Udayavni Special

ವರಾಹ ನಿಗ್ರಹಕ್ಕೆ ನಗರಸಭೆ ಸಮರ

15 ದಿನದಲ್ಲಿ ಹಂದಿಗಳ ಸ್ಥಳಾಂತರಕ್ಕೆ ನೋಟಿಸ್‌,c ಖಾಲಿ ಜಾಗ ಸ್ವಚ್ಛಗೊಳಿಸಿ ಉತಾರದ ಮೇಲೆ ಬೋಜಾ

Team Udayavani, Mar 1, 2021, 4:50 PM IST

ವರಾಹ ನಿಗ್ರಹಕ್ಕೆ ನಗರಸಭೆ ಸಮರ

ಹಾವೇರಿ: ನಗರ ಬೆಳೆದಂತೆ ಕೊಳಚೆ, ತ್ಯಾಜ್ಯವೂ ಹೆಚ್ಚುತ್ತಿದ್ದು, ಅದರ ಜತೆಗೆ ಹಂದಿಗಳ ಸಂತತಿಯೂ ಬೆಳೆಯುತ್ತಿದೆ. ಈಗಅದರ ನಿಯಂತ್ರಣ ನಗರಸಭೆಗೆ ದೊಡ್ಡ ಸವಾಲಾಗಿದೆ. ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿರುವ ನಗರದಲ್ಲಿ ತುರ್ತಾಗಿಹಂದಿ ಕಾಟ ನಿಗ್ರಹಿಸುವುದು ಅನಿವಾರ್ಯವಾಗಿದ್ದು, ನಗರಸಭೆಯಿಂದ ಶೀಘ್ರ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುತ್ತಿರುವುದರಿಂದ ನಗರಕ್ಕೆ ಲಕ್ಷಾಂತರ ಜನರುಆಗಮಿಸುವ ಹಿನ್ನೆಲೆಯಲ್ಲಿ ನಗರ ಸೌಂದರ್ಯಿಕರಣ,ನೈರ್ಮಲ್ಯ ಕಾಪಾಡುವುದು ಮುಖ್ಯವಾಗಿದೆ. ಆದರೆ,ನಗರದಲ್ಲಿ ಹಂದಿ ಹಾವಳಿ ವಿಪರೀತವಾಗಿದ್ದು, ಎಲ್ಲೆಂದರಲ್ಲಿ ಕಾಣಿಸುವ ಹಂದಿಗಳ ಹಿಂಡು ಕೊಚ್ಚೆಯನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಿವೆ. ಸಮ್ಮೇಳನದೊಳಗೆ ಹಂದಿ ಹಾವಳಿ ತಪ್ಪಿಸದಿದ್ದರೆ ಇಲ್ಲಿಗೆ ಬಂದವರು ಇದು ಏಲಕ್ಕಿ ಕಂಪಿನ ನಾಡೋ ಅಥವಾ ಹಂದಿಗಳ ಬೀಡೋ ಎಂದು ಆಡಿಕೊಳ್ಳುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ನಗರಸಭೆ ನಗರದ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಿದೆ.

ಹಂದಿ ನಿಯಂತ್ರಣ ಸವಾಲು: ಇಲ್ಲಿರುವ ಹಂದಿ ಹಾವಳಿ ನೋಡಿ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಖಾಲಿ ನಿವೇಶನಗಳಲ್ಲಿ ಕಸ, ತ್ಯಾಜ್ಯ ಎಸೆಯುತ್ತಿರುವುದರಿಂದ ಅವುಹಂದಿಗಳ ಆವಾಸ ತಾಣವಾಗುತ್ತಿವೆ. ಪೌರಕಾರ್ಮಿಕರು ನಗರ ಸ್ವತ್ಛತೆಗೆ ಎಷ್ಟೇ ಶ್ರಮಿಸುತ್ತಿದ್ದರೂ ಹಂದಿಗಳು ಅವರ ಶ್ರಮವನ್ನು ಕ್ಷಣಾರ್ಧದಲ್ಲಿ ವ್ಯರ್ಥಗೊಳಿಸುತ್ತಿವೆ. ಸಂತೆ, ಮಾರುಕಟ್ಟೆ ಪ್ರದೇಶ, ಬಸ್‌ ನಿಲ್ದಾಣ, ಹೋಟೆಲ್‌ ಸುತ್ತಮುತ್ತ ಹಂದಿಗಳ ಹಿಂಡೇ ಕಾಣುತ್ತಿವೆ. ಹಂದಿ ಕಾಟದಿಂದ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಂದಿ ನಿರ್ಮೂಲನೆಗೆ ಪಣ: ನಗರಸಭೆ ಅಧ್ಯಕ್ಷ‌ರಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಸಂಜೀವಕುಮಾರ ನೀರಲಗಿ ಅವರು ಹಂದಿ ನಿರ್ಮೂಲನೆಜತೆಗೆ ನಗರ ಸೌಂದರ್ಯಿಕರಣಕ್ಕೆ ಮುಂದಾಗಿರುವುದುಆಶಾದಾಯಕ ಬೆಳವಣಿಗೆ. 15 ದಿನಗ ಳೊಳಗಾಗಿ ಹಂದಿ ಸ್ಥಳಾಂತರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಎಚ್ಚರಿಕೆ ನೀಡಿದ್ದಾರೆ. ಈ ಗಡುವು ಮುಗಿದಿದ್ದರೂ ಹಂದಿ ಮಾಲಿಕರು ಇದುವರೆಗೆ ಯಾವುದೇ  ಕ್ರಮಕೈಗೊಂಡಿಲ್ಲ. ಇನ್ನು ಖಾಲಿ ನಿವೇಶನದಾರರಿಗೂ ನೋಟಿಸ್‌ ನೀಡಲಾಗಿದ್ದು, ಸ್ವಚ್ಛಗೊಳಿಸದಿದ್ದರೆ ನಗರಸಭೆಯಿಂದಲೇ ಆ ಜಾಗವನ್ನು ಸ್ವಚ್ಛಗೊಳಿಸಿ ಅದಕ್ಕೆ ತಗಲುವ ಖರ್ಚನ್ನು ಜಾಗದ ಉತಾರದ ಮೇಲೆ ಭೋಜಾ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಸಂಬಂಧಪಟ್ಟವರು ಗಮನ ನೀಡುತ್ತಿಲ್ಲ.

ತ್ಯಾಜ್ಯ ಸಂಗ್ರಹಣೆಯಲ್ಲಿ ನಗರಸಭೆ ನಿರ್ಲಕ್ಷ್ಯ :

ನಗರಸಭೆ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. 31 ವಾರ್ಡ್‌ಗಳಿದ್ದು, ಕೆಲ ಮುಂದುವರಿದ ವಾರ್ಡ್‌ಗಳಲ್ಲಷ್ಟೇ ಸ್ವಲ್ಪ ಮಟ್ಟಿಗೆ ಕಸ ತ್ಯಾಜ್ಯ ಸಂಗ್ರಹಣೆ ನಡೆಯುತ್ತಿದೆ. ನಿತ್ಯವೂ ಘನ ಮತ್ತು ಹಸಿ ತ್ಯಾಜ್ಯ ಸಂಗ್ರಹಿಸಬೇಕೆಂಬ ನಿಯಮವಿದ್ದರೂ ಕೆಲವು ವಾರ್ಡ್‌ಗಳಲ್ಲಿ ವಾರದಲ್ಲಿ ಒಂದು, ಎರಡು ಬಾರಿ ಮಾತ್ರ ಮನೆ ಮನೆಯಿಂದತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಜನರು ಅಕ್ಕಪಕ್ಕದ ಖಾಲಿನಿವೇಶನಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಅದಕ್ಕಾಗಿ ತ್ಯಾಜ್ಯ ಸಂಗ್ರಹಣೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ನಗರಸೌಂದರ್ಯಿಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಹಂದಿ ಮಾಲಿಕರಿಗೆ ನೀಡಿದ್ದ ಗಡುವುಮುಗಿದಿದೆ. ಮತ್ತೂಂದು ಬಾರಿ ಅವರಿಗೆ ಮನವರಿಕೆ ಮಾಡುತ್ತೇವೆ. ಶೀಘ್ರವೇ ನಗರಸಭೆ ಸಾಮಾನ್ಯ ಸಭೆಕರೆದು ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸುವ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ಖಾಲಿ ನಿವೇಶನ ಸ್ವಚ್ಛತೆಗೂ ಕ್ರಮ ಕೈಗೊಳ್ಳಲಾಗುವುದು. -ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ

ಟಾಪ್ ನ್ಯೂಸ್

Migrants fear 2020 replay, say may run out of work and resources if lockdown extended

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

hjkhku

‘ಸಂಪೂರ್ಣ ಲಾಕ್‍ಡೌನ್‍’ ಹೇರುವಂತೆ ಸಿಎಂಗೆ ಸಚಿವರುಗಳಿಂದ ಮನವಿ

ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ

ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ

ಜಹಗ್ದಸ಻ಧಶಧ‍್್

ರಾಜ್ಯಪಾಲರು ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗಿದ್ದು ಸಂವಿಧಾನ ಬಾಹಿರ : ಸಿದ್ದರಾಮಯ್ಯ

ಮಂಡ್ಯ ಜಿಲ್ಲೆಯಲ್ಲಿಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು –  ಸಚಿವ ಡಾ. ನಾರಾಯಣಗೌಡ

ಮಂಡ್ಯ ಜಿಲ್ಲೆಯಲ್ಲಿಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು –  ಸಚಿವ ಡಾ. ನಾರಾಯಣಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rtete

ಹಾನಗಲ್ಲನಲ್ಲಿ ಕುಡಿವ ನೀರಿಗೆ ಆಗದು ತೊಂದರೆ!

hrtr

ಹಾವೇರಿಯಲ್ಲಿ ರಸ್ತೆಗಿಳಿದ 140 ಬಸ್‌: ಪ್ರಯಾಣಿಕರ ನಿಟ್ಟುಸಿರು

cfnghfgf

ಸಮನ್ವಯದಿಂದ ಯುದ್ದೋಪಾದಿ ಕೆಲಸ ಮಾಡಿ : ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ghnfghf

 ಸಾರಿಗೆ ನೌಕರರ ಮುಷ್ಕರ ರಾಜಕೀಯ ಪ್ರೇರಿತ : ಡಾ| ಬಸವರಾಜ ಕೇಲಗಾರ

fgndfr

ಹಾವೇರಿ ಜಿಲ್ಲೆಯಲ್ಲಿ ಮತ್ತೆ ಎರಡಂಕಿ ದಾಟಿದ ಕೋವಿಡ್

MUST WATCH

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

udayavani youtube

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

ಹೊಸ ಸೇರ್ಪಡೆ

Migrants fear 2020 replay, say may run out of work and resources if lockdown extended

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಕೋವಿಡ್  ನಿಯಂತ್ರಣದಲ್ಲಿ  ಲೋಪವಾಗದಿರಲಿ

ಕೋವಿಡ್ ನಿಯಂತ್ರಣದಲ್ಲಿ ಲೋಪವಾಗದಿರಲಿ

Bega

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ

DC-Raga

ಕೋವಿಡ್‌ ಕೇರ್‌ ಸೆಂಟರ್‌ ಪರಿಶೀಲಿಸಿದ ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.