ಹಡಪದ ಸಮಾಜಕ್ಕೆ ನೀಡಿ ಸೂಕ್ತ ಸ್ಥಾನ

ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಹೋರಾಡಿದರೆ ಸಮಾಜ ಅಭಿವೃದ್ಧಿ

Team Udayavani, Aug 11, 2019, 10:33 AM IST

ಹುಮನಾಬಾದ: ಚಿಟಗುಪ್ಪ ಪಟ್ಟಣದಲ್ಲಿ ನಡೆದ ಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ರಾಜ್ಯ ಘಟಕ ಅಧ್ಯಕ್ಷ ಅಣ್ಣಾರಾವ್‌ ನರಿಬೋಳ್‌, ಕಾಳಪ್ಪ ಗೌಡ್ರು ಇನ್ನಿತರರು ಇದ್ದರು.

ಹುಮನಾಬಾದ: ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಡಪದ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಹಡಪದ ಅಪ್ಪಣ್ಣ ಸಮಾಜ ಸಂಘದ ರಾಜ್ಯ ಘಕದ ಅಧ್ಯಕ್ಷ ಅಣ್ಣಾರಾವ್‌ ನರಿಬೋಳ್‌ ಹೇಳಿದರು.

ಚಿಟಗುಪ್ಪ ಪಟ್ಟಣದಲ್ಲಿ ಹಡಪದ ಅಪ್ಪಣ್ಣ ಸಮಾಜ ಸಂಘದಿಂದ ಶನಿವಾರ ನಡೆದ ಶರಣ ಹಡಪದ ಅಪ್ಪಣ್ಣ 885ನೇ ಜಯಂತಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸಮಾಜದ ಪದಾಧಿಕಾರಿಗಳು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊಗಿತ್ತಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಸಲಹೆ ನೀಡಿದರು.

ಸಮಾಜದ ಹೈ.ಕ. ವಿಭಾಗೀಯ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮವರು ದಿನವಿಡೀ ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದಕ್ಕಾಗಿ ಖರ್ಚು ಮಾಡದೇ ಮದ್ಯ ಸೇವನೆಯಂಥ ದುಶ್ಚಟಕ್ಕೆ ವ್ಯಯಿಸಿ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ದುಶ್ಚಟದಿಂದ ಮುಕ್ತರಾಗದೇ ನಮ್ಮ ಸಮಾಜದಲ್ಲಿನ ಯಾರೊಬ್ಬರೂ ಉನ್ನತ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಹೈ.ಕ. ವಿಭಾಗೀಯ ಕಾರ್ಯದರ್ಶಿ ಶಿವಶಂಕರ ಸೇಡೋಳ್‌ ಮಾತನಾಡಿ, ಇಂಥದೊಂದು ಕಾರ್ಯಕ್ರಮಕ್ಕೆ ಸಾವಿರಾರು ಜನ ಸೇರಬೇಕು. ಅತ್ಯಲ್ಪ ಜನ ಬಂದಿರುವುದೇ ನಮ್ಮ ಸಂಘಟನೆಯ ಕೊರತೆಗೆ ನಿದರ್ಶನವಾಗಿದೆ. ಭವಿಷ್ಯದಲ್ಲಾದರೂ ನಮ್ಮ ಕಾರ್ಯಕ್ರಮಕ್ಕೆ ಕಾಯಕ ತೊರೆದು ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಪುರಸಭೆ ಸದಸ್ಯ ಕಾಳಪ್ಪ ಗೌಡ್ರು ಮಾತನಾಡಿ, ಮಹಾತ್ಮರ ಜಯಂತಿ ಆಚರಣೆ ನೆಪದಲ್ಲಿ ಮೆರವಣಿಗೆ ನಡೆಸಿ, ಭಾಷಣಗಳನ್ನು ಮಾಡಿದ ಮಾತ್ರಕ್ಕೆ ಸಮಾಜ ಅಭಿವೃದ್ಧಿಯಾಗದು. ನಿಮ್ಮಂತೆ ನಿಮ್ಮ ಮಕ್ಕಳು ಕಷ್ಟದಲ್ಲಿ ಬದುಕು ಕಳೆಯುವುದರಿಂದ ತಪ್ಪಿಸಬೇಕಾದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಅಯ್ಯಪ್ಪಸ್ವಾಮಿ ಪದವಿ ಕಾಲೇಜಿನ ಪ್ರಾಚಾರ್ಯ ಎನ್‌.ಎಸ್‌.ಮಲಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ಜಿಲ್ಲಾ ಹಡಪದ ಸಮಾಜ ಸಂಘದ ಅಧ್ಯಕ್ಷ ಪ್ರಭುರಾವ ತರನಳ್ಳಿ, ಶರಣಪ್ಪ ಚಂದನಹಳ್ಳಿ, ಶಿವಾಜಿರಾವ್‌ ಮಾನೆ, ಡಿಸಿಸಿಒ ಬ್ಯಾಂಕ್‌ ವ್ಯವಸ್ತಾಪಕ ರಾಜಕುಮಾರ ಇದ್ದರು.

ರಾಜಕುಮಾರ ಹಡಪದ ಪ್ರಾಸ್ತಾವಿಕ ಮಾತನಾಡಿದರು. ಚಿಟಗುಪ್ಪಾ ಹಡಪದ ಸಮಾಜದ ಅಧ್ಯಕ್ಷ ಶೀಧರ ಕಟ್ಟಿಮನಿ, ಉಪಾಧ್ಯಕ್ಷ ಸಂಜುಕುಮರ ಮಾನೆ, ಹಡಪದ ಅಪ್ಪಣ್ಣ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಭು ಮುದ್ನಾಳಕರ್‌, ರಾಜಕುಮಾರ ಮಾನೆ, ಮಲ್ಲಿಕಾರ್ಜುನ ಕಟ್ಟಿಮನಿ, ರಾಮಣ್ಣಾ ಹಡಪದ, ಸಿದ್ದು ಹಡಪದ, ಅಶೋಕ ಕುಮಾರ ಮಾನೆ, ಸಿಕ್ರೇಶ್ವರ‌ ಹಡಪದ, ದೀಪಕ ಹಡಪದ ಇದ್ದರು.

ಪ್ರೀತಿ, ಪಲ್ಲವಿ ಪ್ರಾರ್ಥಿಸಿದರು. ಪೂರ್ಣಾನಂದ ಹಡಪದ ಸ್ವಾಗತಿಸಿದರು. ಸ‌ಂಘದ ಕಾರ್ಯದರ್ಶಿ ರಾಜಕುಮಾರ ಹಡಪದ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಹಡಪದ ನಿರೂಪಿಸಿದರು. ಅನೀಲಕುಮಾರ ಹಡಪದ ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ