ಫೆ.8-9ರಂದು ವಾಲ್ಮೀಕಿ ಜಾತ್ರೋತ್ಸವ


Team Udayavani, Jan 4, 2021, 3:35 PM IST

ಫೆ.8-9ರಂದು ವಾಲ್ಮೀಕಿ ಜಾತ್ರೋತ್ಸವ

ಹಾವೇರಿ: ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ 3ನೇ ವರ್ಷದಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ, ಮಠದ 23ನೇ ವಾರ್ಷಿಕೋತ್ಸವ, ಲಿಂ.ಪುಣ್ಯಾನಂದಪುರಿ ಶ್ರೀಗಳ 13ನೇ ಪುಣ್ಯಾರಾಧನೆ, ಪ್ರಸನ್ನಾನಂದ ಶ್ರೀಗಳ 13ನೇ ವರ್ಷದ ಪಟ್ಟಾ ಧಿಕಾರ ಮಹೋತ್ಸವ ಕಾರ್ಯಕ್ರಮ ಫೆ. 8, 9ರಂದು ನಡೆಯಲಿದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ವಾಲ್ಮೀಕಿ ಜಾತ್ರೆಯಪೂರ್ವದಲ್ಲಿಯೇ ಮುಖ್ಯಮಂತ್ರಿಗಳು 2ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿನೀಡಿದ ಭರವಸೆಯಂತೆ ವಾಲ್ಮೀಕಿ ಸಮಾಜಕ್ಕೆ ಶೇ.7.5 ಮೀಸಲಾತಿಯನ್ನು ಘೋಷಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲದೇ ಹೋದರೆ, ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯುವುದು ಶತಸಿದ್ಧ.ಹೋರಾಟಕ್ಕೆ ಸಮಾಜ ಬಾಂಧವರು ಸಿದ್ಧರಾಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ವಾಲ್ಮೀಕಿ ಸಮಾಜ ನಾಲ್ಕನೇ ದೊಡ್ಡ ಸಮುದಾಯವಾಗಿದ್ದು, ವಾಲ್ಮೀಕಿ ಸಮಾಜಕ್ಕೆ ಉದ್ಯೋಗಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶೇ.7.5ಮೀಸಲಾತಿನೀಡುವಂತೆ ಕಳೆದ ಮೂರು ದಶಕಗಳಿಂದ ಹೋರಾಟಮಾಡಲಾಗುತ್ತಿದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿ ಸಿದಂತೆ ರಚಿಸಲಾದ ನಾಗಮೋಹನದಾಸ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ವಾಲ್ಮೀಕಿ ಜಾತ್ರೆಯಪೂರ್ವದಲ್ಲಿ ಜಾರಿಗೊಳಿಸಬೇಕು. ಇಲ್ಲದೇ ಹೋದರೆತಾವು ಸಮಾಜದೊಂದಿಗೆ ಉಗ್ರ ಹೋರಾಟ ನಡೆಸಲು ಸಿದ್ಧರಿರುವುದಾಗಿ ತಿಳಿಸಿದರು.

ವಾಲ್ಮೀಕಿ ಜಾತ್ರೆ ಕೇವಲ ಜಾತ್ರೆಯಲ್ಲ, ಜಾಗೃತಿ ಜಾತ್ರೆಯಾಗಿದೆ. ಈಗಾಗಲೇ ಅನೇಕ ಸಮಾಜದವರು ಅವರವರ ಸಾಂಸ್ಕೃತಿಕ ನಾಯಕರ ಹೆಸರಲ್ಲಿ ಸಂಘಟಿತರಾಗುತ್ತಿದ್ದಾರೆ. ದೇಶದಲ್ಲಿ ವಾಲ್ಮೀಕಿ ಸಮಾಜ ವಿವಿಧ ಹೆಸರುಗಳಲ್ಲಿ ಕರೆಯಲ್ಪಡುತ್ತಿದೆ. ಇವನ್ನೆಲ್ಲ ಸಮೀಕರಿಸಿ ಒಂದೇ ವೇದಿಕೆಗೆ ತರುವ ಸವಾಲು ನಮ್ಮ ಮುಂದಿದೆ. ಆ ದಿಸೆಯಲ್ಲಿ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 108 ತಾಲೂಕುಗಳಲ್ಲಿ ಪ್ರವಾಸ ಮಾಡಿ ವಾಲ್ಮೀಕಿ ಜಾತ್ರೆಯ ಬಗ್ಗೆ ಹಾಗೂ ಶೇ.7.5 ಮೀಸಲಾತಿ ವಿಳಂಬದ ಬಗ್ಗೆ ಸಮಾಜ ಬಾಂಧವರಲ್ಲಿ ಅರಿವು ಮೂಡಿಸಲಾಗಿದ್ದು, ಜನೇವರಿಅಂತ್ಯಕ್ಕೆ ಇನ್ನುಳಿದ ತಾಲೂಕುಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಕೆ.ಮಂಜಣ್ಣ, ಅಶೋಕ ತಳವಾರ, ಮಂಜುಳಾ ಕರಬಸಮ್ಮನವರ, ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿ ವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಆವನಟ್ಟಿ ಮಾತನಾಡಿದರು.ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಶೇಖರಕಳ್ಳಿಮನಿ, ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಹರನಗಿರಿ, ಪ್ರಮುಖರಾದ ಶ್ರೀಧರ ದೊಡ್ಡಮನಿ, ಅನಿಲ ಕುಮಾರ ಮರೋಳ, ಪ್ರಮೋದ ನಲವಾಗಿಲ, ಡಾ.ರಮೇಶ ತೆವರಿ, ಶೇಖರ ಕರಬಸಮ್ಮನವರ, ಈಶಪ್ಪ ಭೀಮಕ್ಕನವರ, ಶಿವಪ್ಪ ಜವಳಿ, ಮಲ್ಲಿಕಾರ್ಜುನ ಬೂದಗಟ್ಟಿ, ಬಸವರಾಜ ತಡಸದ, ಬಸವ ರಾಜ ಭೀಮಕ್ಕನವರ, ಸಿ.ವಿ.ಬ್ಯಾಡಗಿ ಇತರರಿದ್ದರು.

ಟಾಪ್ ನ್ಯೂಸ್

shaheen shah afridi

ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ರೂಪದಲ್ಲಿ ಪಡೆಯಬೇಕು: ಶಹೀನ್ ಶಾ ಅಫ್ರಿದಿ ಮಹದಾಸೆ

ಮುನಿರತ್ನ

ಜಾರಕಿಹೊಳಿ ಹೇಳಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ: ಮುನಿರತ್ನ

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

1-aa

ಪರಪ್ಪನ ಅಗ್ರಹಾರ ಅಕ್ರಮ: ಎಸ್ ಮುರುಗನ್ ನೇತೃತ್ವದಲ್ಲಿ ತನಿಖೆ

india vs bangladesh under 19 world cup

ಇಂದು ಅಂಡರ್ 19 ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ  ಸೇಡಿನ ಪಂದ್ಯ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

accident

ಹಾವೇರಿ: ಲಾರಿ ಪಲ್ಟಿಯಾಗಿ ಮೂವರು ದಾರುಣ ಸಾವು

ಸೆರತಯರಜಹಗ್ದಸಅ

ಸಾರ್ಥಕ ಜೀವನಕ್ಕೆ ಅಧ್ಯಾತ್ಮದ ಚಿಂತನೆ ಸಹಕಾರಿ

ಸೆರತೆತಯರಕಜಹಗ್ದ

ಮಹಾತ್ಮರ ಆದರ್ಶ ಪಾಲಿಸಿ

ರತಯುಇಇಕುಜಹಗ್ದಸ

ಸ್ಪರ್ಧಾತ್ಮಕ ಪೈಪೋಟಿಗೆ ವಿದ್ಯಾರ್ಥಿಗಳಿಗೆ ಅವಕಾಶ

MUST WATCH

udayavani youtube

ಹುಣಸೂರು : ದುಷ್ಕರ್ಮಿಗಳ ಗುಂಡೇಟಿಗೆ ಜೀವಬಿಟ್ಟ 20 ವರ್ಷದ ಹೆಣ್ಣಾನೆ

udayavani youtube

ಉಳ್ಳಾಲ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

ಹೊಸ ಸೇರ್ಪಡೆ

shaheen shah afridi

ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ರೂಪದಲ್ಲಿ ಪಡೆಯಬೇಕು: ಶಹೀನ್ ಶಾ ಅಫ್ರಿದಿ ಮಹದಾಸೆ

ಮುನಿರತ್ನ

ಜಾರಕಿಹೊಳಿ ಹೇಳಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ: ಮುನಿರತ್ನ

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್

18may

ಮಾ.12ರಂದು ರಾಷ್ಟ್ರೀಯ ಲೋಕ ಅದಾಲತ್‌

1-aa

ಪರಪ್ಪನ ಅಗ್ರಹಾರ ಅಕ್ರಮ: ಎಸ್ ಮುರುಗನ್ ನೇತೃತ್ವದಲ್ಲಿ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.