ವಾಡೆಯಲ್ಲಿ ಖಾಸಗಿ ದರ್ಬಾರ್‌

Team Udayavani, Oct 7, 2019, 1:21 PM IST

ಹಾವೇರಿ: ಮೈಸೂರು ಮಹಾರಾಜರ ಖಾಸಗಿ ದರ್ಬಾರ್‌ ಮಾದರಿಯಲ್ಲಿ ತಾಲೂಕಿನ ಹಂದಿಗನೂರ ಗ್ರಾಮದ ವಾಡೆಯಲ್ಲಿಯೂ ದೇಸಾಯಿ ಮನೆತನದವರು ಖಾಸಗಿ ದರ್ಬಾರ್‌ ಸಂಪ್ರದಾಯ ಮುಂದುವರಿಸಿಕೊಂಡು ಬಂದು ಗಮನ ಸೆಳೆದಿದ್ದಾರೆ.

ಮೈಸೂರು ದಸರಾ ಆರಂಭವಾದ ಒಂದು ವರ್ಷದ ಬಳಿಕ ಹಂದಿಗನೂರ ಗ್ರಾಮದ ವಾಡೆಯಲ್ಲಿಯೂ ದೇಸಾಯಿ ಮನೆತನದವರು ಖಾಸಗಿ ದರ್ಬಾರ್‌ ಆರಂಭಿಸಿದರು. ಅಂದಿನಿಂದ ಇಂದಿನ ವರೆಗೂ ಕಳೆದ ನಾಲ್ಕು ಶತಮಾನಗಳಿಂದ ಹಂದಿಗನೂರು  ಗ್ರಾಮದ ದೇಸಾಯಿ ಮನೆತನದವರು ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷ ಖಾಸಗಿ ದರ್ಬಾರ್‌ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸುತ್ತ ಬಂದಿದ್ದಾರೆ. ಮೈಸೂರಿನ ಅರಸರು ಅರಮನೆಯಲ್ಲಿ ಖಾಸಗಿ ದರ್ಬಾರ್‌ ನಡೆಸಿದರೆ, ಹಂದಿಗನೂರ ದೇಸಾಯಿ ಮನೆತನದವರು ವಾಡೆಯಲ್ಲಿ ಖಾಸಗಿ ದರ್ಬಾರ್‌ ನಡೆಸುತ್ತಾರೆ. ಹಂದಿಗನೂರ ಮಾಮಲೆ ದೇಸಾಯಿ ಸಂಸ್ಥಾನದ ವಂಶಸ್ಥರು ನಡೆಸುತ್ತಿರುವ ಖಾಸಗಿ ದರ್ಬಾರ್‌ಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಇದು ಈಗ ಸಾಂಕೇತಿಕ ಆಚರಣೆ ಸೀಮಿತವಾಗಿರಬಹುದು. ಆದರೆ, ಇಂದಿಗೂ ಅದರ ಹೊಳಪು ಮಾತ್ರ ಹಾಗೆಯೇ ಇದೆ.

ಖಾಸಗಿ ದರ್ಬಾರ್‌: ಹಂದಿಗನೂರ ಮಾಮಲೆದೇಸಾಯಿ ಅವರು ಬಿಳಿ ಬಣ್ಣದ ರೇಷ್ಮೆ ವಸ್ತ್ರ ಹಾಕಿಕೊಂಡು ವಾಡೆಯಲ್ಲಿ ಕುಳಿತು ಖಾಸಗಿ ದರ್ಬಾರ್‌ ನಡೆಸುತ್ತಾರೆ. ಇದಕ್ಕೂ ಮುನ್ನ ವಾಡೆ ಪುರೋಹಿತರೊಂದಿಗೆ ಆಯುದ ಪ್ರಜೆ ನೆರವೇರಿಸುತ್ತಾರೆ. ನಂತರ ಗ್ರಾಮಸ್ಥರಿಂದ ಒಪ್ಪಿಗೆ ಪತ್ರ ಪಡೆದು ವಾಡೆ ಮಾಲೀಕರ ಸಂಪ್ರದಾಯದಂತೆ ಸೇವಕರಿಗೆ ಆಯುಧಗಳನ್ನು ನೀಡಿ ಖಾಸಗಿ ದರ್ಬಾರ್‌ ಆರಂಭಿಸುತ್ತಾರೆ.

ಬನ್ನಿ ಮುಡಿಯುವುದು: ಖಾಸಗಿ ದರ್ಬಾರ್‌ ಮುಗಿಸಿದ ನಂತರ ಗ್ರಾಮಸ್ಥರೊಂದಿಗೆ ಮೆರವಣಿಗೆ ಮೂಲಕ ತೆರಳುವ ಮಾಮಲೇದೇಸಾಯಿ ಅವರನ್ನು ಸೇರಿ ಗ್ರಾಮದ ದ್ಯಾಮವ್ವ ದೇವಿ ಪಲ್ಲಕ್ಕಿ, ಗಾಳೆವ್ವ ದೇವಿ ಪಲ್ಲಕ್ಕಿ , ದುರ್ಗಾದೇವಿ ಪಲ್ಲಕ್ಕಿ, ಬಸವೇಶ್ವರ ದೇವರ ಪಲ್ಲಕ್ಕಿ, ಆಮಜನೇಯ ದೇವರ ಪಲ್ಲಕ್ಕಿ, ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಗಿಡಕ್ಕೆ ವಿಶೇ‚ಷ ಪೂಜೆಸಲ್ಲಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ಬನ್ನಿ ಮುಡಿದು ಮೆರವಣಿಗೆ ಮೂಲಕ ವಾಪಸ್ಸಾಗುವ ಸಂದರ್ಭದಲ್ಲಿ ಮಾಮಲೇದೇಸಾಯಿ ಅವರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಹರಸುತ್ತಾರೆ. ಮೆರವಣಿಗೆ ವಾಡೆಗೆವಾಪಸ್ಸಾದನಂತರ ಗ್ರಾಮಸ್ಥರು ಮಾಮಲೆದೇಸಾಯಿ ಅವರಿಗೆ ಬನ್ನಿ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ನಂತರವೇ ಗ್ರಾಮದಲ್ಲಿ ಬನ್ನಿ ವಿನಿಮಯ ಕಾರ್ಯ ಆರಂಭವಾಗುತ್ತದೆ.

 

-ಎಚ್‌.ಕೆ. ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬ್ಯಾಡಗಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಂಬಂಧಿಸಿದ ಮಾತೃ ಇಲಾಖೆ ಕೆಲಸವನ್ನು ಹೊರತುಪಡಿಸಿ, ಇನ್ನಿತರ ಇಲಾಖೆಗಳ ಕೆಲಸಕ್ಕೆ ನಿಯೋಜಿಸದಂತೆ...

  • ಹಿರೇಕೆರೂರು: ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಬ್ಬಿಣಕಂಥಿಮಠದ ಸ್ವಾಮೀಜಿ ಗುರುವಾರ ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ. ರಟ್ಟೀಹಳ್ಳಿ...

  • ಬ್ಯಾಡಗಿ: ಪುರಸಭೆ ವ್ಯಾಪ್ತಿಗೆ ಒಳಪಡುವಂತೆ (ಲಿಮಿಟೇಶನ್‌ ಎಕ್ಸಟೆನ್ಶನ್‌) ಬ್ಯಾಡಗಿ ಹಾಗೂ ಸುತ್ತಲಿನ ಕಂದಾಯ ಗ್ರಾಮ (ಸಾಜಾ) ಗಳಿಂದ ಕೈಬಿಟ್ಟಿದ್ದ ಕೆಲ ರಿಜಿಸ್ಟರ್‌...

  • ಬಂಕಾಪುರ: ಗ್ರಾಮಸ್ಥರ ಸಹಕಾರ, ಶಾಲಾ ಸುಧಾರಣಾ ಸಮಿತಿ ಪ್ರೋತ್ಸಾಹ, ಶಿಕ್ಷಕರಲ್ಲಿಯ ಶಕ್ತಿ, ವಿದ್ಯಾರ್ಥಿಗಳ ಉತ್ಸಾಹ ಒಂದೆಡೆ ಸೇರಿದರೆ ಶಾಲೆ ಅಭಿವೃದ್ಧಿ ಪಥದತ್ತ...

  • ಹಾವೇರಿ: ಜಿಲ್ಲೆಯ ವಿಧಾನಸಭೆ ಉಪಚುನಾವಣೆ ನಡೆಯುವ ಹಿರೇಕೆರೂರು ಹಾಗೂ ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿರುಸಿನ ಮತ...

ಹೊಸ ಸೇರ್ಪಡೆ