Udayavni Special

ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌: ಡಿಸಿ

Team Udayavani, May 29, 2021, 6:47 PM IST

28hvr8

ಹಾವೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತ ಮಕ್ಕಳಿಗಾಗಿ ಪ್ರತ್ಯೇಕ ಮಕ್ಕಳ ಕೋವಿಡ್‌ ವಾರ್ಡ್‌ ಆರಂಭಿಸಲಾಗಿದೆ ಹಾಗೂ ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ತೆರೆದು ಚಿಕಿತ್ಸೆ ಆರಂಭಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್‌ ನಿಯಂತ್ರಣ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದ ಅವರು, ಬ್ಲ್ಯಾಕ್‌ ಫಂಗಸ್‌ ಸೋಂಕು ತಗುಲಿದವರ ಚಿಕಿತ್ಸೆಗೆಗಾಗಿ 15 ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬ್ಲಾಕ್‌ ಫಂಗಸ್‌ ಶಂಕಿತ ಏಳು ಜನರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಕುರಿತಂತೆ ಲ್ಯಾಬ್‌ಗ ಸ್ಯಾಂಪಲ್‌ ಕಳುಹಿಸಲಾಗಿದೆ ಎಂದರು.

ಬ್ಲ್ಯಾಕ್‌ ಫಂಗಸ್‌ಗೆ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಅಂಪೊಟೊರಿಸೀನ್‌ ಔಷಧ ಪೂರೈಕೆಯಾಗಿದೆ. ಚಿಕಿತ್ಸೆಗೆ ಯಾವುದೇ ಔಷ ಧೀಯ ತೊಂದರೆ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಸಂಪರ್ಕದಿಂದ ಹರಡುವ ಸೋಂಕಲ್ಲ. ಸೂಕ್ತ ಚಿಕಿತ್ಸೆಯಿಂದ ಬ್ಲ್ಯಾಕ್‌ ಫಂಗಸ್‌ ಸೋಂಕು ನಿವಾರಣೆಯಾಗಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 240ಕ್ಕೂ ಅ ಧಿಕ ಆಕ್ಸಿಜನ್‌ ಸಹಿತ ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ವೆಂಟಿಲೇಟರ್‌ ಹಾಗೂ ಐಸಿಯು ವ್ಯವಸ್ಥೆಯ ಬೆಡ್‌ಗಳ ಸಂಖ್ಯೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ 53ಕ್ಕೆ ಹೆಚ್ಚಿಸಲಾಗಿದೆ. ಈ ಪೈಕಿ 22 ಬೆಡ್‌ಗಳನ್ನು ಸಾರಿ ಪ್ರಕರಣಗಳಿಗೆ ಪ್ರತ್ಯೇಕ ಮೀಸಲಿರಿಸಲಾಗಿದೆ.

ಮೋಟೆಬೆನ್ನೂರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ರಾಣಿಬೆನ್ನೂರಲ್ಲಿ 22 ಆಕ್ಸಿಜನ್‌ ಬೆಡ್‌ ಹೆಚ್ಚಿಸಲಾಗಿದೆ. ಹಿರೇಕೆರೂರಲ್ಲಿ 13 ಆಕ್ಸಿಜನ್‌ ಬೆಡ್‌ ಹೆಚ್ಚಿಸಲಾಗಿದೆ ಹಾಗೂ ಮೂರು ಐಸಿಯು ಸಹಿತ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಬ್ಯಾಡಗಿಗೆ 17 ಬೆಡ್‌ ಒದಗಿಸಿ ಪ್ರತ್ಯೇಕ ಕೋವಿಡ್‌ ವಾರ್ಡ್‌ ಆರಂಭಿಸಲಾಗಿದೆ. ಬ್ಯಾಡಗಿ ಕ್ರೀಡಾಂಗಣ ಭವನದಲ್ಲಿ 10 ಬೆಡ್‌ ಗಳನ್ನು ಹೆಚ್ಚುವರಿಯಾಗಿ ಸಿದ್ಧಪಡಿಸಲಾಗಿದ್ದು, ಸೋಂಕಿತರು ಅಧಿಕವಾದಲ್ಲಿ ಅಗತ್ಯ ಸಂದರ್ಭದಲ್ಲಿ ಬಳಸಲಾಗುವುದು. ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ 20 ಬೆಡ್‌ಗಳನ್ನು ಆಕ್ಸಿಜನ್‌ ವ್ಯವಸ್ಥೆಯೊಂದಿಗೆ ಸಿದ್ಧಪಡಿಸಲಾಗಿದೆ.

ಸವಣೂರ ಹಾಗೂ ಶಿಗ್ಗಾವಿ ಆಸ್ಪತ್ರೆಗೆ ತಲಾ 20 ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿಸಲಾಗಿದೆ. ಬಂಕಾಪೂರದಲ್ಲಿ 10 ಆಕ್ಸಿಜನ್‌ ಬೆಡ್‌ಗಳನ್ನು ಆರಂಭಿಸಲಾಗಿದೆ ಹಾಗೂ ಮಾಟೇìಬಲ್‌ ಎಕ್ಸರೇ ಒದಗಿಸಲಾಗಿದೆ. 35 ಕೆವಿ ಜನರೇಟರ್‌ಗೆ ಆದೇಶಿಸಲಾಗಿದ್ದು, ಶೀಘ್ರ ಆಳವಡಿಸಲಾಗುವುದು.

ಆಕ್ಕಿಆಲೂರಿಗೆ 10 ಹಾಗೂ ರಟ್ಟಿಹಳ್ಳಿಗೆ ನಾಲ್ಕು ಹೆಚ್ಚುವರಿ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾ ವಾರ್‌ ರೂಂ ಬಲಪಡಿಸಲಾಗಿದೆ. ದಿನದ 24 ತಾಸು ಕಾರ್ಯನಿರ್ವಹಿಸುವಂತೆ 40ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ವಾರ್‌ ರೂಂನಲ್ಲಿ 10 ಟೆಲಿಪೋನ್‌ ಸಂಪರ್ಕಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ ಎಂದು ಹೇಳಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೊಂದಿಗೆ ವಿಲಿನಗೊಂಡ ಜಿಲ್ಲೆಯ 10 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಕೋಟಾದ 281 ಬೆಡ್‌ ಗಳು ಲಭ್ಯವಿವೆ. ಈವರೆಗೆ ಆರು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ಶೇ.50 ರಷ್ಟು ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಬೇಕಾಗಿದೆ. ಈ ಬೆಡ್‌ಗಳನ್ನು ಸರ್ಕಾರವೇ ರೋಗಿಗಳಿಗೆ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.

ಆಕ್ಸಿಜನ್‌ ಪೂರೈಕೆ: ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆಯಿಲ್ಲ. ಜಿಲ್ಲೆಗೆ 6 ಕೆಎಲ್‌ ಆಕ್ಸಿಜನ್‌ ನಿಗ ದಿಯಾಗಿದೆ. ಇನ್ನೂ ಹೆಚ್ಚಿನ ಬೆಡ್‌ಗಳಿಗೆ ಆಕ್ಸಿಜನ್‌ ಒದಗಿಸಲು 2 ಕೆಎಲ್‌ ಆಕ್ಸಿಜನ್‌ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಪಾಸಿಟಿವ್‌ ದರ ಇಳಿಕೆ: ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಶೇ.8.34 ರಷ್ಟು ಮಾತ್ರ ಬಂದಿದೆ. ಸೋಂಕು ಇಳಿಮುಖವಾಗುತ್ತಿರುವುದಕ್ಕೆ ಜಿಲ್ಲಾ  ಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಸ್ಪಿ ಕೆಜಿ ದೇವರಾಜು, ಜಿಪಂ ಸಿಇಒ ಮಹಮ್ಮದ ರೋಷನ್‌, ಅಪರ ಡಿಸಿ ಎಸ್‌.ಯೋಗೇಶ್ವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌.ಹಾವನೂರ ಇತರರಿದ್ದರು.

ಟಾಪ್ ನ್ಯೂಸ್

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

\172.17.1.5ImageDirUdayavaniDaily15-06-21Daily_NewsRACQET

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಸರಕಾರಿ ಕೆಲಸಕ್ಕೆ ಗೈರಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

d್ಗಹಜಹಗ್ದಸದ್ಗ

ಸಾವಿನಲ್ಲೂ ಸಾರ್ಥಕತೆ : ನಟ ಸಂಚಾರಿ ವಿಜಯ್ ಅಂಗಾಂಗ ದಾನ ಪ್ರಕ್ರಿಯೆ ಆರಂಭ

cats

ರಾಷ್ಟ್ರೀಯ ನಾಯಕರ ಮುಂದೆ ಮುಖ್ಯಮಂತ್ರಿ ಬದಲಾವಣೆ ವಿಷಯವೇ ಇಲ್ಲ : ಸಚಿವ ಜೋಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-20

ಡಾ| ಸಿದ್ದಲಿಂಗಯ್ಯ ಜನಮಾನಸದ ಕವಿ: ಎಚ್‌. ಆಂಜನೇಯ

14-19

21ರವರೆಗೆ ಪರಿಷ್ಕೃತ ಮಾರ್ಗಸೂಚಿ ಜಾರಿ

ಸರಕಾರಿ ಕೆಲಸಕ್ಕೆ ಗೈರಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

14-18

ನಿರಾಶ್ರಿತರ ಕೇಂದ್ರದಲ್ಲಿ ಆರತಕ್ಷರತೆ – ಜನಮೆಚ್ಚುಗೆ

Chikkamagaluru

ಮುಂಗಾರು ವಿಪತ್ತು ಎದುರಿಸಲು ಸಿದ್ಧತೆ

MUST WATCH

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

udayavani youtube

ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ

udayavani youtube

ಮಂಗಳೂರಿನೆಲ್ಲಡೆ ಧಾರಾಕಾರ ಮಳೆ

udayavani youtube

ಉದಯವಾಣಿ ಜೊತೆ ಸಂಚಾರಿ ವಿಜಯ್ ಕೊನೆಯ ಸಂದರ್ಶನ

udayavani youtube

ತುಂಗಾ ಜಲಾಯಶದ 21 ಕ್ರಸ್ಟ್ ಗೇಟ್ ಗಳ ತೆರವು: 2020 ಕ್ಯೂಸೆಕ್ಸ್ ನೀರು ಬಿಡುಗಡೆ

ಹೊಸ ಸೇರ್ಪಡೆ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

\172.17.1.5ImageDirUdayavaniDaily15-06-21Daily_NewsRACQET

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

14-21

ತಗದ ಕೊರೊನಾ ಸೋಂಕು; ತೆರೆಯದ ಬೀಗ

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.