ದೇಶದ ಮೊದಲ ಜಾನಪದ ವಿವಿಗೆ 8ರ ಸಂಭ್ರಮ


Team Udayavani, Sep 28, 2018, 4:58 PM IST

28-sepctember-18.gif

ಹಾವೇರಿ: ದೇಶದ ಮೊದಲ ಜಾನಪದ ವಿವಿ ಖ್ಯಾತಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯನೂರೆಂಟು ವಿಘ್ನಗಳನ್ನು ಎದುರಿಸುತ್ತಲೇ ಎಂಟು ವರ್ಷ ಪೂರೈಸಿದ್ದು ಶೈಕ್ಷಣಿಕ ಪ್ರಗತಿಯಲ್ಲಿ ದಾಪುಗಾಲಿಟ್ಟಿದೆ.

ಜನಪದ ಜ್ಞಾನದ ಅನನ್ಯತೆಯನ್ನು ಶೋಧಿಸುವ, ಸಂರಕ್ಷಿಸುವ, ಜನಪದ ಜ್ಞಾನದ ಸಂಗ್ರಹ, ಸಂಪಾದನೆ, ಕಲಿಕೆ, ಪ್ರದರ್ಶನ ಕಾರ್ಯಗಳನ್ನು ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶದಿಂದ ಎಂಟು ವರ್ಷಗಳ ಹಿಂದೆ ಸರ್ಕಾರ ಶಿಗ್ಗಾವಿ ತಾಲೂಕು ಗೋಟಗೋಡಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿತು. ಕೇವಲ ಎಂಟು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕರ್ನಾಟಕ ಜಾನಪದ ವಿವಿ, ಈಗ ಜೋಯಿಡಾ, ಬೀದರ್‌, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಅಧ್ಯಯನ ಕೇಂದ್ರ, 25ಕ್ಕೂ ಹೆಚ್ಚು ಮಾನ್ಯತಾ ಸಂಸ್ಥೆಗಳನ್ನು ಹೊಂದಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾನಪದದ ವಿವಿಧ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಸರ್ಟಿಫಿಕೇಟ್‌ ಕೊರ್ಸ್‌ಗಳ ಮೂಲಕ ಜಾನಪದ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ 250 ಜನರು ಸ್ನಾತಕೋತ್ತರ ಪದವಿ ಮಾಡುತ್ತಿದ್ದರೆ, 87 ಜನರು ಪಿಎಚ್‌ಡಿ ಮಾಡುತ್ತಿದ್ದಾರೆ.

ಆರಂಭದಲ್ಲಿ ಕೇವಲ ಆರು ಸ್ನಾತಕೋತ್ತರ ಪದವಿ ಹಾಗೂ 11 ಸರ್ಟಿಫಿಕೇಟ್‌ ಕೊರ್ಸ್‌ಗಳಿದ್ದವು. ಪ್ರಸ್ತುತ 14 ಸ್ನಾತಕೋತ್ತರ ಪದವಿ ಹಾಗೂ ಮೂರು ಡಿಪ್ಲೊಮಾ ಸೇರಿದಂತೆ 15ಕ್ಕೂ ಹೆಚ್ಚು ಸರ್ಟಿಫಿಕೇಟ್‌ ಕೋರ್ಸ್‌ಗಳು ನಡೆಯುತ್ತಿವೆ. ವಿವಿ ಅಧ್ಯಯನ ಸಂಸ್ಥೆಗಳ ಜತೆಗೆ ರಾಜ್ಯಾದ್ಯಂತ 25ಕ್ಕೂ ಹೆಚ್ಚು ಮಾನ್ಯತಾ ಸಂಸ್ಥೆಗಳನ್ನು ಗುರುತಿಸಿ ಶಿಕ್ಷಣ ನೀಡುತ್ತಿದೆ.

ಪ್ರಗತಿ ಹೆಜ್ಜೆ: ಶೈಕ್ಷಣಿಕ, ಪ್ರಸಾರಾಂಗ ಹಾಗೂ ಸಂಶೋಧನಾ ವಿಭಾಗದಲ್ಲಿ ವಿವಿ ಸಾಧನೆಯ ಪುಟ್ಟ ಹೆಜ್ಜೆಗಳನ್ನು ಇಡುತ್ತ ಬಂದಿದೆ. ವಿವಿ ಆವರಣದಲ್ಲಿ ಬೃಹತ್‌ ಆಡಳಿತ ಭವನ ಹಾಗೂ ಶೈಕ್ಷಣಿಕ ಭವನ ನಿರ್ಮಾಣಗೊಂಡಿದೆ. 15 ಸಿಬ್ಬಂದಿ ಕೊಠಡಿಗಳು ನಿರ್ಮಾಣಗೊಂಡಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ಸಹ ನಿರ್ಮಾಣಗೊಂಡಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್‌ ನಿರ್ಮಾಣ ಹಂತದಲ್ಲಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ 2.5 ಕೋಟಿ ರೂ.ಗಳಲ್ಲಿ ಜನಪದ ವಸ್ತು ಸಂಗ್ರಹಾಲಯ ನಿರ್ಮಾಣವಾಗುತ್ತಿದ್ದು, 6 ಸಾವಿರ ವಸ್ತುಗಳ ಸಂಗ್ರಹ ಇಲ್ಲಿದೆ. ಇನ್ನು ಜೋಯಿಡಾದ ಅಧ್ಯಯನ ಕೇಂದ್ರದಲ್ಲಿ ಶೈಕ್ಷಣಿಕ ಭವನ ನಿರ್ಮಾಣಗೊಳ್ಳುತ್ತಿದೆ. ಮಲೆಮಹದೇಶ್ವರಬೆಟ್ಟ ಅಧ್ಯಯನ ಕೇಂದ್ರದಲ್ಲಿ ಮಲೆಮಹದೇಶ್ವರ ಪರಂಪರೆಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ, ಶೈಕ್ಷಣಿಕ ಭವನ ನಿರ್ಮಾಣಗೊಳ್ಳುತ್ತಿದೆ.

90ಕ್ಕೂ ಹೆಚ್ಚು ಕೃತಿ ಬಿಡುಗಡೆ: ವಿವಿ 90ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದೆ. ಗ್ರಾಮಚರಿತ್ರೆ ಕೋಶ, ಜನಪದ ನಿಘಂಟು, ನಮ್ಮೂರ ಜನಪದ, ಲಂಬಾಣಿ ಜನಪದ ಬಹುಮುಖೀ ದಾಖಲೀಕರಣ, ಬುಡಕಟ್ಟಿನ ಸಂಸ್ಕೃತಿ ಸೇರಿದಂತೆ ಹಲವು ಮಹತ್ವದ ಸಂಶೋಧನಾ ಗ್ರಂಥಗಳ ಜತೆಗೆ ತಮಿಳು, ಮಳಯಾಳಿ ಸೇರಿದಂತೆ ಇತರ ಭಾಷೆಗಳ ಹತ್ತಾರು ಜನಪದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದೆ. 20ಕ್ಕೂ ಹೆಚ್ಚು ಕೃತಿಗಳು ಮುದ್ರಣ ಹಂತದಲ್ಲಿವೆ. ಈಗ ಹೊಸದಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಕರ್ನಾಟನ ಜಾನಪದ ಸಮೀಕ್ಷೆ ಯೋಜನೆ ಹಾಕಿಕೊಂಡಿದ್ದು ಶೀಘ್ರದಲ್ಲಿಯೇ ಹಾವೇರಿ ಜಿಲ್ಲೆಯಿಂದ ಈ ಯೋಜನೆ ಆರಂಭಿಸಲು ನಿರ್ಧರಿಸಿದೆ. ಯಕ್ಷಗಾನ ಮಾದರಿಯಲ್ಲಿ ದೊಡ್ಡಾಟ ಕಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಯಕಲ್ಪ ಕೊಡಲು ಬೇಕಾದ ಪರಿಷ್ಕರಣೆಗಾಗಿ ವಿವಿ ಆಲೋಚಿಸಿದ್ದು, ಇದಕ್ಕಾಗಿ ಕಾರ್ಯಾಗಾರ ನಡೆಸಲು ಚಿಂತನೆ ನಡೆಸಿದೆ.

ವಿವಾದದ ಸುಳಿ
ಜಾನಪದ ವಿವಿ ಶೈಕ್ಷಣಿಕವಾಗಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಖ್ಯಾತಿಯಾಗಿದೆ. ವಿವಿ ನೇಮಕಾತಿ ವಿಚಾರ ವಿವಾದದ ಸುಳಿಗೆ ಸಿಲುಕಿದ್ದರಿಂದ ಅದು ಈವರೆಗೂ ಸರಿಯಾಗದೆ ಇರುವುದರಿಂದ ವಿವಿಯಲ್ಲಿ ಯಾರೊಬ್ಬರೂ ಕಾಯಂ ಸಿಬ್ಬಂದಿಯಿಲ್ಲ. ಗುತ್ತಿಗೆ ಆಧಾರದಲ್ಲಿ 14 ಸಹಾಯಕ ಪ್ರಾಧ್ಯಾಪಕರು, 12 ಜನ ಅತಿಥಿ ಉಪನ್ಯಾಸಕರು, ಬೋಧಕೇತರ 50 ಸಿಬ್ಬಂದಿ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದ ವಿವಿ ಬಗ್ಗೆ ಆಡಳಿತಕ್ಕೆ ಬಂದಂಥ ಸರ್ಕಾರಗಳೂ ಸಹ ವಿಶೇಷ ಗಮನ ಕೊಡದೇ ಇರುವುದರಿಂದ ವಾರ್ಷಿಕ ಸಾಮಾನ್ಯ ಅನುದಾನದಲ್ಲಿಯೇ ವಿವಿ ನಿರ್ವಹಣೆ ನಡೆಯುತ್ತಿದೆ.

ಹೊಸದಾಗಿ ಸ್ಥಾಪನೆಗೊಂಡ ಸಂಸ್ಕೃತ, ಸಂಗೀತ ವಿವಿಗಳಿಗೆ ಹೋಲಿಸಿದರೆ ಜಾನಪದ ವಿವಿ ಪ್ರಗತಿಯಲ್ಲಿ ಮಂಚೂಣಿಯಲ್ಲಿದೆ. ವಿವಿ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಆದರೆ, ಇರುವ ಸಂಪನ್ಮೂಲ ಬಳಸಿಕೊಂಡು ಪ್ರಗತಿಯತ್ತ ಸಾಗಿದೆ.
ಪ್ರೊ| ಡಿ.ಬಿ. ನಾಯಕ, ಕುಲಪತಿ, ಕಜಾವಿವಿ

ಟಾಪ್ ನ್ಯೂಸ್

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.