ರಸ್ತೆ ಸುರಕ್ಷಾ ಸಪ್ತಾಹ-ಅಪರಾಧ ತಡೆ ಮಾಸಾಚರಣೆ
Team Udayavani, Jan 21, 2021, 3:57 PM IST
ಬಂಕಾಪುರ: ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತವನ್ನು ತಡೆಗಟ್ಟಿ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ ಎಂದು ಎಎಸ್‌ಐ ಡಿ.ಎನ್. ಕುಡಲ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ, ರೇಣುಕಾ ಚಿತ್ರಮಂದಿರ, ಮುಖ್ಯ ಮಾರುಕಟ್ಟೆ, ಸಿಂಪಿಗಲ್ಲಿ, ಆಸಾರಮೊಹಲ್ಲಾ ರಸ್ತೆಯ ಮೂಲಕ ಸಾಗಿ ಅಪರಾಧ ತಡೆ, ರಸ್ತೆ ಸುರಕ್ಷತಾ ಚಾಲನೆ ಬಗ್ಗೆ ಘೋಷಣೆ ಕೂಗಲಾಯಿತು. ನಂತರ ಪುನಃ ಪೊಲೀಸ್ ಠಾಣಾ ಆವರಣಕ್ಕೆ ತಲುಪಿ ಸಮಾರೋಪಗೊಂಡಿತು.
ಇದನ್ನೂ ಓದಿ:‘ಪರಾಕ್ರಂ ದಿವಸ್’ ಆಚರಣೆಗೆ ಮೋದಿ ಕೋಲ್ಕತ್ತಾಗೆ ಭೇಟಿ ಖಚಿತ : ಪಿಎಮ್ಒ
ಪೊಲೀಸ್ ಸಿಬ್ಬಂದಿ ಶಿವಾನಂದ ವನಹಳ್ಳಿ, ಎಸ್.ಕೆ. ಪೊಲೀಸ್‌ಗೌಡ್ರ, ಸಿ.ಪಿ. ಬಂಡೇರ, ಇಸ್ಮಾಯಿಲ್‌ಸಾಬ್ ಪೋಲೆರ, ಇಂತಿಯಾಸ್ ಬಾವಿ, ಪಿ. ಗುಡಿಕೇರಿ ಸೇರಿದಂತೆ ಸಾರ್ವಜನಿಕರು ಇದ್ದರು.