21ರಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಶುರು


Team Udayavani, May 19, 2020, 5:47 AM IST

21ರಿಂದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಶುರು

ಬ್ಯಾಡಗಿ: ರೈತರು ಹಾಗೂ ವ್ಯಾಪಾರಸ್ಥರು ಹಣಕಾಸಿನ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಇಬ್ಬರ ದೃಷ್ಟಿಕೋನ ವನ್ನಿಟ್ಟುಕೊಂಡು ಮೇ 21ರಿಂದ ಲಾಕ್‌ ಡೌನ್‌ ನಿಯಮಾವಳಿಗಳ ಷರತ್ತು ಗಳೊಂದಿಗೆ ಎಂದಿನಂತೆ ಮಾರುಕಟ್ಟೆ ವಹಿವಾಟು ಆರಂಭಿಸಲು ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ಕುರಿತು ಮಾತನಾಡಿದ ಅಧ್ಯಕ್ಷ ಕೆ.ಎಸ್‌. ನಾಯ್ಕರ್‌, ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಮಾರುಕಟ್ಟೆ ಸ್ಥಗಿತಗೊಂಡಿತ್ತು. ಮೇ 21ರಿಂದ ಇ-ಟೆಂಡರ್‌ ಮೂಲಕ ಮೊದಲಿನಂತೆ ಮೆಣಸಿನಕಾಯಿ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ ಎಂದರು.

ಸದಸ್ಯ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಇಲ್ಲಿ ವಹಿವಾಟು ಆರಂಭಿಸಿದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಮತ್ತು ವ್ಯಾಪಾರಸ್ಥರು ಸೇರುತ್ತಾರೆ. ಕಡ್ಡಾಯವಾಗಿ ನಿಯಮಾವಳಿ ಪಾಲನೆ ಮಾಡಿ ಎಂದರು. ಕಾರ್ಯದರ್ಶಿ ಎಸ್‌.ಬಿ. ನ್ಯಾಮಗೌಡ್ರ ಮಾತನಾಡಿ, ನಿಯಮಿತ ಅಂತರದಲ್ಲಿಡುವುದು, ದಲಾಲಿ ಅಂಗಡಿಗಳ ಮಾಲೀಕರು ಸೋಪು, ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವುದು, ವಾಹನಗಳಲ್ಲಿಬಂದ ರೈತರಿಗೆ, ಲಾರಿ ಚಾಲಕರು ಮತ್ತು ಕ್ಲೀನರ್‌ಗಳಿಗೆ ಪ್ಯಾಕ್‌ ಮಾಡಿದ ಊಟ, ಉಪಾಹಾರ ಸರಬರಾಜು ಹಾಗೂ ಮಾರುಕಟ್ಟೆ ಆವರಣದಲ್ಲಿ ಓಡಾಡದಂತೆ ಕಚೇರಿ ನಿಗದಿಪಡಿಸಿದ ಸ್ಥಳದಲ್ಲಿ ಅವರನ್ನು ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕಾಗುತ್ತದೆ ಎಂದರು.

ಉಪಾಧ್ಯಕ್ಷ ಉಳಿವೆಪ್ಪ ಕುರವತ್ತಿ, ಸದಸ್ಯರಾದ ದಾನಪ್ಪ ತೋಟದ, ಸಿ.ಆರ್‌. ಪಾಟೀಲ, ಮಾಲತೇಶ ಹೊಸಳ್ಳಿ, ವನಿತಾ ಗುತ್ತಲ, ಸುಶೀಲಾ ರೊಡ್ಡನವರ, ಶಂಭನಗೌಡ ಪಾಟೀಲ, ವೀರಭದ್ರಪ್ಪ ಗೊಡಚಿ, ಎಂ.ಎನ್‌. ಕೆಂಪಗೌಡ್ರ, ವಿಜಯಕುಮಾರ ಮಾಳಗಿ, ಕುಮಾರ ಚೂರಿ, ನೀಲಮ್ಮ ಪಾಟೀಲ, ಹನುಮಂತ ನಾಯ್ಕರ್‌, ಶಿವಪ್ಪ ಕುಮ್ಮೂರ ಮತ್ತಿತತರು ಇದ್ದರು.

ಸೋಮವಾರ-ಗುರುವಾರ ಪ್ರವೇಶ ನಿಷೇಧ :  ಮಾರುಕಟ್ಟೆ ವಹಿವಾಟು ನಡೆಯುವ ಪ್ರತಿ ಸೋಮವಾರ ಮತ್ತು ಗುರುವಾರ ತೊಟ್ಟು (ತುಂಬು) ತೆಗೆಯುವ ಕೂಲಿ ಕಾರ್ಮಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಪ್ರಾಂಗಣದಲ್ಲಿ ಪಾನ್‌, ಗುಟಕಾ, ಎಲೆ ಅಡಿಕೆ ತಿನ್ನುವುದು ಹಾಗೂ ಉಗುಳುವುದನ್ನು ನಿಷೇ ಧಿಸಲಾಗಿದೆ. ರೈತರು, ವರ್ತಕರು ಹಾಗೂ ಪರವಾನಗಿ ಪಡೆದ ಹಮಾಲರು ಮತ್ತು ಅಂಗಡಿಗಳ ಗುಮಾಸ್ತರಿಗೆ ಮಾತ್ರ ಮಾರುಕಟ್ಟೆಯಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಇವರನ್ನು ಹೊರತುಪಡಿಸಿ ಮಾರುಕಟ್ಟೆ ಪ್ರವೇಶಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಭೆ ನಿರ್ಧರಿಸಿತು.

ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ :  ಹೊರಜಿಲ್ಲೆ ಅಥವಾ ರಾಜ್ಯದಿಂದ ಬರುವ ರೈತರು, ಲಾರಿ ಚಾಲಕರು ಮತ್ತು ಕ್ಲೀನರ್‌ಗಳು ಪಟ್ಟಣದಲ್ಲಿ ಪ್ರಾರಂಭಿಸಲಾದ ಚೆಕ್‌ಪೋಸ್ಟ್‌ ನಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ಸಂಬಂಧಿಸಿದ ವೈದ್ಯಾಧಿಕಾರಿ ಇವರಿಂದ ಪಡೆದ ಚೀಟಿ ತೋರಿಸಿದ ಬಳಿಕವೇ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶವಿದ್ದು, ಇವರ ಸಂಪೂರ್ಣ ಮಾಹಿತಿಯನ್ನು ವರ್ತಕರು ಕೊಡುವುದು ಕಡ್ಡಾಯವಾಗಿದೆ.

ಟಾಪ್ ನ್ಯೂಸ್

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಎಸ್‌ವೈ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಬಿಎಸ್‌ವೈ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ನಮ್ಮ ಅವಧಿಯಲ್ಲಿ ಹಾನಗಲ್ಲ ಕ್ಷೇತ್ರಕ್ಕೆ 2400 ಕೋಟಿ ಕೊಟ್ಟಿದ್ದೇನೆ

ನಮ್ಮ ಅವಧಿಯಲ್ಲಿ ಹಾನಗಲ್ಲ ಕ್ಷೇತ್ರಕ್ಕೆ 2400 ಕೋಟಿ ಕೊಟ್ಟಿದ್ದೇನೆ

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

21hkr1

ಜಿಲ್ಲಾದ್ಯಂತ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ

MUST WATCH

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

ಹೊಸ ಸೇರ್ಪಡೆ

Untitled-1

ಚಿಕ್ಕಮಗಳೂರು: ಅಕ್ರಮ ಗಾಂಜಾ ಸಾಗಾಟ; ಇಬ್ಬರ ಬಂಧನ

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

15folk

ಜಾನಪದ ಶೈಲಿಯಲಿ ಒಡ್ಡೋಲಗದ ಆಮಂತ್ರಣ

gudibande news

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.