Udayavni Special

ಸಾರ್ವಜನಿಕರಿಗೆ ಸ್ಪಂದಿಸದ ಅಧಿಕಾರಿಗಳಿಗೆ ತಹಶೀಲ್ದಾರ್‌ ತರಾಟೆ

ಉಪತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ತಹಶೀಲ್ದಾರ್‌ ಚಂದ್ರಶೇಖರ ಗಾಳಿ

Team Udayavani, Jul 22, 2019, 3:13 PM IST

hv-tdy-4

ಬಂಕಾಪುರ: ಉಪತಹಶೀಲ್ದಾರ್‌ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿದ ತಹಶೀಲ್ದಾರ್‌ ಚಂದ್ರಶೇಖರ ಗಾಳಿ.

ಬಂಕಾಪುರ: ಶಿಗ್ಗಾವಿ ತಹಶೀಲ್ದಾರ್‌ ಚಂದ್ರಶೇಖರ ಗಾಳಿ ಪಟ್ಟಣದ ಉಪತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಆಧಾರ್‌ ನೋಂದಣಿ, ತಿದ್ದುಪಡಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ, ಬುದ್ಧಿಮಾಂದ್ಯ ಮಾಸಾಶನಕ್ಕೆ ಬರುವ ಸಾರ್ವಜನಿಕರಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ದಾಖಲಾತಿ ಪಡೆದು ವಿಳಂಬ ಧೋರಣೆ ತಾಳದೆ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಆಧಾರ್‌ ನೋಂದಣಿ, ತಿದ್ದುಪಡಿಗಾಗಿ ಬರುವ ಸಾರ್ವಜನಿಕರನ್ನು ಅನಾವಶ್ಯಕವಾಗಿ ಅಲೆದಾಡಿಸುವುದನ್ನು ಬಿಟ್ಟು, ಬೆಳಗ್ಗೆ ಕೋಪನ್‌ಗಳನ್ನು ನೀಡಿ ಅವರು ಮರಳಿ ಬರುವ ಸಮಯವನ್ನು ಮೊದಲೇ ನಮೂದಿಸಿ ನಂತರ ಅವರಿಗೆ ಸೇವೆ ನೀಡಿ. ಸಾರ್ವಜನಿಕರ ಹಿತ ಕಾಪಾಡುವಂತೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಬುದ್ಧಿಮಾಂಧ್ಯ ಮಗ ಮಲ್ಲಪ್ಪನೊಂದಿಗೆ ನಾಡಕಚೇರಿಗೆ ಆಗಮಿಸಿದ್ದ ನಾರಾಯಣಪುರ ಗ್ರಾಮದ ವೃದ್ಧೆ ಕಾಳಮ್ಮ ರಾಯಣ್ಣವರ ತಹಶೀಲ್ದಾರ್‌ ಅವರ ಮುಂದೆ ತಮ್ಮ ಅಳಲು ತೊಡಿಕೊಂಡು, ಒಂದು ವರ್ಷದಿಂದ ಅಲೆದಾಡುತ್ತಿದ್ದೇನೆ ನನಗೆ ವೃದ್ಧಾಪ್ಯ ವೇತನ ಬರುತ್ತಿಲ್ಲ. ಬುದ್ಧಿಮಾಂಧ್ಯ ಮಗನಿಗೆ ಡಾಕ್ಟರ್‌ ಸರ್ಟಿಫಿಕೇಟ್ ನೀಡುತ್ತಿಲ್ಲ, ನನಗೆ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ದಯವಿಟ್ಟು ನ್ಯಾಯ ಒದಗಿಸಿ ಎಂದು ಅಂಗಲಾಚಿ ಬೇಡಿಕೊಂಡರು. ಕೂಡಲೇ ಸಂಬಂಧಪಟ್ಟ ಗ್ರಾಮಲೆಕ್ಕಿಗನನ್ನು ಕರೆಯಿಸಿ ಎಲ್ಲರೇದುರೇ ತರಾಟೆ ತೆಗೆದುಕೊಂಡ ತಹಶೀಲ್ದಾರ್‌, ನಾಚಿಕೆಯಾಗುವುದಿಲ್ಲವೇ ನಿಮಗೆ? ಇಂತಹ ವೃದ್ಧರನ್ನು ಅಲೆದಾಡಿಸತ್ರಿರಲ್ಲ… ಸಂಬಂಧಪಟ್ಟ ದಾಖಲಾತಿ ಪಡೆದು ಸಂಧ್ಯಾಸುರಕ್ಷಾ ಯೋಜನೆ ಲಾಭ ಕಲಿಸಿ, ಅವರ ಬುದ್ಧಿ ಮಾಂಧ್ಯಮಗನಿಗೆ ಜಿಲ್ಲಾ ಆಸ್ಪತ್ರೆ ವೈದ್ಯರಿಂದ ತಪಾಸಣೆಗೊಳಪಡಿಸಿ ಪ್ರಮಾಣ ಪತ್ರ ಪಡೆದು; ಅಂಗವಿಕಲ ಮಾಸಾಶನ ಸೌಲಭ್ಯ ನೀಡಿ ಎಂದು ಆದೇಶಿಸಿದರು. ಇನ್ನು ಮುಂದೆ ಇಂತಹ ಯಾವುದೇ ಪ್ರಕರಣಗಳು ನನ್ನ ಗಮನಕ್ಕೆ ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಸರ್ಕಾರಿ ಸೌಲಭ್ಯಕ್ಕಾಗಿ ಆಗಮಿಸುವ ಸಾರ್ವಜನಿಕರಿಗೆ, ಮಹಿಳೆ, ವೃದ್ಧರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಕಂದಾಯ ಇಲಾಖೆ ಅಧಿಕಾರಿ ಆರ್‌.ಎಂ.ನಾಯಕ ಅವರಿಗೆ ಸೂಚಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

cricket

ಜಯದ ವಿಶ್ವಾಸದಲ್ಲಿ RCB-KKR: ಟಾಸ್ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

4 ಜಿಲ್ಲೆಗಳಿಗೆ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನುವಾರ ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಜಾನುವಾರ ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ: ಸಚಿವ ಜಗದೀಶ ಶೆಟ್ಟರ್

ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ: ಸಚಿವ ಜಗದೀಶ ಶೆಟ್ಟರ್

hv-tdy-2

ಕೋವಿಡ್‌ ವಿರುದ್ಧ ಹೋರಾಡಿ ಜಯಿಸೋಣ

hv-tdy-1

ಪಾರದರ್ಶಕ-ನಿಷ್ಪಕ್ಷಪಾತ ಚುನಾವಣೆಗೆ ಶ್ರಮಿಸಿ

hv-tdy-2

220 ವಾರಿಯರ್ಸ್‌ಗೆ ಸೋಂಕು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

avalu-tdy-1

ಸೋಲಿಲ್ಲದೆ ಬಾಳುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.