ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

ಈ ನಿಟ್ಟಿನಲ್ಲಿ, ಪಾಲಕರು ಮತ್ತು ಮಕ್ಕಳು ಸೂಕ್ಷ್ಮವಾಗಿ ಚಿಂತನೆ ನಡೆಸಬೇಕಾಗಿದೆ

Team Udayavani, Jun 22, 2024, 5:46 PM IST

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಭವ್ಯ ಭಾರತವು ವಿಶ್ವಕ್ಕೆ ಯೋಗದಂತ ಬಹು ದೊಡ್ಡ ಪರಂಪರೆಯನ್ನು ಕೊಟ್ಟಿದೆ. ನಮ್ಮ ಪೂರ್ವಜ ಋಷಿ ಮುನಿಗಳು ನೀಡಿರುವ ಕಾಣಿಕೆ ಇದಾಗಿದ್ದು, ಅದರ ಕಲ್ಪನೆ ಮತ್ತು ಅರಿವು ನಮ್ಮೆಲ್ಲರಲ್ಲಿದ್ದರೆ ಭಾರತ ವಿಶ್ವಕ್ಕೆ ಮತ್ತಷ್ಟು ದೊಡ್ಡ ಗುರುವಾಗಲಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದ ಮಹಾರಾಜ ಹೇಳಿದರು.

ಶುಕ್ರವಾರ ಇಲ್ಲಿನ ರಾಜರಾಜೇಶ್ವರಿ ವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಮಹಿಳಾ ಸಬಲೀಕರಣಕ್ಕಾಗಿ ಯೋಗ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯವೂ ಆರೋಗ್ಯವಂತ ಬದುಕು ಸಾಗಿಸುವ ದಿವ್ಯ ಔಷಧಿ ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಆಯುರ್ವೇದ ನಮ್ಮ ದೇಶದಲ್ಲಿರುವ ಬಹುದೊಡ್ಡ ಅದ್ಭುತ ಕೊಡುಗೆಯಾಗಿದೆ. ದಿನನಿತ್ಯದ ಬದುಕಿನಲ್ಲಿ ಕೇವಲ 20 ನಿಮಿಷಗಳು ಅಳವಡಿಸಿಕೊಂಡರೆ ಸಾಕು ಯೋಗ ಪರಂಪರೆಯ ಭಾರತ ಎಲ್ಲ ರಾಷ್ಟ್ರಗಳಿಗೂ ಮತ್ತಷ್ಟು ಮಾದರಿಯಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ಡಾ| ಗಿರೀಶ ಭೋಜಣ್ಣನವರ ಮಾತನಾಡಿ, ಹಿತಮಿತ ಆಹಾರ ಮತ್ತು ಆಯುರ್ವೇದ ಪರಂಪರೆ ಜೊತೆಗೆ ನಿತ್ಯ ಯೋಗ ಬದುಕಿನಲ್ಲಿ ಅಳವಡಿಸಿಕೊಂಡರೆ ಇಂದಿನ ವಿದ್ಯಾರ್ಥಿಗಳು ಜ್ಞಾನ ವಿಜ್ಞಾನ ತಂತ್ರಜ್ಞಾನ ಸಂಪತ್ತನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ, ಪಾಲಕರು ಮತ್ತು ಮಕ್ಕಳು ಸೂಕ್ಷ್ಮವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್‌. ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರ ಬಿಜಾಪುರ, ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಮಾಲತಿಜೀ ಅಕ್ಕ, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಬಿಎಸ್‌ಟಿ ಜಿಲ್ಲಾಧ್ಯಕ್ಷ ರಾಮಸಿಂಗ್‌ ರಾಠೊಡ್‌, ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಎಂ.ಬಿ. ಮೋಟಳ್ಳಿ, ಲಲಿತಾ ಮೇಲಗಿರಿ, ಯೋಗ ಸಾಧಕ ಆರ್‌.ಬಿ. ಪಾಟೀಲ, ಕೆ.ಸಿ. ಕೋಮಲಾಚಾರಿ ಇದ್ದರು.

ಟಾಪ್ ನ್ಯೂಸ್

Yedamangala: ಶಾಲೆಯ ಸೊತ್ತುಗಳಿಗೆ ಹಾನಿ: ಪ್ರಕರಣ ದಾಖಲು

Yedamangala: ಶಾಲೆಯ ಸೊತ್ತುಗಳಿಗೆ ಹಾನಿ: ಪ್ರಕರಣ ದಾಖಲು

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-haveri

Haveri: ಮನೆ ಮೇಲ್ಛಾವಣಿ ಕುಸಿದು 18 ತಿಂಗಳ ಅವಳಿ ಮಕ್ಕಳು ಸೇರಿ ಮೂವರು ಸಾವು

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ

ರಾಣಿಬೆನ್ನೂರ: ದಾನ ಮಾಡುವ ಗುಣ ಶ್ರೇಷ್ಠ: ಸದಾನಂದ ಶ್ರೀ

ರಾಣಿಬೆನ್ನೂರ: ದಾನ ಮಾಡುವ ಗುಣ ಶ್ರೇಷ್ಠ: ಸದಾನಂದ ಶ್ರೀ

1-bike

Bike ಕೊಡಿಸಲಿಲ್ಲ ಎಂದು ಪುತ್ರ ಆತ್ಮಹತ್ಯೆ: ನೊಂದು ರೈಲಿಗೆ ತಲೆ ಕೊಟ್ಟ ತಾಯಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

kKadaba: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆKadaba: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Kadaba: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Mulleria ನವಜಾತ ಶಿಶು ಪತ್ತೆ: ತಾಯಿಯ ಬಂಧನ

Mulleria ನವಜಾತ ಶಿಶು ಪತ್ತೆ: ತಾಯಿಯ ಬಂಧನ

Yedamangala: ಶಾಲೆಯ ಸೊತ್ತುಗಳಿಗೆ ಹಾನಿ: ಪ್ರಕರಣ ದಾಖಲು

Yedamangala: ಶಾಲೆಯ ಸೊತ್ತುಗಳಿಗೆ ಹಾನಿ: ಪ್ರಕರಣ ದಾಖಲು

1-weewq

Bharamasagara; ಸ್ಥಳೀಯ ಟಿಪ್ಪರ್ ಗಳನ್ನು ಬಳಸಿಕೊಳ್ಳಲು ಆಗ್ರಹಿಸಿ ಪ್ರತಿಭಟನೆ

drowned

Harihara; ಕೊಚ್ಚಿ ಹೋಗಿದ್ದ ಯುವಕನ ಶವ 2 ಕಿ.ಮೀ ದೂರದಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.