ನೀಲಕಂಠರಾಯನಗಡ್ಡಿಯಲ್ಲಿ ಮತ ಜಾಗೃತಿ

ಪ್ರವಾಹದ ಊರಿಗೆ ಮೊದಲ ಸಲ ಭೇಟಿ ನೀಡಿದ ಸಿಇಒ ಕವಿತಾ ಮನ್ನಿಕೇರಿ

Team Udayavani, Apr 13, 2019, 11:46 AM IST

13-April-9

ಹುಣಸಗಿ: ಮತದಾನ ಜಾಗೃತಿಗೆ ನೀಲಕಂಠರಾಯನಗಡ್ಡಿಗೆ ಅಧಿಕಾರಿಗಳೊಂದಿಗೆ ತೆರಳಿದ ಜಿಪಂ ಸಿಇಒ ಕವಿತಾ ಮನ್ನಿಕೇರಿ.

ಹುಣಸಗಿ: ಪ್ರತಿವರ್ಷ ಪ್ರವಾಹ ಎದುರಾಗಿ ಎಲ್ಲ ಕಡೆಗೂ ಸುದ್ದಿಯಾಗುವ ಕೃಷ್ಣಾನದಿ ದಂಡೆ ಆಚೆಗಿನ ನೀಲಕಂಠರಾಯನಗಡ್ಡಿ ಗ್ರಾಮ ಅದು. ದಶಕ ಕಳೆದರೂ ಇವರೆಗೂ ಮತದಾನ ಜಾಗೃತಿ ಆಗಿರಲಿಲ್ಲ. ಅಲ್ಲಿನ ಜನರಿಗೆ ಮತದಾನದ ಜಾಗೃತಿ ಮೂಡಿಸಲೇಬೇಕು ಎಂಬ ನಿರ್ಧಾರ ಮಾಡಿದ ಯಾದಗಿರಿ ಜಿಲ್ಲೆ ಸಿಇಒ ಹಾಗೂ ಚುನಾವಣಾ ಸ್ವೀಪ್‌ ಕಮಿಟಿ ಅಧ್ಯಕ್ಷೆ ಕವಿತಾ ಮನ್ನಿಕೇರಿ ಅವರು ಶುಕ್ರವಾರ ಸಂಜೆ ಗಡ್ಡಿಗೆ ಭೇಟಿ ನೀಡಿದರು.

ನೀಲಕಂಠರಾಯನಗಡ್ಡಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಕೃಷ್ಣಾನದಿ ದಾಟಿಕೊಂಡೇ ಹೋಗುವ ಅನಿವಾರ್ಯತೆ ಇದೆ. ಹೀಗಾಗಿ ಎಷ್ಟೋ ಚುನಾವಣೆಗಳು ಬಂದರೂ ಗ್ರಾಮಸ್ಥರಿಗೆ ಯಾವುದೇ ಜಾಗೃತಿ ಕಾರ್ಯಕ್ರಮ ನಡೆಸಿ ಪ್ರಜ್ಞೆ ಮೂಡಿಸಿರಲಿಲ್ಲ. ಈ ಬಾರಿ ಲೋಕಸಭಾ ಚುನಾವಣಾ ಉದ್ದೇಶ ಹಾಗೂ ಮತದಾನದ ಶೇಕಡಾವಾರು ಫಲಿತಾಂಶ ಹೆಚ್ಚಿಸುವ ಸಲುವಾಗಿ
ನೀಲಕಂಠರಾಯನಗಡ್ಡಿಗೆ ಕಲಾ ತಂಡದೊಂದಿಗೆ ಸ್ವೀಪ್‌ ಕಮಿಟಿ ಅಧ್ಯಕ್ಷೆ ಕವಿತಾ ಮನ್ನಿಕೇರಿ ತೆರಳಿ ಜಾಗೃತಿ ಮೂಡಿಸಿದರು.

ಶುಕ್ರವಾರ ಸಂಜೆ 7:00ಗಂಟೆ ಆಗುತ್ತಲೇ ಕೃಷ್ಣಾನದಿ ದಂಡೆಯಲ್ಲಿ ಇಳಿದ ಅವರು ಕಲ್ಲು ಬಂಡೆ ಮೆಟ್ಟಿದ ಅನುಭವದೊಂದಿಗೆ ಅರ್ಧ ಕಿಮೀ ನಡೆದುಕೊಂಡು ಗಡ್ಡಿ ತಲುಪಿ ಸಾಹಸ ಮೆರೆದರು. ಗಡ್ಡಿಯೊಳಗೆ ಬರುತ್ತಿದ್ದಂತೆ
ಗ್ರಾಮಸ್ಥರು ಬರುವಿಕೆಗಾಗಿ ಕಾಯುತ್ತಿದ್ದರು. ಅಲ್ಲಿನ ಜನರ ವೇಷ ಮತ್ತು ಮನೆಗಳ ನೋಡಿ ಆಶ್ಚರ್ಯವಾದರು. ಹಾಗೇ ಜಾಗೃತಿ ವೇಳೆ ಹಿರಿಯ ಮತದಾರರಿಗೆ ಸನ್ಮಾನ ಮಾಡಿ ಮಾನವೀಯತೆ ಮೆರೆದ ಅವರು ಅವರೊಂದಿಗೆ ಕುಳಿತು ಮತದಾನದ ಜಾಗೃತಿ ಕಾರ್ಯಕ್ರಮ ವೀಕ್ಷಿಸಿದರು. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎನಿಸುವಂತಿತ್ತು.

ಜಾಗೃತಿ ಮೂಡಿಸಿದ ನಂತರ ರಾತ್ರಿ 8:00ಕ್ಕೆ ಮರಳಿ ಯಾದಗಿರಿಯತ್ತ ಪ್ರಯಾಣಿಸಲು ಕಲ್ಲು ಮುಳ್ಳು ತಾಗಿಸಿಕೊಂಡು ಒಂದೊಂದು ಹೆಜ್ಜೆ ಮೆಲ್ಲಗೆ ಇಡುತ್ತ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ನಡೆದು ಬಂದರು.

ಹೊಸ ಅನುಭವ: ನೀಲಕಂಠರಾಯನಗಡ್ಡಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಕರ್ತವ್ಯ ಏನೂ ಮಾಡುವಂತಿಲ್ಲ. ಚುನಾವಣೆ ಬೇರೆ. ಹೀಗಾಗಿ ಮತದಾನದ ಜಾಗೃತಿ ಮೂಡಿಸುವುದು ಅಗತ್ಯವಾಗಿತ್ತು. ಸಂಚಾರ ಸಮಸ್ಯೆ ನಡೆವೆಯೇ ಕಲ್ಲು, ಮುಳ್ಳಿನ ದಾರಿಯಲ್ಲಿ ನಡೆದ ಹೊಸ ಅನುಭವ ನನ್ನಗಾಗಿದೆ ಎಂದು ಕವಿತಾ ಮನ್ನಿಕೇರಿ ಅವರು ಉದಯವಾಣಿಗೆ ಜತೆಗೆ ಅನಿಸಿಕೆ ಹಂಚಿಕೊಂಡರು.

ನೀರಿಗಾಗಿ ಅಳಲು ತೋಡಿಕೊಂಡ ಜನರು: ನಮಗೆ ಕುಡಿಯಲು ನೀರಿನ ಸಮಸ್ಯೆ ಇದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಲ್ಲಿನ ಜನರು ಅಳಲು ತೋಡಿಕೊಂಡರು. ಪ್ರತಿಜ್ಞಾನವಿಧಿ ಬೋಧನೆ: 40 ಕುಟುಂಬ ಇರುವ ಇಲ್ಲಿ 132 ಮತಗಳು ಇವೆ. ಹೀಗಾಗಿ ಎಲ್ಲ ಮತಗಳು ಚಲಾವಣೆ ಆಗಲೇಬೇಕು ಎಂಬ ನಿರ್ಧಾರದೊಂದಿಗೆ ಹಿರಿಯ ಮತದಾರರು ಸೇರಿದಂತೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ಗುಳೆ ಹೋದ ಎಲ್ಲರನ್ನು ಮರಳಿ ಕರಿಸಿ ಮತದಾನ ಮಾಡಬೇಕು. ವೃದ್ಧರಿಗೆ, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮತದಾನ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಟ್ಟರು.

ಬಾಲಪ್ಪ ಎಂ. ಕುಪ್ಪಿ

ಟಾಪ್ ನ್ಯೂಸ್

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಸೂಚನೆ

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಮೋದಿ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ದ್ಗತಜಹಗ್ದ

ಬೆಂಕಿ ಅವಘಢ: 3 ಎಕರೆ ಅಡಕೆ ತೋಟ ನಾಶ

ದ್ಡರಹಜಜಹಗ್ದಸಅ

ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರು ಕನಸು

ಚವಬಗಜಹಗಗ

ಕಲಾ ಮಾಧ್ಯಮದ ಹಿಂದಿದೆ ಸಮಾಜ ಜಾಗೃತಿಯ ಆಶಯ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.