ವಿವಿ ಸಾಗರಕ್ಕೆ ಭದ್ರಾ ನೀರು ಬಂದೇ ಬರುತ್ತೆ

ಅ. 1ರಂದು ಭದ್ರಾ ನೀರು ಹರಿಸುವ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಚಾಲನೆ: ಶಾಸಕಿ ಪೂರ್ಣಿಮಾ

Team Udayavani, Sep 20, 2019, 5:01 PM IST

ಹಿರಿಯೂರು: ನಗರದ ಎ. ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ನಡೆದ ಯುವ ಸಮ್ಮೇಳನವನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಉದ್ಘಾಟಿಸಿದರು.

ಹಿರಿಯೂರು: ತಾಲೂಕಿನಲ್ಲಿ ಸತತ ಬರಗಾಲ, ಅಂತರ್ಜಲ ಮಟ್ಟ ಕುಸಿತದ ಪರಿಣಾಮ ನೀರಿನ ಸಮಸ್ಯೆ ಉಲ್ಬಣಿಸಿದೆ. ರೈತರು ಹಾಗೂ ಜನರ ನೀರಿನ ಬವಣೆಗೆ ಕೆಲವೇ ದಿನಗಳಲ್ಲಿ ಪರಿಹಾರ ದೊರೆಯಲಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

ನಗರದ ಶಾರದಾಶ್ರಮ ಮತ್ತು ರೋಟರಿ ಕ್ಲಬ್‌ ಆಶ್ರಯದಲ್ಲಿ ನೆಹರು ಮೈದಾನದ ಎ. ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಯುವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಅಕ್ಟೋವ್‌ 1 ರಂದು ಭದ್ರಾ ನೀರು ವಿವಿ ಸಾಗರಕ್ಕೆ ಹರಿದು ಬರಲಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಯುವ ಸಮೂಹ ಜೀವನದಲ್ಲಿ ಗುರಿ ಇಟ್ಟು ಕೊಂಡು ಸಾಧನೆಯತ್ತ ಸಾಗಬೇಕು. ಮೊಬೈಲ್, ಫೇಸ್‌ಬುಕ್‌ಗಳತ್ತ ಹೆಚ್ಚಿನ ಗಮನ ಹರಿಸದೆ ಭವಿಷ್ಯದ ಬದುಕಿನತ್ತ ಚಿಂತನೆ ನಡೆಸಬೇಕು. ಹೋಬಳಿ ಮಟ್ಟದಲ್ಲಿ ಯುವ ಸಮ್ಮೇಳನ ನಡೆಯುವಂತಾಗಬೇಕು ಎಂದು ಆಶಿಸಿದರು.

ಭವತಾರಿಣಿ ಆಶ್ರಮದ ಮಾತಾಜೀ ವಿವೇಕಮಯಿ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ನಡೆಸಿ ಮಾತನಾಡಿ, ನಾವು ಆತ್ಮ ಸ್ವರೂಪಿಯಾಗಿದ್ದು ಎರಡು ಬಗೆಯ ವ್ಯಕ್ತಿತ್ವವನ್ನು ಹೊಂದಿರುತ್ತೇವೆ. ಆತ್ಮ ಸರ್ವಶಕ್ತವಾದುದು. ಯಶಸ್ಸಿಗೆ ಮನಸ್ಸೇ ಮುಖ್ಯ. ಆದ್ದರಿಂದ ಮನಸ್ಸಿಗೆ ಸಂಸ್ಕಾರ ಕೊಡುವ ತರಬೇತಿ ದೊರೆಯಬೇಕಿದೆ. ಜೊತೆಗೆ ಉದಾತ್ತ, ಶ್ರೇಷ್ಠ ಚಿಂತನೆ ಮತ್ತು ಶಕ್ತಿಯುತ ಚಿಂತನೆಗಳಿಗೆ ಮನಸ್ಸು ತೆರೆದುಕೊಳ್ಳಬೇಕು ಎಂದು ಕರೆ ನೀಡಿದರು.

ಶಾರದಾಶ್ರಮದ ಮಾತಾಜೀ ಚೈತನ್ಯಮಯಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಿರೀಶಾ ಮತ್ತು ಜ್ಞಾನಭಾರತಿ ಬಿ.ಎಡ್‌ ಕಾಲೇಜುಗಳ ಪದವಿ, ಪದವಿಪೂರ್ವಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ವಿತರಿಸಿದರು. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾರದಾಶ್ರಮದ ಆಶ್ರಮದ ವತಿಯಿಂದ ಪ್ರೋತ್ಸಾಹಧನ ವಿತರಿಸಲಾಯಿತು. ಚಿತ್ರಕಲಾ ಶಿಕ್ಷಕ ರಾಜೀವ್‌ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್‌ ಸದಸ್ಯ ಕಿರಣ್‌ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಆಚಾರ್‌ ನಿರೂಪಿಸಿದರು. ನಾಗರಾಜ್‌ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ