ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಲಿ

ಕಾಲ ಕಾಲಕ್ಕೆ ಕ್ರಿಯಾಯೋಜನೆ ರೂಪಿಸಿ: ಬಸವರಾಜ

Team Udayavani, Jun 15, 2019, 4:10 PM IST

15-June-30

ಹುಣಸಗಿ: ಕಾಮನಟಗಿ ಗ್ರಾಪಂ ಕಾರ್ಯಾಲಯ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗ್ರಾಮ ಘಟಕ ಪ್ರತಿಭಟಿಸಿತು.

ಹುಣಸಗಿ: ಗ್ರಾಮೀಣ ಪ್ರದೇಶದ ಜನರು ಮಹಾನಗರಗಳಿಗೆ ವಲಸಿ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದ್ದು, ಸಮರ್ಪಕ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಮುಖಂಡ ಬಸವರಾಜ ಕಟ್ಟಿಮನಿ ಒತ್ತಾಯಿಸಿದರು.

ಸಮೀಪದ ಕಾಮನಟಗಿ ಗ್ರಾಪಂ ಕಾರ್ಯಾಲಯ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗ್ರಾಮ ಘಟಕ ಹಮ್ಮಿಕೊಂಡ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮ ಮಟ್ಟದಲ್ಲಿ ಮಾನವ ಉದ್ಯೋಗ ಸೃಷ್ಟಿಸಿ ಬಡ ಕುಟುಂಬಗಳು ಗುಳೆ ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಭೀಮ ಬಲವಿದ್ದಂತೆ. ಆದ್ದರಿಂದ ಗ್ರಾಮ ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದರು.

ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿ ನಿರ್ವಹಿಸಲು ಸಹ ಅನುಕೂಲ ಕಲ್ಪಿಸಲಾಗಿದೆ. ಬದು ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ ಸೇರಿದಂತೆ ಹಲವಾರು ಕಾಮಗಾರಿ ಕೈಗೊಳ್ಳಬಹುದಾಗಿದೆ. ಪ್ರತಿಯೊಬ್ಬ ವಲಸೆ ಹೋಗುವರನ್ನು ತಡೆದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಂತರ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಅಧ್ಯಕ್ಷ ದಾವಲಸಾಬ ನಧಾಪ ಮಾತನಾಡಿ, ಪ್ರತಿಯೊಂದು ಪಂಚಾಯತಿಯಲ್ಲೂ ಕಾಲಕಾಲಕ್ಕೆ ಕ್ರಿಯಾಯೋಜನೆ ರೂಪಿಸಬೇಕು. ಮಾನವ ದಿನಗಳ ಸೃಷ್ಟಿಗೆ ನಿಗದಿಪಡಿಸಿರುವ ಗುರಿಯನ್ನು ತಪ್ಪದೇ ಮುಟ್ಟಬೇಕು. ಇದರಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಲಿವೆ. ತಕ್ಷಣವೇ ಫಾರಂ ನಂಬರ 6ನ್ನು ಸ್ವೀಕರಿಸಿ ಪ್ರತಿಯೊಬ್ಬರಿಗೂ ಕೂಡ ಕೆಲಸ ಕೊಡಬೇಕು ಮತ್ತು ಹೊಸದಾಗಿ ಜಾಬ್‌ ಕಾರ್ಡ್‌ ನೋಂದಣಿ ಮಾಡಿಸಿ ಅವರಿಗೂ ಕೂಡ ಕೆಲಸ ಕೊಡಬೇಕೆಂದು ಒತ್ತಾಯಿಸಿದರು.

ಕಾಮನಟಗಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶರಣಪ್ಪ ಅನಸೂರ, ಬಸವರಾಜ ಕಟ್ಟಿಮನಿ, ಸಂಘದ ಅಧ್ಯಕ್ಷೆ ಮಲ್ಲಮ್ಮ ಗಡದ, ಉಪಾಧ್ಯಕ್ಷೆ ಸಂಗಮ್ಮ ಪತ್ತಾರ, ಗಂಗಪ್ಪ ದೊಡ್ಡಮನಿ, ಹಣಮಂತ್ರಾಯ ದೊಡ್ಡಮನಿ, ಕನಕಪ್ಪ ಚಲುವಾದಿ, ಮಾಳಪ್ಪ ಮಾಳ್ಯಾರ, ಭೀಮರಾಯಗೌಡ ಕಲ್ಯಾಣಿ, ಬಾಲಪ್ಪ ತಳವಾರ, ಅಮರಪ್ಪ ಗಡದ, ನಿಂಗಣ್ಣ ಗಡದ, ಸಿದ್ದಪ್ಪ ಚಲುವಾದಿ, ಬೇಗಂ ಮಾಳನೂರ, ಜಗನಪ್ಪ ನಡಕೂರ ಹಾಗೂ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್

11,000 ಅಡಿ ಎತ್ತರದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಗಣರಾಜ್ಯ ಸಂಭ್ರಮ: ವಿಡಿಯೋ

11,000 ಅಡಿ ಎತ್ತರ, ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಯೋಧರ ಗಣರಾಜ್ಯ ಸಂಭ್ರಮ: ವಿಡಿಯೋ

Musical artist Sheela Divakar passes away

ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್

Musical artist Sheela Divakar passes away

ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

ಕೈಸೇರಿಲ್ಲ 3 ತಿಂಗಳ ದುಡಿಮೆ ಕಾಸು!

ಕೈಸೇರಿಲ್ಲ 3 ತಿಂಗಳ ದುಡಿಮೆ ಕಾಸು!

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್

11,000 ಅಡಿ ಎತ್ತರದಲ್ಲಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಗಣರಾಜ್ಯ ಸಂಭ್ರಮ: ವಿಡಿಯೋ

11,000 ಅಡಿ ಎತ್ತರ, ಮೈನಸ್ 20 ಡಿಗ್ರಿ ಸೆಲ್ಸಿಯಸ್ ನಲ್ಲಿ ಯೋಧರ ಗಣರಾಜ್ಯ ಸಂಭ್ರಮ: ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.