ಮತದಾರರ ಪಟ್ಟಿ ಪರಿಶೀಲನಾ ಆರಂಭ

Team Udayavani, Sep 2, 2019, 12:38 PM IST

ಹಿರೇಕೆರೂರ: ತಹಶೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್‌ ಆರ್‌.ಎಚ್. ಭಾಗವಾನ ಮಾತನಾಡಿದರು.

ಹಿರೇಕೆರೂರ: ತಹಶೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ಮತದಾರರ ಪಟ್ಟಿ ಪರಿಷ್ಕರಣ ಹಾಗೂ ಪರಿಶೀಲನೆ ನಿಮಿತ್ತ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್‌ ಆರ್‌.ಎಚ್.ಭಾಗವಾನ್‌, ಚುನಾವಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಅವಶ್ಯಕತೆ ಇದ್ದು, ಇದು ಕೇವಲ ಕಾರ್ಯವಲ್ಲ ಇದು ನಮ್ಮ ಕರ್ತವ್ಯವಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಸೆ. 1 ರಿಂದ ಸೆ. 30ರ ವರೆಗೆ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದ ಸಲುವಾಗಿ ಆಯಾ ಪ್ರದೇಶ ಬಿಎಲ್ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ಕೈಗೊಳ್ಳುವರಿದ್ದು, ಬಿಎಲ್ಒಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮತದಾರರ ಸೇರ್ಪಡೆ, ಮತದಾರರ ತಗೆದುಹಾಕುವಿಕೆ ಮತದಾರರ ಪರಿಶೀಲನೆ ಮತ್ತು ದೃಢಿಕರಣ ಹಾಗೂ ಮತದಾರರಲ್ಲಿ ತಿದ್ದುಪಡಿ ಅಥವಾ ಇತರೆ ದೋಷ ಇದ್ದಲ್ಲಿ ಅವಶ್ಯ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳುವುದರ ಮೂಲಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಯಶ್ವಸಿಗೊಳಿಸಬೇಕಿದೆ.

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಅಟಲ್ಜನ ಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ (ಗ್ರಾಪಂ), ಮತಗಟ್ಟೆ ಅಧಿಕಾರಿ, ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್‌, 1950 ಮತದಾರರ ಸಹಾಯವಾಣಿ ಸೇವಾ ಕೇಂದ್ರವನ್ನು ಸಂರ್ಪಕಿಸಬಹುದು ಎಂದರು.

ವೈದ್ಯಾಧಿಕಾರಿ ಝಡ್‌.ಆರ್‌.ಮಕಾನಂದಾರ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಬಳಿಗಾರ, ತೋಟಗಾರಿಕಾ ನಿರ್ದೇಶಕ ಸಿ.ಎನ್‌.ರಂಗಪ್ಪ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಕಿರಣ್‌ ಎಲ್, ದೈಹಿಕಿ ಶಿಕ್ಷಣಾಧಿಕಾರಿ ಪಿ.ಬಿ.ನಿಂಗನಗೌಡರ, ನಾಗರಾಜ ಕಟ್ಟಿಮನಿ, ಎಚ್.ವೈ.ಕೊಪ್ಪದ, ರವಿ ದಾಳೇರ, ಎಸ್‌.ಎಸ್‌.ಗಟ್ಟಿ, ಆರತಿ ಡೋಣಿ, ನೂರ್‌ಜಹಾನ ಬನ್ನಿಕೊಪ್ಪ, ಎನ್‌ ಎಸ್‌ ಬಣಕಾರ, ಜಯಮ್ಮ ದುರ್ಗ, ಸುಮಿತ್ರಾ ಸಾಲೇರ, ವಾಸವಂಬ ಹುಬ್ಬಳ್ಳಿ ಹಾಗೂ ಇತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ