ಒಬ್ಬರನ್ನೊಬ್ಬರು ಅರಿತು ಬಾಳಿರಿ: ಹಿರಿಶಾಂತವೀರ ಶ್ರೀ

Team Udayavani, Apr 21, 2019, 5:08 PM IST

ಹೂವಿನಹಡಗಲಿ: ಶ್ರೀರಾಮದೇವರ ಜಾತ್ರೆ ಪ್ರಯುಕ್ತ ಸಾಮೂಹಿಕ ವಿವಾಹ ನೆರವೇರಿತು.

ಹೂವಿನಹಡಗಲಿ: ಪಟ್ಟಣದಲ್ಲಿ ಶ್ರೀರಾಮ ದೇವರ ಜಾತ್ರೆ ಪ್ರಯುಕ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಮದುವೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಸರ್ವರ ಮನಸ್ಸು ಗೆದ್ದು ಪರಂಪರೆ
ಉಳಿಸಿ, ಬೆಳೆಸಿಕೊಂಡು ಬಂದ ಗೌರವ ರಾಮಸ್ವಾಮಿ
ವೆಂಕಟೇಶಯ್ಯನವರಿಗೆ ಸಲ್ಲುತ್ತದೆ ಎಂದರು.

ಅವರ ಮಾರ್ಗದರ್ಶನ ಪಡೆದು ದೇವಸ್ಥಾನದ ನೂತನ ಧರ್ಮಕರ್ತ ಡಾ.ರಾಮಸ್ವಾಮಿ ರಾಕೇಶಯ್ಯ ಎಲ್ಲರ ಸಹಕಾರದಿಂದ ಅಭಿವೃದ್ಧಿ ಪಥದತ್ತ ನಡೆಸಿಕೊಂಡು ಹೋಗಲಿ ಎಂದರು. ವೆಂಕಟೇಶಯ್ಯನವರ ಧಾರ್ಮಿಕ ಕಳಕಳಿ ಅನನ್ಯ ಎಂದರು. ಆರೋಗ್ಯವಾಗಿ ಬಂದು ರಾಕೇಶಯ್ಯನವರರಿಗೆ ಹೆಚ್ಚಿನ ಮಾರ್ಗದರ್ಶನ
ನೀಡಲಿ ಎಂದು ಹೇಳಿದರು.

ಹಿರೇಮಲ್ಲನಕೆರೆ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಠ-ಮಂದಿರಗಳಲ್ಲಿ
ಜರುಗಿದ ಸಾಮೂಹಿಕ ಮದುವೆಯಲ್ಲಿ ಹಸೆಮಣೆ
ಏರಿದ ನೂತನ ದಂಪತಿ ಒಬ್ಬರನೊಬ್ಬರು ಅರಿತು
ಬಾಳಬೇಕು ಎಂದು ಹೇಳಿದರು. ಹಡಗಲಿ
ತಾಲೂಕಿನಲ್ಲಿ ರಾಮಸ್ವಾಮಿ ವೆಂಕಟೇಶಯ್ಯನವರ
ಸಮಾಜ ಸೇವೆ ಶ್ಲಾಘನೀಯ ಎಂದರು.
ದೇವಸ್ಥಾನ ಧರ್ಮಕರ್ತ ಡಾ.ರಾಮಸ್ವಾಮಿ
ರಾಕೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ.
ಚನ್ನಬಸಯ್ಯ, ಸಿ.ಕೆ.ಎಂ.ಬಸವಲಿಂಗಯ್ಯ, ಸೊನ್ನದ
ಕೊಟ್ರಯ್ಯ ಒಡೆಯರ ಸಾಮೂಹಿಕ ಮದುವೆಯ
ಪೌರೋಹಿತ್ಯ ವಹಿಸಿದ್ದರು.

ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಸ್‌. ಗೋಣೆಪ್ಪ, ಗುರುವಿನ ಕೊಟ್ರಯ್ಯ, ಗಡಿಗಿ ಮಲ್ಲಿಕಪ್ಪ, ಸಿಯು.ಎಂ.ಕೊಟ್ರಯ್ಯ, ಎಸ್‌.ತಿಮ್ಮಣ್ಣ, ಗಡಿಗಿ ವೀರಣ್ಣ, ಟಿ. ರಾಮಮೂರ್ತಿ, ಗಡಿಗಿ ಕೃಷ್ಣ, ಟಿ.ಸೋಮಪ್ಪ, ಸೊಪ್ಪಿನ ಮಲ್ಲಿಕಾರ್ಜುನ, ಸೊಪ್ಪಿನ ನಾಗಭೂಷಣ, ಪಿ.ಮಲ್ಲಿಕಾರ್ಜುನ, ಈಟಿ ಹನುಮೇಶ್‌, ಜೆ.ಶಿವರಾಜ, ಟಿ.ಮಹಾಂತೇಶ್‌,
ಆರ್‌.ಚೈತನ್ಯ, ಆರ್‌.ಫಕ್ಕೀರಪ್ಪ, ಟಿ.ಕೃಷ್ಣಮೂರ್ತಿ,
ಗುರುವಿನ ರಾಜು, ಟಿ.ಬಾಲರಾಜ್‌, ದಾಸರ
ರಾಮಣ್ಣ, ಮುಂತಾದವರು ಹಾಜರಿದ್ದರು.
ಉಪನ್ಯಾಸಕ ಎಚ್‌.ಎಂ.ಗುರುಬಸವರಾಜಯ್ಯ
ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಕೆಜಿಎಫ್: ಹಲವು ವರ್ಷಗಳಿಂದ ರಸ್ತೆ ಅಗಲೀಕರಣವಾಗಬೇಕಾಗಿದ್ದ ಅಶೋಕ ನಗರ ರಸ್ತೆಗೆ ಮತ್ತೆ ಕಂಟಕ ಶುರುವಾಗಿದೆ. ಸ್ಕೂಲ್ ಆಫ್ ಮೈನ್ಸ್‌ನಿಂದ ಎಂ.ಜಿ.ವೃತ್ತದವರೆಗೂ...

  • ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಗುಡುಗು ಸಹಿತ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಜಿಲ್ಲೆಯ...

  • ಪಾಲಬಾವಿ: ರಾಯಬಾಗ ತಾಲೂಕಿನ ಪೂರ್ವಭಾಗದ ಕಡೆಯ ಗ್ರಾಮಗಳು ಸರಕಾರದ ಹಲವಾರು ಯೋಜನೆಗಳಿಂದ ವಂಚಿತವಾಗಿದ್ದು, ಇದೀಗ ಹದಗೆಟ್ಟ ರಸ್ತೆಯಿಂದ ಮನೆ ಮಾತಾಗಿವೆ. ಸುಲ್ತಾನಪುರ...

  • ಬಂಗಾರಪೇಟೆ: ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಬಂಗಾರಪೇಟೆ ಪುರಸಭೆ ಚುನಾವಣೆಯಲ್ಲಿ ಪೈಪೋಟಿ ಜೋರಾಗಿದೆ. ಮೀಸಲಾತಿಯಿಂದ ಕ್ಷೇತ್ರ ಕಳೆದುಕೊಂಡಿದ್ದ ಕೆಲ ಪ್ರಭಾವಿಗಳಿಗೆ...

  • ಕೆಂಭಾವಿ: ಬೇಸಿಗೆ ಅವಧಿಯಲ್ಲಿ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಕೆಂಭಾವಿ...

ಹೊಸ ಸೇರ್ಪಡೆ