.74.01 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.3 ಮತದಾನ ಹೆಚ್ಚಳವಾಗಿತ್ತು. ಯುವ ಮತದಾರರು ಮೋದಿ ಕಡೆ ಆಕರ್ಷಿತರಾಗಿರುವುದು ಸಹ ಉದಾಸಿಯವರಿಗೆ ಜಯದ ಹಾದಿ ಸುಗಮವಾಯಿತು. ಶಿವಕುಮಾರ ಉದಾಸಿ ಹಾಲಿ ಸಂಸದರಾಗಿದ್ದು, ಅವರ ಅವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ, ಕೇಂದ್ರ ಸರ್ಕಾರದ ಸಾಧನೆ, ವರ್ಷದ ಮೊದಲೇ ಪಕ್ಷದಿಂದ ಹಾಲಿ ಸಂಸದರಿಗೆ ಟಿಕೆಟ್ ಖಚಿತವಾಗಿದ್ದು, ಉದಾಸಿಯವರಿಗೆ ವರವಾ ಯಿತು. ಮೋದಿ ಅಲೆ ಜತೆಗೆ ಸರ್ಜಿಕಲ್ ಸೈóಕ್‌ ವಿಚಾರ ಹೆಚ್ಚು ಮತ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಬಾರಿ ಲೋಕಸಭೆ ಚುನಾವಣೆ ಮತದಾನ ಶೇ. 74.01ರಷ್ಟಾಗಿದೆ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.71.59 ಮತದಾನವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ. 2.42 ಮತದಾನ ಹೆಚ್ಚಳವಾಗಿತ್ತು. ಹೆಚ್ಚಳ ಮತದಾನ ಬಿಜೆಪಿಗೆ ಲಾಭ ತಂದುಕೊಟ್ಟಿದೆ.

ಕಾಂಗ್ರೆಸ್‌ ಸೋಲಿಗೆ ಕಾರಣವೇನು?: ಕಾಂಗ್ರೆಸ್‌ 1962ರಿಂದ 2014ರ ವರೆಗೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯವರಿಗೆ ಟಿಕೆಟ್ ನೀಡುತ್ತ ಬಂದಿತ್ತು. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಮುಸ್ಲೀಮೇತರರಿಗೆ ಟಿಕೆಟ್ ನೀಡುವ ಮೂಲಕ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಯಿತು. 1999ರಲ್ಲಿ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನವರಾದ ಪ್ರೊ. ಐ.ಜಿ. ಸನದಿ ವಿಜಯಶಾಲಿಯಾಗಿದ್ದರು. ಈ ಬಾರಿಯೂ ಗದಗ ಮೂಲದ ಡಿ.ಆರ್‌. ಪಾಟೀಲ ಅವರನ್ನು ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಅಲ್ಪಸಂಖ್ಯಾತರನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ವಿಫಲರಾಗಿದ್ದರಿಂದ ಕಾಂಗ್ರೆಸ್‌ ಹಿನ್ನಡೆ ಅನುಭವಿಸಬೇಕಾಯಿತು. ಸದಾ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿದ್ದು ಪ್ರತ್ಯೇಕ ನಡೆ ತೋರ್ಪಡಿಸುವ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಆದರೆ, ಅದು ಫಲಪ್ರದವಾಗಿಲ್ಲ.

ಡಿ.ಆರ್‌. ಪಾಟೀಲ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ಹೊಸ ಅಭ್ಯರ್ಥಿಯಾಗಿದ್ದರಿಂದ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಪರಿಚಿತರಾಗಿರಲಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದೊಳಗಿನ ಭಿನ್ನಮತ ಮತದಾರರಲ್ಲಿ ಬೇಸರ ಮೂಡಿಸಿತ್ತು. ಈ ಕಾರಣಗಳು ಸಹ ಕಾಂಗ್ರೆಸ್‌ಗೆ ಸೋಲಿಗೆ ಸಹಕಾರಿಯಾದವು.

ಮೋಡಿ ಮಾಡದ ರಾಹುಲ್: ಈ ಬಾರಿ ಮೋದಿ ಅಲೆ ಇಲ್ಲ. ಪ್ರಧಾನಿ ಮೋದಿಯವರು ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆಗಳಲ್ಲಿ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಬಡವರನ್ನು ಮರೆತಿದ್ದು, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದೆಲ್ಲ ಆರೋಪ ಮಾಡುತ್ತಲೇ ಕಾಂಗ್ರೆಸ್‌ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿತ್ತು. ಪ್ರಚಾರಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹಾವೇರಿಗೆ ಭೇಟಿ ನೀಡಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಭರ್ಜರಿ ಭಾಷಣ ಮಾಡಿದ್ದರು. ಆದರೆ, ಭಾಷಣಕ್ಕೆ ಕ್ಷೇತ್ರದ ಮತದಾರರು ಮೋಡಿಯಾಗಿಲ್ಲ.

ಬದಲಾಗಿ ಮೋದಿಯನ್ನೇ ಬೆಂಬಲಿಸುವ ಮೂಲಕ ಬಿಜೆಪಿ ಶಿವಕುಮಾರ ಉದಾಸಿ ಅವರನ್ನು ಆಯ್ಕೆ ಮಾಡಿದ್ದಾರೆ.ಲಕ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಯಿತು. 1999ರಲ್ಲಿ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನವರಾದ ಪ್ರೊ. ಐ.ಜಿ. ಸನದಿ ವಿಜಯಶಾಲಿಯಾಗಿದ್ದರು. ಈ ಬಾರಿಯೂ ಗದಗ ಮೂಲದ ಡಿ.ಆರ್‌. ಪಾಟೀಲ ಅವರನ್ನು ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಅಲ್ಪಸಂಖ್ಯಾತರನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ವಿಫಲರಾಗಿದ್ದರಿಂದ ಕಾಂಗ್ರೆಸ್‌ ಹಿನ್ನಡೆ ಅನುಭವಿಸಬೇಕಾಯಿತು. ಸದಾ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿದ್ದು ಪ್ರತ್ಯೇಕ ನಡೆ ತೋರ್ಪಡಿಸುವ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಆದರೆ, ಅದು ಫಲಪ್ರದವಾಗಿಲ್ಲ.

ಡಿ.ಆರ್‌. ಪಾಟೀಲ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ಹೊಸ ಅಭ್ಯರ್ಥಿಯಾಗಿದ್ದರಿಂದ ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಪರಿಚಿತರಾಗಿರಲಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದೊಳಗಿನ ಭಿನ್ನಮತ ಮತದಾರರಲ್ಲಿ ಬೇಸರ ಮೂಡಿಸಿತ್ತು. ಈ ಕಾರಣಗಳು ಸಹ ಕಾಂಗ್ರೆಸ್‌ಗೆ ಸೋಲಿಗೆ ಸಹಕಾರಿಯಾದವು.

ಮೋಡಿ ಮಾಡದ ರಾಹುಲ್: ಈ ಬಾರಿ ಮೋದಿ ಅಲೆ ಇಲ್ಲ. ಪ್ರಧಾನಿ ಮೋದಿಯವರು ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆಗಳಲ್ಲಿ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಬಡವರನ್ನು ಮರೆತಿದ್ದು, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದೆಲ್ಲ ಆರೋಪ ಮಾಡುತ್ತಲೇ ಕಾಂಗ್ರೆಸ್‌ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿತ್ತು. ಪ್ರಚಾರಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹಾವೇರಿಗೆ ಭೇಟಿ ನೀಡಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಭರ್ಜರಿ ಭಾಷಣ ಮಾಡಿದ್ದರು. ಆದರೆ, ಭಾಷಣಕ್ಕೆ ಕ್ಷೇತ್ರದ ಮತದಾರರು ಮೋಡಿಯಾಗಿಲ್ಲ. ಬದಲಾಗಿ ಮೋದಿಯನ್ನೇ ಬೆಂಬಲಿಸುವ ಮೂಲಕ ಬಿಜೆಪಿ ಶಿವಕುಮಾರ ಉದಾಸಿ ಅವರನ್ನು ಆಯ್ಕೆ ಮಾಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ