ಸಿಂಗಟಾಲೂರು ಬ್ಯಾರೇಜ್‌ ಭರ್ತಿಗೆ ಹರ್ಷ

3.12 ಟಿಎಂಸಿ ನೀರು ಸಂಗ್ರಹ

Team Udayavani, Jul 12, 2019, 3:13 PM IST

ಹೂವಿನಹಡಗಲಿ: ಭಾಗಶಃ ತುಂಬಿರುವ ತಾಲೂಕಿನ ರಾಜವಾಳ ಡ್ಯಾಂ.

ಹೂವಿನಹಡಗಲಿ: ಕಳೆದ ಒಂದು ವಾರದಿಂದಲೂ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು ತುಂಗಭದ್ರಾ ನದಿಯ ಒಳ ಹರಿವು ಹೆಚ್ಚುತ್ತಿದ್ದು ರಾಜವಾಳ ಡ್ಯಾಂ ಭರ್ತಿಯಾಗಿದೆ. ಇದರಿಂದಾಗಿ ಡ್ಯಾಂನ ಎಡ ಹಾಗೂ ಬಲ ಭಾಗದ ರೈತರಲ್ಲಿ ಹರ್ಷ ತಂದಿದೆ.

ಇತ್ತ ತಾಲೂಕಿನ ಜೀವನಾಡಿಯಾಗಿರುವ ಸಿಂಗಟಾಲೂರು ಬ್ಯಾರೇಜ್‌ ಮೇಲ್ಭಾಗದಲ್ಲಿ ಮಲೆನಾಡಿನಲ್ಲಿ ಸುರಿದ ಮಳೆಯಿಂದಾಗಿ ತುಂಗಭದ್ರಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ರೈತರಿಗೆ ಜೀವ ಕಳೆ ತಂದಂತಾಗಿದೆ.

ಪ್ರಸ್ತುತ ಸಿಂಗಟಾಲೂರು ಬ್ಯಾರೇಜ್‌ ಸುಮಾರು 509 ಎಫ್‌ಆರ್‌ಎಲ್, ಸುಮಾರು 3.12 ಟಿಎಂಸಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಬ್ಯಾರೇಜ್‌ ನಿರ್ಮಾಣದಲ್ಲಿ ಹಿನ್ನೀರಿನಿಂದ ಮುಳುಗಡೆಯಾಗಲಿರುವ ಗ್ರಾಮಗಳು ಇನ್ನು ಸ್ಥಳಾಂತರವಾಗದ ಹಿನ್ನ್ನೆಲೆಯಲ್ಲಿ 506.8 ಎಫ್‌ಆರ್‌ಎಲ್(1.90) ಪ್ರಮಾಣದಲ್ಲಿ ನೀರು ನಿಲ್ಲಿಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಐಗೋಳ್‌ ಪ್ರಕಾಶ್‌ ತಿಳಿಸಿದ್ದಾರೆ. ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲು ಈಗಾಗಲೇ ರಾಜವಾಳ ಮುಖ್ಯ ಕಾಲುವೆಗೆ ನೀರು ಹರಿಸಿದ್ದೇವೆ. ದೇವಗೊಂಡನಹಳ್ಳಿ ಮುದೇನೂರು ಗ್ರಾಮಗಳಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದ್ದು, ಹಿರೇಮಲ್ಲನಕೇರಿ ಗ್ರಾಮಕ್ಕೆ ಇನ್ನೂ 4-5 ದಿನಗಳಲ್ಲಿ ನೀರು ಹರಿಸಲಾಗುವುದು ಎಂದರು.

ಇನ್ನು ಶಾಕಾರಾ ಚಾಕೋಲ್ನಿಂದಾಗಿ ದಾಸನಹಳ್ಳಿ, ಹ್ಯಾರಡ, ಮಲಿಯಮ್ಮನಕೆರೆಗೆ ನೀರು ಹರಿಸಲಾಗುತ್ತಿದ್ದು ತಾಲೂಕಿನ ಮಾಗಳ ಜಾಕೋಲ್ ಮೂಲಕ ಹಿರೇಹಡಗಲಿ, ಹಗರನೂರು, ಎಂ.ಎಂ. ವಾಡ, ಕೊಮಾರ್ನಹಳ್ಳಿ ತಾಂಡ, ತಳಕರ್ಲ ಬನ್ನಿಕಲ್ ಕೆರೆಗಳಿಗೆ ನಾಗತಿ ಬಸಾಪುರ, ಕೆರೆಗಳಿಗೆ ನೀರು ಬಿಡಲಾಗಿದೆ. ಇದರಿಂದಾಗಿ ಈ ಭಾಗದ ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಾರಂಭದಲ್ಲಿ ತಾಲೂಕಿನಲ್ಲಿ ಮುಂಗಾರು ಸಂಪೂರ್ಣವಾಗಿ ವಿಫಲವಾಗುವ ವಾತಾವರಣ ನಿರ್ಮಾಣವಾಗಿತ್ತು. ಜೂನ್‌ ತಿಂಗಳು ಮುಗಿಯುತ್ತ ಬಂದಿದ್ದರೂ ತಾಲೂಕಿನಲ್ಲಿ ಬಿತ್ತನೆ ಪ್ರಾಮಾಣ ತುಂಬ ಕಡಿಮೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ತಾಲೂಕು ಭೀಕರ ಬರಗಾಲ ಎದುರಿಸುವ ಹಂತ ತಲುಪಿತ್ತು. ಆದರೆ ಅದೃಷ್ಟವಶಾತ್‌ ಜುಲೈ ಪ್ರಾರಂಭದಲ್ಲಿ ದೊಡ್ಡ ಪ್ರಮಾಣದ ಮಳೆಯಾಗದಿದ್ದರೂ ಸುರಿದ ಸರಾಸರಿ ಮಳೆಯಿಂದಾಗಿ ರೈತರು ಸುಮಾರು 30-40ರಷ್ಟು ಬಿತ್ತನೆ ಕೈಗೊಂಡಿದ್ದಾರೆ. ಇನ್ನೂ ಹೆಚ್ಚಿನ ಬಿತ್ತನೆ ತಾಲೂಕಿನಲ್ಲಿ ಕಂಡುಬಂದಿದ್ದು ರೈತರು ನಿರಾಳರಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...