ಜನರ ಸಮಸ್ಯೆ ಬಗೆಹರಿಸಿ

ಬರ-ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಲಿ

Team Udayavani, May 16, 2019, 1:20 PM IST

ಹೊನ್ನಾಳಿ: ಪಟ್ಟಣದ ಗುರುಭವನದಲ್ಲಿ ತಾಲೂಕು ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ ವತಿಯಿಂದ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆ ಸಮಾರಂಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗುದ್ದು ರಂಗಸ್ವಾಮಿ ಮಾತನಾಡಿದರು.

ಹೊನ್ನಾಳಿ: ಕಳೆದ 2 ತಿಂಗಳಿನಿಂದಲೂ ರಾಜಕಾರಣಿಗಳು ಹಾಗೂ ಸರ್ಕಾರಗಳು ಬರಗಾಲ ಹಾಗೂ ಕುಡಿಯುವ ನೀರಿನ ತೊಂದರೆಗಳ ಬಗ್ಗೆ ಗಮನಹರಿಸದೆ ಚುನಾವಣೆ, ನೀತಿ ಸಂಹಿತೆ, ಫಲಿತಾಂಶ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಅಖಂಡ ಕರ್ನಾಟ ರೈತ ಸಂಘದ ರಾಜ್ಯಾಧ್ಯಕ್ಷ ಸೋಮನಗುದ್ದು ರಂಗಸ್ವಾಮಿ ಹೇಳಿದರು.

ಗುರುಭವನದಲ್ಲಿ ಬುಧವಾರ ತಾಲೂಕು ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ ವತಿಯಿಂದ ಹಮ್ಮಿಕೊಂಡಿದ್ದ 37ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬರುವ ದಿನಗಳಲ್ಲಾದರೂ ಆಳುವ ಜನಪ್ರತಿನಿಧಿಗಳು ಕಾಲಹರಣ ಮಾಡದೆ ನೀರಿನ ಬವಣೆಯನ್ನು ನಿವಾರಿಸಲು ಮುಂದಾಗಬೇಕು. ಸಾಲಮನ್ನಾ ಯೋಜನೆಯಡಿ ಜಿಲ್ಲೆಜಿಲ್ಲೆಗೆ ಇರುವ ತಾರತಮ್ಯ ಹೋಗಲಾಡಿಸಿ ಸಣ್ಣ, ದೊಡ್ಡ ರೈತರೆನ್ನದೆ, ಜಾತಿ ಮತಗಳೆನ್ನದೇ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಳ್ಳಿ ನಾಗರಾಜಪ್ಪ ಮಾತನಾಡಿ, ಮಳೆ ಬಿದ್ದ ತಕ್ಷಣ ರೈತರಿಗೆ ಗುಣವåಟ್ಟದ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು. ಬಗರ್‌ ಹುಕುಂ ಸಮಿತಿ ರಚನೆಯಾಗಬೇಕು. ತಾಲೂಕಿನ ಸರ್ವೆ ಇಲಾಖೆಯಲ್ಲಿನ ಕಾರ್ಯಗಳು ಮಂದ ಗತಿಯಲ್ಲಿ ಸಾಗಿದ್ದು, ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದರು.

ಹಾಲಿಗೆ ನೀಡುವ ಪ್ರೋತ್ಸಾಹ ಧ‌ನವನ್ನು 6 ರೂ.ಗಳಿಂದ 10 ರೂ.ಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ನ್ಯಾಮತಿ ತಾಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶ ಮಾತನಾಡಿ, ನ್ಯಾಮತಿ ತಾಲೂಕಿನ ವ್ಯಾಪ್ತಿಯಲ್ಲಿರುವ ಸುಮಾರು 50 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಮುಂದಾಗಬೇಕು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಮಾತನಾಡಿ, ಸರ್ಕಾರಿ ಅಧಿಕಾರಿಗಳು ರೈತರನ್ನು ಗುಲಾಮರಂತೆ ಕಾಣುತ್ತಿದ್ದು. ಇದನ್ನು ವಿರೋಧಿಸಲು ರೈತ ಸಂಘಟನೆ ಬಲಗೊಳ್ಳಬೇಕು. ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗುವ ಸರ್ಕಾರಗಳು ರೈತರನ್ನು ಸಾವಿನ ದವಡೆಗೆ ದೂಡುತ್ತಿವೆ. ರೈತರ ಪರ ಕೆಲಸಗಳಿಗೆ ಕೇಂದ್ರ ಸರ್ಕಾರವು ರಾಜ್ಯದತ್ತ ಹಾಗೂ ರಾಜ್ಯ ಸರ್ಕಾರವು ಕೇಂದ್ರದತ್ತ ಬೆರಳು ತೋರಿಸುವ ಪ್ರವೃತ್ತಿ ಕೊನೆಗೊಳ್ಳಬೇಕೆಂದು ಒತ್ತ್ತಾಯಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮುನ್ನ ಕಡದಕಟ್ಟೆ ವೃತ್ತದಲ್ಲಿರುವ ಎಚ್.ಎಸ್‌. ರುದ್ರಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೈತ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರೈತ ಮುಖಂಡರಾದ ಹಾವೇರಿ ಪ್ರಕಾಶ ಬಾರ್ಕಿ, ಹಿರೇಕೆರೂರು ಬಸವನಗೌಡ, ಹೊಸಜೋಗ ಮುರುಗೇಶಪ್ಪ, ಸುಂಕದಕಟ್ಟೆ ಕರಿಬಸಪ್ಪ, ನೀಲಕಂಠ ರಾಯ್ಕರ, ಗೋಪಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಮುಖ್ಯಮಂತ್ರಿಗಳು ಈಗಾಗಲೇ ಮತದಾನ ಮುಗಿದು ಮತಯಂತ್ರದಲ್ಲಿ ಮತಗಳು ಭದ್ರವಾಗಿದ್ದನ್ನು ತಿಳಿದಿದ್ದರೂ ಮಗನ ಗೆಲುವಿಗೆ ದೇವರ ಮೊರೆ ಹೋಗುತ್ತಿದ್ದಾರೆ. ದೇವರು ಮತಪೆಟ್ಟಿಗೆಯಲ್ಲಿರುವ ಮತವನ್ನು ಬದಲಿಸಲು ಸಾಧ್ಯವೇ?
ಸೋಮನಗುದ್ದು ರಂಗಸ್ವಾಮಿ,
ರಾಜ್ಯಾಧ್ಯಕ್ಷ, ರೈತ ಸಂಘ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜಾಜಿನಗರದಲ್ಲಿ ಭಾನುವಾರ ಮುಂಜಾನೆ ನಡೆದಿದ್ದ ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವ್ಯಾಪಾರಿ ಜೈಕುಮಾರ್‌ರನ್ನು...

  • ಬೆಂಗಳೂರು: ಡೆಂಘೀ ಜ್ವರಕ್ಕೆ ತುತ್ತಾಗಿ ಪ್ಲೇಟ್‌ಲೆಟ್‌ಗಾಗಿ ಖಾಸಗಿ ರಕ್ತನಿಧಿಗಳಿಗೆ ಸಾವಿರಾರು ರೂ. ನೀಡಿ ಬಳಲಿರುವ ಬಡ ರೋಗಿಗಳ ನೆರವಿಗೆ ಧಾವಿಸಿರುವ ಬೃಹತ್‌...

  • ಬೆಂಗಳೂರು: ಜಿಲ್ಲಾಡಳಿತಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಇದರ ಭಾಗವಾಗಿಯೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ...

  • ಬೆಂಗಳೂರು: ಬೈಸಿಕಲ್‌ಗ‌ಳು, ಬೈಕ್‌ಗಳು, ಅಷ್ಟೇ ಯಾಕೆ ಐಷಾರಾಮಿ ಕಾರುಗಳೂ ಬಾಡಿಗೆ ಸಿಗುವುದು ಸರ್ವೇಸಾಮಾನ್ಯ. ಆದರೆ, ಈಗ ದೇವರು ಅದರಲ್ಲೂ ಗಣೇಶ ಕೂಡ ಬಾಡಿಗೆಗೆ...

  • ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿಯ ಬಜೆಟ್‌ ತಡೆಹಿಡಿದಿರುವುದರ ಬಗ್ಗೆ ಸೋಮವಾರ ನಡೆದ ಕೌನ್ಸಿಲ್‌ ಸಭೆಯು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದದ...

ಹೊಸ ಸೇರ್ಪಡೆ