ತುಂತುರು ಮಳೆಗೆ ಬಿತ್ತನೆ ಚುರುಕು

•ನಾಲ್ಕೈದು ದಿನಗಳಿಂದ ಮಳೆ ಆಗಮನ•ಈವರೆಗೆ ಕೇವಲ ಶೇ.30 ಬಿತ್ತನೆ

Team Udayavani, Jul 9, 2019, 8:53 AM IST

ಹಾವೇರಿ: ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ರೈತ ಮಹಿಳೆಯರು.

ಹಾವೇರಿ: ಕಳೆದ ವರ್ಷ ಮುಂಗಾರು, ಹಿಂಗಾರು ಎರಡೂ ಮಳೆ ಕೈಕೊಟ್ಟು ಬರಗಾಲದ ಬವಣೆಗೊಳಗಾಗಿದ್ದ ಜಿಲ್ಲೆಯಲ್ಲಿ ಈ ಬಾರಿಯೂ ಮುಂಗಾರು ರೈತರಿಗೆ ಕೈಹಿಡಿದಿಲ್ಲ. ಬರೋಬರಿ ಒಂದು ತಿಂಗಳು ತಡವಾಗಿ ಮುಂಗಾರು ಆಗಮಿಸಿದ್ದು ಕಳೆದ ಐದಾರು ದಿನಗಳಿಂದಷ್ಟೇ ಸಾಧಾರಣ ಮಳೆ ಸುರಿಯುತ್ತಿದ್ದು ಬಿತ್ತನೆ ಚುರುಕುಗೊಂಡಿದೆ.

ಕಳೆದ ವರ್ಷದ ಬರಗಾಲ ಸಂಕಷ್ಟ ಅನುಭವಿಸಿರುವ ರೈತರು ಈ ವರ್ಷವಾದರೂ ಉತ್ತಮ ಮಳೆ ಬಂದು ಉತ್ತಮ ಫಸಲು ಪಡೆಯಬಹುದು ಎಂದು ಆಶಿಸಿದ್ದರು. ಆದರೆ, ಈ ವರ್ಷ ಮುಂಗಾರು ಪೂರ್ವ ಮಳೆ ಆಗಿಲೇ ಇಲ್ಲ. ಇನ್ನು ಜೂನ್‌ ತಿಂಗಳು ಮುಗಿದರೂ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆಗಮನವೂ ಆಗಿಲ್ಲ. ಹೀಗಾಗಿ ಮಳೆ ರೈತರಿಗೆ ಆರಂಭದಲ್ಲಿಯೇ ಆಘಾತವನ್ನುಂಟು ಮಾಡಿದೆ.

ಕಳೆದ ಐದಾರು ದಿನಗಳಿಂದ ಮಳೆ ಬರುತ್ತಿದೆಯಾದರೂ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿಲ್ಲ. ತುಂತುರು ಮಳೆ, ಮೋಡ ಕವಿದ ವಾತಾವರಣವಿದ್ದು, ಈ ವಾತಾವರಣಕ್ಕೆ ಪೂರಕವಾಗಿ ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. ಹೀಗಾಗಿ ಹೊಲಗಳೆಲ್ಲ ಸಾಮೂಹಿಕ ಕೃಷಿ ಚಟುವಟಿಕೆಯ ತಾಣವಾಗಿವೆ.

ಸಾಧಾರಣವಾಗಿ ಜಿಲ್ಲೆಯ ರೈತರು ಮುಂಗಾರು ಪೂರ್ವ ಮಳೆ ಬಿದ್ದ ಬಳಿಕ ಕೃಷಿ ಭೂಮಿಯನ್ನು ಬಿತ್ತನೆಗೆ ಹದಗೊಳಿಸಿಕೊಳ್ಳುತ್ತಿದ್ದರು. ಇನ್ನು ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ಬಿತ್ತನೆಗೆ ಅಣಿಯಾಗುತ್ತಿದ್ದರು. ಆದರೆ, ಈ ಬಾರಿ ಮುಂಗಾರುಪೂರ್ವ ಮಳೆಯೂ ಇಲ್ಲ. ಮುಂಗಾರು ಮಳೆಯೂ ಸಕಾಲಕ್ಕೆ ಆಗಿಲ್ಲ. ಹೀಗಾಗಿ ರೈತರು ಈದೀಗ ಬೀಳುತ್ತಿರುವ ತುಂತುರು ಮಳೆಯನ್ನಾಧರಿಸಿಕೊಂಡೇ ಕೃಷಿ ಭೂಮಿಯನ್ನು ಬಿತ್ತನೆಗೆ ಹದಗೊಳಿಸಿಕೊಳ್ಳುತ್ತಿದ್ದಾರೆ.

ಮಳೆ ಪ್ರಮಾಣ: ಜೂನ್‌ ತಿಂಗಳಲ್ಲಿ 110ಮಿ.ಮೀ.ಯಷ್ಟು ವಾಡಿಕೆ ಮಳೆಯಾಗಬೇಕು. ಆದರೆ, ಈ ವರ್ಷ ಜೂನ್‌ ತಿಂಗಳಲ್ಲಿ ಕೇವಲ 59.57ರಷ್ಟು ಮಾತ್ರ ಮಳೆಯಾಗಿದ್ದು ಶೇ. 53ರಷ್ಟು ಮಳೆಯಾದಂತಾಗಿದೆ. 2018ರಲ್ಲಿ ಜೂನ್‌ ತಿಂಗಳಲ್ಲಿ 94.90ಮಿಮೀ, 2017ರಲ್ಲಿ 47.51ಮಿಮೀ ಮಳೆ ಜೂನ್‌ ತಿಂಗಳಲ್ಲಿ ಆಗಿತ್ತು. ಮಳೆ ಅಭಾವದಿಂದಾಗಿ ಕಡಿಮೆ ನೀರಲ್ಲಿ ಬೆಳೆಯಬಹುದಾದ ಮೆಕ್ಕೆಜೋಳದತ್ತ ರೈತರು ಮುಖ ಮಾಡಿದ್ದು ಶೇ. 60ರಷ್ಟು ರೈತರು ಮೆಕ್ಕೆಜೋಳ ಬಿತ್ತನೆಗೆ ಮುಂದಾಗಿದ್ದಾರೆ.

ಬಿತ್ತನೆ ಗುರಿ: ಕೃಷಿ ಇಲಾಖೆ ಪ್ರಸಕ್ತ ವರ್ಷ 207973 ಹೆಕ್ಟೇರ್‌ ಏಕದಳ, 7209 ಹೆಕ್ಟೇರ್‌ ದ್ವಿದಳ, 31854 ಹೆಕ್ಟೇರ್‌ ಎಣ್ಣೆಕಾಳು, 85790 ಹೆಕ್ಟೇರ್‌ ವಾಣಿಜ್ಯ ಬೆಳೆ ಸೇರಿ ಒಟ್ಟು 332826 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಉಪಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿದೆ.

ಮುಂಗಾರು ಹಂಗಾಮಿಗೆ ಒಟ್ಟು 21028 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು ಇದರಲ್ಲಿ ಕೇವಲ 11419 ಕ್ವಿಂಟಾಲ್ ಬೀಜ ವಿತರಣೆಯಾಗಿದೆ. ಮುಂಗಾರು ಹಂಗಾಮಿಗೆ ಸರಬರಾಜು ಆಗಿರುವ ಒಟ್ಟು 46335 ಮೆಟ್ರಿಕ್‌ ಟನ್‌ ರಸಗೊಬ್ಬರದಲ್ಲಿ 14452 ಮೆಟ್ರಿಕ್‌ ಟನ್‌ ವಿತರಣೆಯಾಗಿದೆ.

ಒಟ್ಟಾರೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದ್ದು ಮುಂದೆಯೂ ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತರು ಹೊಲ ಹಸನು ಮಾಡಿ, ಬಿತ್ತನೆಗೆ ಅಣಿಯಾಗಿದ್ದಾರೆ.

 

•ಎಚ್.ಕೆ. ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಪ್ರಾಣಿ, ಮಾನವ ಸಂಘರ್ಷ ಹತೋಟಿಗೆ ಬಂದಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಾಣಿದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ ಶೇ.50 ಇಳಿಕೆ...

  • ಬೆಂಗಳೂರು: ದೇಶದಲ್ಲಿ ಏಕ ಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದ್ದು, ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಜೀವಂತವಾಗಿವೆ ಎನ್ನುವುದನ್ನು...

  • ಬೆಂಗಳೂರು: ಮಳೆ ಬಂದರೆ ನೀರು ಅಂಗಡಿಗಳಿಗೆ ನುಗ್ಗುತ್ತದೆ. ರಸ್ತೆ ಸಂಚಾರ ದುಸ್ತರವಾಗುತ್ತದೆ. ಒಳಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ...

  • ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಮನೆಯ ಸ್ನಾನದ ಕೊಣೆಯಲ್ಲಿ ಚಾಕುವಿನಿಂದ ಇರಿದು ಕೊಂದು, ಬೆಂಕಿ ಹಚ್ಚಿ ಸುಟ್ಟ ಘಟನೆ ರಾಜಾಜಿನಗರದ ಬಾಷ್ಯಂ ವೃತ್ತದ...

  • ಕೊರಟಗೆರೆ: "ಮೂರು ಸಲ ಮುಖ್ಯಮಂತ್ರಿಯಾಗುವ ಅವ ಕಾಶವಿದ್ದರೂ ರಾಜಕೀಯ ಕುತಂತ್ರದಿಂದ ಕೈ ತಪ್ಪಿತು' ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು....

  • ಬೆಂಗಳೂರು: ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮತ್ತೂಮ್ಮೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ಸಾವಿರಾರು ಮಂದಿ ಭೇಟಿ...