ನಗರ ಹೋಬಳಿಯಲ್ಲಿ ಮಳೆ; ಜಲಾಶಯಕ್ಕೆ ಹೆಚ್ಚಿನ ನೀರು

Team Udayavani, Jul 10, 2019, 2:53 PM IST

ಹೊಸನಗರ: ನಗರ ಹೋಬಳಿಯಲ್ಲಿ ವ್ಯಾಪಕ ಮಳೆ ಹರಿಯುತ್ತಿದ್ದು ಹಿಲ್ಕುಂಜಿ ಹೊಳೆ ತುಂಬಿ ಹರಿಯುತ್ತಿದೆ.

ಹೊಸನಗರ: ಕಳೆದು ಮೂರು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಮಾಣಿ, ಚಕ್ರಾ, ಸಾವೇಹಕ್ಲು, ಪಿಕಪ್‌ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಹೋಗುತ್ತಿದೆ.

ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯ ಕಾರಣ ಹಿಲ್ಕುಂಜಿ ಹೊಳೆ ತುಂಬಿ ಹರಿಯುತ್ತಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಮಾಣಿ ಜಲಾಶಯ ಪ್ರದೇಶದಲ್ಲಿ 110 ಮಿಮೀ, ಯಡೂರಿನಲ್ಲಿ 96 ಮಿಮೀ, ಹುಲಿಕಲ್ನಲ್ಲಿ 114 ಮಿಮೀ ಮತ್ತು ಮಾಸ್ತಿಕಟ್ಟೆಯಲ್ಲಿ 146 ಮಿಮೀ ಮಳೆಯಾಗಿದೆ. 594.36 ಮೀ ಗರೀಷ್ಠ ಮಟ್ಟದ ಮಾಣಿ ಜಲಾಶಯದ ನೀರಿನ ಮಟ್ಟ 573.74 ಮೀ ತಲುಪಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ