ಮಕ್ಕಳಿಲ್ಲದೆ ಶಾಲೆಗಳು ಬಣ ಬಣ

ಬಿಸಿಲಿನ ತಾಪಕ್ಕೆ ಹೆದರಿ ಶಾಲೆಯತ್ತ ಮುಖ ಮಾಡದ ಮಕ್ಕಳು

Team Udayavani, Jun 5, 2019, 10:35 AM IST

ಹೂವಿನಹಿಪ್ಪರಗಿ: ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ನಡೆದರೂ ಹೂವಿನಹಿಪ್ಪರಗಿ ಹೋಬಳಿ ಶಾಲೆಗಳಲ್ಲಿ ಬಿಸಲಿಗೆ ಹೆದರಿ ಮಕ್ಕಳು ಶಾಲೆಗೆ ಬರದೇ ಶಾಲೆಗಳು ಭಣ ಭಣ ಎನ್ನುವಂತಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಬಿಸಲಿನ ಪ್ರಮಾಣ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಸುಮಾರು 42ರಿಂದ 43 ಡಿಗ್ರಿ ಉಷ್ಣತೆ ಇರುವುದರಿಂದ ಶಾಲಾ ಮಕ್ಕಳು ಬಿಸಿಲಿನಿಂದ ಬಸವಳಿಯುವ ಸಾಧ್ಯತೆ ಹೆಚ್ಚಾಗಿದೆ. ಮಕ್ಕಳು ಶಾಲೆಗೆ ಹೊಗುತ್ತೇನೆ ಎಂದು ಹೇಳಿದರು ಪಾಲಕರು ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯ ಮೇಲೂ ದುಷ್ಟಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಬೇಸಿಗೆ ರಜೆ ಅವಧಿಯನ್ನು ಇನ್ನೂ ಸ್ವಲ್ಪ ದಿನ ವಿಸ್ತರಿಸಬೇಕು. ಈಗಾಗಲೇ ಪಕ್ಕದ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ರಜೆಯನ್ನು ಮುಂದೂಡಿ ಮಕ್ಕಳ ಆರೋಗ್ಯದ ಕಡೆಗೆ ಗಮನ ನೀಡಿವೆ. ಅದೆ ಕ್ರಮ ಅನುಸರಿಸಿ ಜಿಲ್ಲೆಯ ಪ್ರಾಥಮಿಕ ಶಾಲಾ ರಜಾ ಅವಧಿಯನ್ನು ಮುಂದೂಡಿಬೇಕು. ಸ್ವಲ್ಪ ಮಟ್ಟಿಗೆ ಮಳೆರಾಯ ಬರುವವರೆಗೆ ಅಥವಾ ಬಿಸಿಲಿನ ತಾಪಮಾನ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವರೆಗೆ ರಜೆಯನ್ನು ಮುಂದುವರಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ಈಗ ಬಿಸಿಲು ಹೆಚಗಚಿದೆ. ಇಂತಹ ಬಿಸಿಲಿನಲ್ಲಿ ಮಕ್ಕಳು ಹೊರಗಡೆ ಬಂದರೆ ಮಕ್ಕಳಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಆಶಕ್ತ ಕೂಡಾ ಆಗುತ್ತಾರೆ. ಆದಷ್ಟು ಮಕ್ಕಳು ನೆರಳಿನಲ್ಲಿ ಇರುವಂತ ವ್ಯವಸ್ಥೆಯಾಗಬೇಕು.
ಮಹೇಶ ನಾಗರಬೆಟ್ಟ,
ಬಸವನಬಾಗೇವಾಡಿ ತಾಲೂಕು ಆರೋಗ್ಯಾಧಿಕಾರಿ

ಈಗ ಬಿಸಲಿನ ತಾಪಮಾನ 42 ಡಿ.ಸೆ.ನಿಂದ 43 ಡಿ.ಸೆ.ಗಿಂತ ಹೆಚ್ಚಾಗಿದೆ. ಪಕ್ಕದ ಜಿಲ್ಲೆಗಳಲ್ಲಿ ಈಗಾಗಲೇ ಬೆಸಿಗೆ ರಜೆ ವಿಸ್ತರಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯ ಮಕ್ಕಳ ಹಿತ ದೃಷ್ಟಿಯಿಂದ ಬೇಸಿಗೆ ರಜೆ ಮುಂದುವರಿಸಬೇಕು. ಈ ಕುರಿತು ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಸಲಾಗಿದೆ.
ಎ.ಎಂ. ಹಳ್ಳೂರ,
ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ, ಬಸವನಬಾಗೇವಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ