ಬೆರಳೆಣಿಕೆಯಷ್ಟು ಬಸ್‌ಗಳ ಸಂಚಾರ
Team Udayavani, Apr 13, 2021, 12:20 PM IST
ಹಾವೇರಿ: ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ 6ನೇ ದಿನವಾದ ಸೋಮವಾರವೂ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ನೌಕರರ ಮುಷ್ಕರ ಮುಗಿಯುವ ಲಕ್ಷಣಗಳು ಕಾಣದೇ ಖಾಸಗಿ ವಾಹನಗಳು ಬಸ್ ನಿಲ್ದಾಣದೊಳಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಸೋಮವಾರದಿಂದ ಆರಂಭಿಸಿದವು.
ಸಾರಿಗೆ ನೌಕರರೆಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಜಿಲ್ಲೆಯಲ್ಲಿ ಸೋಮವಾರ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚಾರ ಆರಂಭಿಸಿದವು. ಬಸ್ ಓಡಾಟಇಲ್ಲದ್ದರಿಂದ ಪ್ರಯಾಣಿಕರ ಪರದಾಟವೂ ಎಂದಿನಂತೆ ಮುಂದುವರೆದಿತ್ತು. ಅದರಲ್ಲೂ ಗ್ರಾಮೀಣ ಭಾಗದಿಂದ ಆಸ್ಪತ್ರೆ, ತುರ್ತು ಕಚೇರಿಕಾರ್ಯಕ್ಕೆ ಆಗಮಿಸಬೇಕಿದ್ದವರು ತೊಂದರೆ ಎದುರಿಸಿದರು. ಸಾರಿಗೆ ಬಸ್ ಸಂಚಾರ ಇಲ್ಲದ್ದರಿಂದ ಖಾಸಗಿ ವಾಹನಗಳ ಓಡಾಟ ಮತ್ತಷ್ಟು ಹೆಚ್ಚಿತ್ತು. ಪ್ರಯಾಣ ದರಕ್ಕಿಂತ ದುಪ್ಪಟ್ಟು ದರವನ್ನು ಖಾಸಗಿ ವಾಹನಗಳ ಮಾಲೀಕರು ನಿಗದಿಪಡಿಸಿದ್ದರು. ಕೆಲ ಪ್ರಯಾಣಿಕರು ಇದಕ್ಕೆ ಗಲಾಟೆ ಮಾಡಿದರೆ ಅವರನ್ನುಇಳಿಸುವ ಪ್ರಕ್ರಿಯೆಯೂ ಕಂಡುಬಂತು.
ಖಾಸಗಿ ವಾಹನಗಳ ಸಂಚಾರ: ಮುಷ್ಕರ ಆರಂಭವಾಗಿ 5 ದಿನಗಳವರೆಗೆ ಖಾಸಗಿ ವಾಹನಗಳು ಬಸ್ ನಿಲ್ದಾಣದೊಳಗೆ ಬಂದಿರಲಿಲ್ಲ. ಆದರೆ ಸೋಮವಾರದಿಂದ ಕ್ರೂಸರ್, ಟೆಂಪೋಗಳು ಬಸ್ ನಿಲ್ದಾಣದೊಳಗೆ ಬಂದು ಬಸ್‌ಗಳು ಯಾವ ಯಾವ ಪ್ಲಾಟ್‌ಫಾರ್ಮ್ಗಳ ಮೂಲಕ ಯಾವ ಊರಿಗೆ ಸಂಚರಿಸುತ್ತಿದ್ದವೂ ಅದೇ ಪ್ಲಾಟ್‌ಫಾರ್ಮ್ಗಳಲ್ಲಿ ಆಯಾ ಊರಿಗೆ ಹೋಗುವ ಖಾಸಗಿ ವಾಹನಗಳು ನಿಂತಿದ್ದವು. ಪ್ರಯಾಣಿಕರು ತಮ್ಮೂರಿಗೆ ಹೋಗುವಪ್ಲಾಟ್‌ಫಾರ್ಮ್ಗೆ ಬಂದು ಖಾಸಗಿ ವಾಹನಗಳನ್ನು ಹತ್ತಿ ಪ್ರಯಾಣಿಸಿದರು. ಇದರಿಂದ ನಿಲ್ದಾಣದಹೊರಗಡೆ ಖಾಸಗಿ ವಾಹನಕ್ಕಾಗಿ ಪ್ರಯಾಣಿಕರು ಬಿಸಿಲಿನಲ್ಲಿ ಕಾಯುವ ಸಮಸ್ಯೆ ತಪ್ಪಿದಂತಾಗಿತ್ತು.
ಜಿಲ್ಲೆಯಲ್ಲಿ ಸೋಮವಾರ ಸಾರಿಗೆಸಂಸ್ಥೆಯ 18 ಬಸ್‌ಗಳು ಸಂಚರಿಸಿವೆ.ಮುಷ್ಕರನಿರತ 55 ವರ್ಷ ಮೇಲ್ಪಟ್ಟಿರುವಜಿಲ್ಲೆಯ 112ಜನರಿಗೆ ಕಡ್ಡಾಯ ನಿವೃತ್ತಿಗೊಳಿಸುವನೋಟಿಸ್ ಕೊಟ್ಟಿದ್ದೇವೆ. ಇಬ್ಬರು ಟ್ರೈ ನಿಯವರನ್ನುಕೆಲಸದಿಂದ ತೆಗೆದುಹಾಕಲಾಗಿದೆ. ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಿದ್ದೇವೆ. ಏ.14 ಇಲ್ಲವೇ 15ರಿಂದ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವಿದೆ. -ವಿ.ಎಸ್.ಜಗದೀಶ್, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ
ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ
ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್ ಜಾನ್ಸನ್