ಅಕ್ರಮ-ಸಕ್ರಮ ಸಾವಿರಾರು ಅರ್ಜಿ ತಿರಸ್ಕೃತ

Team Udayavani, Jul 17, 2019, 11:05 AM IST

ಹಾವೇರಿ: ಕಾನೂನಿನಲ್ಲಿ ಸ್ಪಷ್ಟತೆ ಇಲ್ಲದ ಎಂಬ ಕಾರಣಕ್ಕಾಗಿ ಅಕ್ರಮ ಸಕ್ರಮ ಯೋಜನೆಯಡಿ ಮನೆ ಸಕ್ರಮಗೊಳಿಸಲು ಬಡವರು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ, ಕಟ್ಟಡ ನಿರ್ಮಿಸಿಕೊಂಡ ಬಡವರಿಗೆ ಕೆಲವೊಂದು ಇತಿಮಿತಿಗಳಲ್ಲಿ ಅವುಗಳನ್ನು ಸಕ್ರಮಗೊಳಿಸಲು ಹಿಂದಿನ ಸರ್ಕಾರ ಅಕ್ರಮ ಸಕ್ರಮ ಕಾಯಿದೆ ಜಾರಿಗೊಳಿಸಿತ್ತು. ಈ ಕಾಯಿದೆಯಲ್ಲಿ ಸ್ಪಷ್ಟತೆ ಇಲ್ಲ ಎಂಬ ಸಬೂಬಿನೊಂದಿಗೆ ಅಧಿಕಾರಿಗಳು ಸಾವಿರಾರು ಅರ್ಜಿಗಳನ್ನು ತಿರಸ್ಕರಿಸಿ, ಮನೆ ಸಕ್ರಮಗೊಳಿಸಿಕೊಳ್ಳುವ ಸಾವಿರಾರು ಬಡವರ ಕನಸು ಭಗ್ನಗೊಂಡಿದೆ.

94ಸಿಯಲ್ಲಿ 11880 ಅರ್ಜಿ ತಿರಸ್ಕೃತ: ಅಕ್ರಮ-ಸಕ್ರಮ ಕಾಯ್ದೆಯಿಂದ ಅನೇಕ ಬಡವರು ಸ್ವಂತ ಸೂರು ಹೊಂದುವ ಕನಸು ಕಂಡಿದ್ದರು. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ಕಟ್ಟಿಕೊಂಡ ಗ್ರಾಮೀಣ ಪ್ರದೇಶದ 12,515 ಫಲಾನುಭವಿಗಳು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 11880 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು ಇದರಲ್ಲಿ ಕೇವಲ 602 ಅರ್ಜಿಗಳನ್ನು ಸಕ್ರಮಕ್ಕೆ ಪರಿಗಣಿಸಲಾಗಿದೆ. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದವರ ಸಂಖ್ಯೆಯೇ ಅಧಿಕವಾಗಿರುವುದು ಗಮನಾರ್ಹ.

94ಸಿಸಿಯಲ್ಲಿ 653 ಅರ್ಜಿ ತಿರಸ್ಕೃತ: ಗ್ರಾಮೀಣ ಪ್ರದೇಶದ ಫಲಾನುಭವಿಗಳ ಸ್ಥಿತಿಯಂತೆ ನಗರ, ಪಟ್ಟಣ ಪ್ರದೇಶಗಳಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸ್ಥಿತಿಯೂ ಇದೆ. 94ಸಿಸಿ ಅಡಿಯಲ್ಲಿ ಒಟ್ಟು 793 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಅರ್ಧದಷ್ಟು 653 ಅರ್ಜಿಗಳು ತಿರಸ್ಕೃತಗೊಂಡಿವೆ. ಕೇವಲ 140 ಅರ್ಜಿಗಳನ್ನು ಸಕ್ರಮಕ್ಕೆ ಪರಿಗಣಿಸಲಾಗಿದೆ.

ವಿಶೇಷವೆಂದರೆ 94ಸಿಸಿ ಅಡಿಯಲ್ಲಿ ಸವಣೂರ ಪಟ್ಟಣದಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ. ಇನ್ನು ಬ್ಯಾಡಗಿ ತಾಲೂಕಿನಲ್ಲಿ 140 ಅರ್ಜಿಗಳನ್ನು ಸಕ್ರಮಗೊಳಿಸಿದ್ದು ಬಿಟ್ಟರೆ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲಿಯೂ ಒಂದು ಅರ್ಜಿಯನ್ನೂ ಸಕ್ರಮಗೊಳಿಸಿಲ್ಲ.

ಭೂ ಕಂದಾಯ ಕಾಯ್ದೆಗೆ ಕೆಲ ಮಾರ್ಪಾಡು ಮಾಡಿ ಸರ್ಕಾರ ಜಾರಿಗೊಳಿಸಿರುವ ಅಕ್ರಮ, ಸಕ್ರಮ ಯೋಜನೆಯಲ್ಲಿ ಬ ಖರಾಬ ಸಾಗು ಕ್ಷೇತ್ರ, ಸಿ ಖರಾಬ ಗೌಠಾಣ, ಅರಣ್ಯ, ಖರಾಬ ಗುಡ್ಡ, ಕಾಯ್ದಿಟ್ಟ ಅರಣ್ಯ ಇಂತಹ ಪ್ರದೇಶದಲ್ಲಿನ ಮನೆಗಳನ್ನು ಸಕ್ರಮಗೊಳಿಸಲು ಸ್ಪಷ್ಟವಾದ ಸೂಚನೆಯಿಲ್ಲ ಎಂಬ ಕಾರಣಕ್ಕಾಗಿ ತಹಸೀಲ್ದಾರ್‌ರು ಅರ್ಜಿಗಳನ್ನು ತಿರಸ್ಕೃರಿಸಿದ್ದಾರೆ. ಒಟ್ಟಾರೆ ಅಕ್ರಮ-ಸಕ್ರಮ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗದೆ ಬಡವರ ಕನಸು ಇನ್ನೂ ಕನಸಾಗಿಯೇ ಇದೆ.

 

•ಎಚ್.ಕೆ. ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಂಕಾಪುರ: ಪಟ್ಟಣದ ಜನತೆಗೆ ವರದಾ ನದಿಯ ನೀರು ತಲುಪಿಸುವ ಉದ್ದೇಶದಿಂದ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕವೆಲ್‌ಗೆ ಪುರಸಭೆ ಆಡಳಿತ ಬೀಗ ಜಡೆದಿರುವುದರಿಂದ...

  • ಹಾವೇರಿ: ಜಿಲ್ಲೆಯ ಎರಡು ದಶಕಗಳ ಬೇಡಿಕೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಡಾವಣೆ ಅಭಿವೃದ್ಧಿ...

  • ಹಿರೇಕೆರೂರ: ರಾಮಾಯಣವು ಸರ್ವಕಾಲಕ್ಕೂ ಪ್ರಸ್ತುತವಾದ ಮಹಾಗ್ರಂಥ ವಾಗಿದ್ದು, ನಮ್ಮ ಬದುಕು ತಿದ್ದಿಕೊಳ್ಳುವ ಸರಳ ಹಾಗೂ ಸುಂದರ ಸಾಧನವಾಗಿದೆ. ನಾವು ಮಹಾಪುರುಷರ...

  • ಹಾವೇರಿ: ನೆನೆಗುದಿಗೆ ಬಿದ್ದಿರುವ ನಗರದಲ್ಲಿನ ವಾಲ್ಮೀಕಿ ಸಭಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ...

  • ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ಆರಾಧ್ಯ ದೇವತೆ ಶ್ರೀದ್ಯಾಮಮ್ಮನ ದೇವಸ್ಥಾನದಲ್ಲಿ 9 ದಿನ ನಡೆದ ದೇವಿ ಪುರಾಣ ಸಂಪನ್ನಗೊಂಡಿತು. ದ್ಯಾಮಮ್ಮನ...

ಹೊಸ ಸೇರ್ಪಡೆ