ರಾಜಬೀದಿಯಲ್ಲಿ ರಾಷ್ಟ್ರಪಕ್ಷಿ ಸವಾರಿ!

ಬಿದನೂರು ನಗರದಲ್ಲಿ ಸಾರ್ವಜನಿಕರ ಗಮನ ಸೆಳೆದ ರಾಷ್ಟ್ರಪಕ್ಷಿ ಮಯೂರ ನಡಿಗೆ

Team Udayavani, Jul 22, 2019, 11:39 AM IST

ಹೊಸನಗರ: ಇಂದು ಕಾಡಿನ ಬಯಲು ಪ್ರದೇಶದಲ್ಲಿ ನವಿಲನ್ನು ಕಾಣುವುದು ಅಪರೂಪ. ಆದರೆ ನೋಡನೋಡುತ್ತಲೇ ಪೇಟೆ ರಸ್ತೆಯಲ್ಲಿ ನವಿಲಿನ ಸವಾರಿ ಬಂದರೆ ಹೇಗೆ. ಹೌದು ಇಂತಹದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ನವಿಲು ಎಲ್ಲರ ಗಮನ ಸೆಳೆದಿದೆ.

ಹೌದು, ಇದು ನಡೆದಿದ್ದು ತಾಲೂಕಿನ ನಗರದ ಚಿಕ್ಕಪೇಟೆ ಸರ್ಕಲ್ನಲ್ಲಿ. ಮುಸ್ಸಂಜೆ ಹೊತ್ತಲ್ಲಿ ಡಾಂಬರ್‌ ರಸ್ತೆ ಮೇಲೆ ಯಾವುದೇ ಹಂಗಿಲ್ಲದೆ ಮಯೂರವೊಂದು ರಾಜ ಗಾಂಭೀರ್ಯದಲ್ಲಿ ನಡಯುವಾಗ ಸ್ಥಳೀಯರು ಒಮ್ಮೆ ಅವಾಕ್ಕಾದರು. ಯಾವುದೇ ಹಂಗಿಲ್ಲ. ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಗೂ ಕ್ಯಾರೇ ಮಾಡದ ಆ ನವಿಲು ಸಂಜೆ ವಿಹಾರದಂತೆ ನಡೆದು ಹೋಗುತ್ತಲೇ ಇತ್ತು. ಅಕ್ಕಪಕ್ಕ ಅಂಗಡಿಯತ್ತ ಬಂದು ಕುಡಿನೋಟ ಬೀರಿ ಮತ್ತೆ ತನ್ನ ದಾರಿಯಲ್ಲಿ ಸಾಗುತ್ತಿದ್ದ ನವಿಲು ಎಲ್ಲರನ್ನು ಆಕರ್ಷಿಸಿದೆ.

ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್‌!: ಯಾವುದೇ ಅಳುಕು ಅಂಜಿಕೆಯಿಲ್ಲದ ರಾಷ್ಟ್ರಪಕ್ಷಿಯ ನಡೆಯನ್ನು ಕಂಡ ಸುತ್ತಮುತ್ತಲಿನವರು ತಮ್ಮ ಮೊಬೈಲ್ನಲ್ಲಿ, ಕ್ಯಾಮೆರಾದಲ್ಲಿ ಹತ್ತಿರ ಬಂದು ಫೋಟೋ ತೆಗೆಯುತ್ತಿದ್ದರೂ ಮುಜುಗರ ಪಡದ ನವಿಲು ತರತರ ಭಂಗಿಯ ಪೋಸ್‌ ಕೊಟ್ಟು ಅವರನ್ನು ಖುಷಿಪಡಿಸಿತ್ತು.

ನಗರದ ಚಿಕ್ಕಪೇಟೆ ಸರ್ಕಲ್ ಸ್ವಲ್ಪಮಟ್ಟಿನ ಜನನಿಬಿಡ ಪ್ರದೇಶ. ನವಿಲು ಕೂಡ ನಗರವಾಸಿಯಂತೆ ಗಾಂಭೀರ್ಯದಲ್ಲೇ ಸಂಜೆಯ ವಿಹಾರ ಮಾಡಿದ್ದು ಸ್ಥಳೀಯರ ರೋಮಾಂಚನಕ್ಕೆ ಕಾರಣವಾಗಿತ್ತು. ಸಂಜೆಯ ವಿಹಾರದ ನಂತರ ಮನೆಗಳ ಮೇಲ್ಛಾವಣಿ ಹಾರುತ್ತಾ ಕತ್ತಲು ಆವರಿಸುವ ತನಕ ಚಿಕ್ಕಪೇಟೆಯ ಸುತ್ತಮುತ್ತಲೂ ಕಂಡಬಂದ ನವಿಲು ನಂತರ ಕಣ್ಮರೆಯಾಯಿತು.

ಇದ್ದಕ್ಕಿದ್ದಂತೆ ಪ್ರತ್ಯಕ್ಷ ವಾದ ನವಿಲಿನ ಓಡಾಟ ನೋಡಿ. ಇದು ಯಾರೋ ಸಾಕಿರುವ ನವಿಲು ಇರಬಹುದು ಎಂಬುದು ಕೆಲವರ ಉದ್ಗಾರವಾದರೆ.. ಇಲ್ಲ ಇಲ್ಲ ರಾಷ್ಟ್ರಪಕ್ಷಿಯನ್ನು ಹಾಗೆ ಸಾಕುವಂತಿಲ್ಲ ಎಂಬ ಚರ್ಚೆಗೂ ಕಾರಣವಾಗಿತ್ತು. ಒಟ್ಟಾರೆ ನವಿಲಿನ ರಾಜಗಾಂಭೀರ್ಯ ರಾಜಬೀದಿಯ ಸಂಜೆಯ ವಿಹಾರ ಗಮನ ಸೆಳೆದಿದ್ದು ಮಾತ್ರವಲ್ಲ, ಸೋಜಿಗಕ್ಕೂ ಕಾರಣವಾಗಿತ್ತು.

ಸಂಜೆ ವೇಳೆಗೆ ಚಿಕ್ಕಪೇಟೆ ಸರ್ಕಲ್ ವೇಳೆ ಪ್ರತ್ಯಕ್ಷವಾದ ನವಿಲು ಹಾಗೇ ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದೇ ಬರುತ್ತಿತ್ತು. ಜನರು ಕೂಡ ವಿಶೇಷವಾಗಿ ಗಮನಿಸುತ್ತಿದ್ದರು. ಹತ್ತಿರ ಹೋಗಿ ಫೋಟೋ ತೆಗೆಯುವಾಗಲೂ ಅಂಜದೇ ತಾನು ನಡೆದಿದ್ದೇ ದಾರಿ ಎಂಬಂತೆ ಸಾಗುತ್ತಿದ್ದ ನವಿಲುಸೋಜಿಗ ಉಂಟು ಮಾಡಿತ್ತು.
ನಾಗೇಂದ್ರ,
ಬೆನಕ ಫೋಟೋ ಸ್ಟುಡಿಯೋ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಣಿಬೆನ್ನೂರ: ಕೊಪ್ಪಳದ ದೇವರಾಜ ಅರಸ ಮೆಟ್ರಿಕ್‌ ಪೂರ್ವ ಹಾಸ್ಟೇಲ್ನಲ್ಲಿ ಐವರು ವಿದ್ಯಾರ್ಥಿಗಳು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದು, ಈ ಘಟನೆಗೆ ಕಾರಣರಾದವರ...

  • ಹಾವೇರಿ: ರಾಜ್ಯ ಬಿಜೆಪಿ ಸರ್ಕಾರ ಮೊದಲ ಮಂತ್ರಿಮಂಡಲದಲ್ಲಿ ಜಿಲ್ಲೆಯ ಶಾಸಕರೋರ್ವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಜಿಲ್ಲೆಯ ಬಹುದಿನಗಳ ಬೇಡಿಕೆಗಳು...

  • ಶಹಾಪುರ: ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷ ಆಗದಂತೆ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟದಿಂದ ಕೂಡಿರಬೇಕು. ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳಾಗಲಿ...

  • ಬಸವಕಲ್ಯಾಣ: ನಮ್ಮ ದೇಶದ ಪರಂಪರೆ ಉಳಿದಿರುವುದೇ ಭಜನೆ ಮತ್ತು ಕೀರ್ತನೆ ಹಾಡುವ ಕಲಾವಿದರಿಂದ. ಹಾಗಾಗೀ ಅಂಥಹ ಕಲಾವಿದರನ್ನು ಪ್ರೋತ್ಸಾಹಿಸಿ ಉಳಿಸಿಕೊಳ್ಳುವುದು...

  • ರೋಣ: ಪ್ರತಿಯೊಂದು ಸಭೆಯಲ್ಲಿ ನಡೆದಂತಹ ಸಭೆ ನಡಾವಳಿ ಮತ್ತು ಸದಸ್ಯರೆಲ್ಲ ಪ್ರಸ್ತಾಪಿಸಿದ ವಿಷಯ ಠರಾವಿನಲ್ಲಿ ಇರುವುದಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಿರಿ?...

ಹೊಸ ಸೇರ್ಪಡೆ