Udayavni Special

ಶಕ್ತಿಯ ಸದುಪಯೋಗದಿಂದ ಉತ್ತಮ ಸಾಧನೆ

ಅಲ್ಲಮಪ್ರಭುಗಳಿಗಿದೆ ಶಕ್ತಿ ಸಚೇತನಗೊಳಿಸಿದ ಖ್ಯಾತಿ: ಮುರುಘಾ ಶರಣರು

Team Udayavani, Aug 23, 2019, 12:30 PM IST

23-April-18

ಹೊಳಲ್ಕೆರೆ: ತಾಲೂಕಿನ ಗುಡ್ಡದಸಾಂತೇನಹಳ್ಳಿ ಗ್ರಾಮದಲ್ಲಿ ನಡೆದ 'ಕಲ್ಯಾಣ ದರ್ಶನ' ಕಾರ್ಯಕ್ರಮದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು

ಹೊಳಲ್ಕೆರೆ: ಮಾನವ ತನ್ನ ಅರಿವಿಗೆ ಬಾರದೇ ದುರ್ಬುದ್ಧಿಗೆ ಒಳಗಾಗುತ್ತಾನೆ. ದುರ್ಬುದ್ಧಿಯ ಮಾತನ್ನು ಕೇಳಿದವರು ಸಂಕಷ್ಟ ಅನುಭವಿಸಿದರೆ, ಸದ್ಭುದ್ಧಿಯ ಮಾತನ್ನು ಕೇಳಿದವರು ಸಾಧನೆ ಮಾಡುತ್ತಾರೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ತಾಲೂಕಿನ ಗುಡ್ಡದಸಾಂತೇನಹಳ್ಳಿಯಲ್ಲಿ ಗುರುವಾರ ನಡೆದ ‘ಕಲ್ಯಾಣ ದರ್ಶನ’

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಶಕ್ತಿಯ ಜಾಗೃತಿಯನ್ನು ನಾವು ಪಡೆದುಕೊಳ್ಳಬೇಕು. ಸಾಕ್ಷಾತ್ಕಾರದ ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳಬೇಕು. ಶರೀರದಲ್ಲಿ, ಇಂದ್ರಿಯಗಳಲ್ಲಿ ಹಾಗೂ ಮೆದುಳಿನಲ್ಲಿ ಶಕ್ತಿಯಿದೆ. ಇಂದ್ರಿಯ ಜನ್ಯ ಜಾಗೃತಿ ಹಾಗೂ ಬುದ್ಧಿಯ ಜಾಗೃತಿ ಆಗಬೇಕಿದೆ. ಅಲ್ಲಮಪ್ರಭು ಶಕ್ತಿಯನ್ನು ಸಚೇತನಗೊಳಿಸಿದಾತ. ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನದ ಶಕ್ತಿಯನ್ನು ಸಮಾಜಮುಖೀಯಾಗಿ ಬಿತ್ತರಿಸಿದ್ದರು. ಮಹಾತ್ಮ ಗಾಂಧೀಜಿಯವರ ಶಕ್ತಿ ಅತ್ಯದ್ಭುತವಾದುದು. ನೀವು ಕೂಡ ನಿಮ್ಮ ಶಕ್ತಿಯನ್ನು ಜಾಗೃತಗೊಳಿಸಿ ವಿಶೇಷ ಸಾಧನೆಗೆ ಅಣಿಯಾಗಬೇಕು. ಶಕ್ತಿಯ ಸದುಪಯೋಗದಿಂದ ಸಾಧನೆ ಸಾಧ್ಯ ಎಂದರು.

ಹೊಸದುರ್ಗದ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎ.ಪರಮೇಶ್ವರಪ್ಪ ವಿಷಯಾವಲೋಕನ ಮಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಾದಿ ಪ್ರಮಥರು ಸಮಾಜದ‌ ಅಂಕುಡೊಂಕುಗಳನ್ನು ತಿದ್ದಿ ಉತ್ತಮ ರೂಪ ನೀಡುವ ಪ್ರಯತ್ನ ಮಾಡಿದರು. ಆದರೆ ಇಂದು ಅಧಿಕಾರ, ಹಣಕ್ಕಾಗಿ ಸ್ವಾರ್ಥ ಲಾಲಸೆ ತುಂಬಿರುವ ಸಮಾಜವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.

ನಮ್ಮ ಭಾರತ ವಿವಿಧತೆಯಲ್ಲಿ ಏಕತೆ ಸಾರಿದ ರಾಷ್ಟ್ರ. ಅಭಿವೃದ್ಧಿಯತ್ತ ಸಾಗಬೇಕಾದರೆ ಯುವ ಪೀಳಿಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ವಿಶೇಷತೆಯನ್ನು ಗಮನಿಸಿ ಅದೇ ದಾರಿಯಲ್ಲಿ ಸಾಗುವಂತೆ ನಿರ್ದೇಶಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಶಕ್ತಿಯನ್ನು ಅಪವ್ಯಯ ಮಾಡದೆ ಒಳ್ಳೆಯದನ್ನು ಮಾಡಲು ಬಳಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್‌, ಗಂಗಮ್ಮ, ವಿಶ್ವನಾಥನಹಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೂಪಾ ಶಿವಣ್ಣ, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಮೊದಲಾದವರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಎಚ್.ಡಿ. ರಂಗಪ್ಪ ಸ್ವಾಗತಿಸಿದರು. ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಆಚರಣೆಗೆ ಇಡೀ ಗ್ರಾಮವೇ ಸಿಂಗಾರಗೊಂಡಿತ್ತು. ವೀರಗಾಸೆ ಪದಗಳು, ಹೂವಿನ ಹಾಸಿಗೆ, ತಳಿರು ತೋರಣ, ರಂಗೋಲಿ ಚಿತ್ತಾರದ ಮಧ್ಯೆ ಮುರುಘಾ ಶರಣರನ್ನು ಮೆರವಣಿಗೆ ಮಾಡಿ ವೇದಿಕೆಗೆ ಕರೆತರಲಾಯಿತು. ಶಾಲಾ ಮಕ್ಕಳು ಜಾನಪದ ಮತ್ತು ವಚನ ನೃತ್ಯ ಪ್ರದರ್ಶಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

ಭಾರತದಲ್ಲೇ ಐಪಿಎಲ್ ನಡೆಸಲು ಮೊದಲ ಪ್ರಾಶಸ್ತ್ಯ: ಅರುಣ್ ಧುಮಾಲ್

ಭಾರತದಲ್ಲೇ ಐಪಿಎಲ್ ನಡೆಸಲು ಮೊದಲ ಪ್ರಾಶಸ್ತ್ಯ: ಅರುಣ್ ಧುಮಾಲ್

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಮೂಡಬಿದಿರೆಯ ವ್ಯಕ್ತಿ ಸಾವು

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಮೂಡಬಿದಿರೆಯ ವ್ಯಕ್ತಿ ಸಾವು

ಎಕ್ಸ್‌ ರೇ ಯಿಂದಲೇ ಕೋವಿಡ್‌ ಪತ್ತೆ: ಕನ್ನಡಿಗ ಸಂಶೋಧಕರ ಮಹತ್ವದ ಸಾಧನೆ

ಎಕ್ಸ್‌ ರೇ ಯಿಂದಲೇ ಕೋವಿಡ್‌ ಪತ್ತೆ: ಕನ್ನಡಿಗ ಸಂಶೋಧಕರ ಮಹತ್ವದ ಸಾಧನೆ

ಪುತ್ತೂರು: ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆ ಸಾವು

ಪುತ್ತೂರು: ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆ ಸಾವು

ಕೊಪ್ಪಳ ನಾಳೆಯಿಂದ ಪ್ರತಿ ದಿನ ಮಧ್ಯಾಹ್ನ 2ರಿಂದ ಸ್ವಯಂ ಬಂದ್ ಗೆ ನಿರ್ಧಾರ

ಕೊಪ್ಪಳ ನಾಳೆಯಿಂದ ಪ್ರತಿ ದಿನ ಮಧ್ಯಾಹ್ನ 2ರಿಂದ ಸ್ವಯಂ ಬಂದ್ ಗೆ ನಿರ್ಧಾರ

ಮೃತಪಟ್ಟ ಹಾನಾಪುರ ತಾಂಡಾ ಯುವಕನಿಗೆ ಸೋಂಕು ದೃಢ: ಬಾಗಲಕೋಟೆಯಲ್ಲಿ ಸೋಂಕಿಗೆ 9ನೇ ಬಲಿ

ಮೃತಪಟ್ಟ ಹಾನಾಪುರ ತಾಂಡಾ ಯುವಕನಿಗೆ ಸೋಂಕು ದೃಢ: ಬಾಗಲಕೋಟೆಯಲ್ಲಿ ಸೋಂಕಿಗೆ 9ನೇ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಯುಷ್‌ ಔಷಧ ಜನರಿಗೆ ತಲುಪಿಸಿ

ಆಯುಷ್‌ ಔಷಧ ಜನರಿಗೆ ತಲುಪಿಸಿ

ಸಮರ್ಪಕವಾಗಿ ಬಳಕೆಯಾಗದ ಅನುದಾನ: ಜಿಪಂ ಅಧ್ಯಕ್ಷೆ ಬೇಸರ

ಸಮರ್ಪಕವಾಗಿ ಬಳಕೆಯಾಗದ ಅನುದಾನ: ಜಿಪಂ ಅಧ್ಯಕ್ಷೆ ಬೇಸರ

ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ತೋಟಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಒತ್ತಾಯಿಸಿ ಮನವಿ

ತೋಟಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಒತ್ತಾಯಿಸಿ ಮನವಿ

ಆಶಾಗಳು ಎಚ್ಚರಿಕೆಯೊಂದಿಗೆ ಕರ್ತವ್ಯ ನಿರ್ವಹಿಸಿ: ಚಂದ್ರಪ್ಪ

ಆಶಾಗಳು ಎಚ್ಚರಿಕೆಯೊಂದಿಗೆ ಕರ್ತವ್ಯ ನಿರ್ವಹಿಸಿ: ಚಂದ್ರಪ್ಪ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

ಹೊಸ ಸೇರ್ಪಡೆ

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕರಿಗೆ ಸೋಂಕು ದೃಢ: ಮೇಯರ್ ಸೇರಿದಂತೆ ಹಲವರಿಗೆ ಕ್ವಾರಂಟೈನ್

“ಕಲ್ಯಾಣ್‌-ಡೊಂಬಿವಲಿಯತ್ತ ಸರಕಾರದ ಗಮನ ಅಗತ್ಯ’

“ಕಲ್ಯಾಣ್‌-ಡೊಂಬಿವಲಿಯತ್ತ ಸರಕಾರದ ಗಮನ ಅಗತ್ಯ’

ಆಯುಷ್‌ ಔಷಧ ಜನರಿಗೆ ತಲುಪಿಸಿ

ಆಯುಷ್‌ ಔಷಧ ಜನರಿಗೆ ತಲುಪಿಸಿ

ಸಮರ್ಪಕವಾಗಿ ಬಳಕೆಯಾಗದ ಅನುದಾನ: ಜಿಪಂ ಅಧ್ಯಕ್ಷೆ ಬೇಸರ

ಸಮರ್ಪಕವಾಗಿ ಬಳಕೆಯಾಗದ ಅನುದಾನ: ಜಿಪಂ ಅಧ್ಯಕ್ಷೆ ಬೇಸರ

ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.