ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕೈಜೋಡಿಸಿ

ಉತ್ತಂಗಿ ಗ್ರಾಮಕ್ಕೆ ಡಿಎಚ್‌ಒ ಭೇಟಿ ನೀಡಿ ಪರಿಶೀಲನೆ

Team Udayavani, Apr 6, 2019, 4:39 PM IST

ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲೂಕು ಉತ್ತಂಗಿ ಗ್ರಾಮದಲ್ಲಿ ಜ್ವರ ಪೀಡಿತರ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ್‌ ಹೆಡೆ ಭೇಟಿ ನೀಡಿ ಚರ್ಚಿಸಿದರು.

ಬಳ್ಳಾರಿ: ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯುವ ಮೂಲಕ ಸಮುದಾಯದಲ್ಲಿ ಹರಡುವ ಎಚ್‌1ಎನ್‌1,
ಕ್ಷಯರೋಗ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ್‌ ಹೆಡೆ ಹೇಳಿದರು.

ಜಿಲ್ಲೆಯ ಹೂವಿನಹಡಗಲಿ ತಾಲೂಕು ಉತ್ತಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮದಲ್ಲಿ ಜ್ವರ ಪೀಡಿತರ ಮನೆಗೆ ಖುದ್ದು ಭೇಟಿ ನೀಡಿ ರೋಗಿಯೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.

ಮನುಷ್ಯನ ಮಾಡುವ ಕೆಲವೊಂದು ತಪ್ಪುಗಳಿಂದ ಸಾಂಕ್ರಾಮಿಕ ರೋಗಗಳು ಬೇಗ ಹರಡುತ್ತವೆ. ಅದರ ಮಾರಕದಿಂದ ಎಚ್‌1
ಎನ್‌1ನಂತಹ ರೋಗಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು ಎಂದ ಅವರು, ವೈದ್ಯರ ಸಲಹೆ ಇಲ್ಲದೇ ಔಷಧಗಳನ್ನು ಸೇವಿಸಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ
ಮುಚ್ಚಿಕೊಳ್ಳದೇ ಕೆಮ್ಮುವುದು ಅಥವಾ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಾಗ ಕೈಯಿಂದ ಮುಟ್ಟಬಾರದು. ಹೀಗೆ ಮಾಡಿದರೆ ರೋಗವನ್ನು ತಡೆಯಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಕೆ.ಚಂದ್ರಶೇಖರ್‌, ಡಾ| ವಿನೋದ್‌, ಡಾ| ಚಂದ್ರಶೇಖರ ನಾಯ್ಕ,
ಎಂಎಲ್‌ಎಚ್‌ಪಿ ಹರ್ಷಿತಾ, ಮಂಜುಶ್ರೀ ನಾಯ್ಕ, ಎಚ್‌.ಸಿ.ತನುಮಣಿ, ಕಿರಿಯ ಆರೋಗ್ಯ ಸಹಾಯಕರಾದ ಅಶ್ವಿ‌ನಿ.ಎ, ಕಲ್ಪನಾ, ರೂಪಿಣಿ, ಎಂ.ಜಿ. ಬಂಡಾರಿ, ಕಾರ್ತಿಕ, ಸುಭಾಷ್‌, ಗಿರಿಜಮ್ಮ, ಮಂಜುಳಾ ಹಾಗೂ ಆಶಾ ಕಾರ್ಯಕರ್ತೆಯರು
ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ಒಂದೂವರೆ ವರ್ಷದೊಳಗೆ ಗ್ರಾಮಾಂತರ ಕ್ಷೇತ್ರಕ್ಕೆ 300 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೆ ಸಾಕಷ್ಟು ಅನುದಾನ...

  • ಮಧುಗಿರಿ: ರಾಮಾಯಣದಲ್ಲಿ ನಿಷ್ಠೆ ಹಾಗೂ ನಂಬಿಕೆಗೆ ಅರ್ಹವಾಗಿದ್ದ ಏಕೈಕ ದೇವರು ಹನುಮಂತ. ಇಂದು ಅಂತಹ ನಿಷ್ಠೆ ಯುವ ಜನತೆ ಹೊಂದಬೇಕಿದೆ ಎಂದು ಕಸಾಪ ಅಧ್ಯಕ್ಷ ಚಿ.ಸೂ....

  • ಕನಕಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಹನುಮ ಜಯಂತಿ ಅಂಗವಾಗಿ ನಗರದ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ ಏರ್ಪಡಿಸಿ ಅದ್ಧೂರಿಯಾಗಿ ಹನುಮ ಜಯಂತಿ...

  • ಟೇಕಲ್‌: ಕಳೆದ ವಾರ 60 ರಿಂದ 80 ರೂ. ಇದ್ದ ಈರುಳ್ಳಿ ಬೆಲೆ ಈಗ 1 ಕೆ.ಜಿ. 90 ರೂ.ರಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದು, ಗ್ರಾಮೀಣ ಜನರು ತತ್ತರಿಸಿದ್ದಾರೆ. ಈರುಳ್ಳಿ ಬೆಲೆ...

  • ಮುಳಬಾಗಿಲು: ನಗರಸಭೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಸಂಬಂಧ ಈಗಾಗಲೇ ತಾಲೂಕು ಆಡಳಿತ 5 ಕಿ.ಮೀ. ವ್ಯಾಪ್ತಿಯನ್ನು ನಿರ್ಧರಿಸಿದೆ. ಆದರೆ, ನಿಗದಿ ಮಾಡಿರುವ ವ್ಯಾಪ್ತಿಗೆ...

ಹೊಸ ಸೇರ್ಪಡೆ