ಪಾರ್ಕ್‌ ಇದ್ದೂ ಏನು ಪ್ರಯೋಜನ? ಅಂತಾರೆ ಜನ

Team Udayavani, Jun 17, 2019, 2:52 PM IST

ಜಗಳೂರು: ಪಟ್ಣಣದ ಗಂಗಾಂಬಿಕಾ ಬಡಾವಣೆಯ ಪಾರ್ಕ್‌ ಮರಗಿಡಗಳಿಲ್ಲದೇ ಬಿಕೋ ಎನ್ನುತ್ತಿದೆ.

ಜಗಳೂರು: ಪಟ್ಟಣದ ಗಂಗಾಂಬಿಕಾ ಬಡಾವಣೆಯ ಪಾರ್ಕ್‌ ಸೂಕ್ತ ನಿರ್ವಹಣೆ ಇಲ್ಲದೆ ಸಾರ್ವಜನಿಕರ ಉಪಯೋಗಕ್ಕೆ ಬಾರದಂತ ದುಸ್ಥಿತಿ ತಲುಪಿದೆ.

ಪಟ್ಟಣದ ವಿದ್ಯಾ ನಗರದಲ್ಲಿರುವ ಪಾರ್ಕ್‌ ಬಿಟ್ಟರೆ ಇರುವುದಿದೊಂದೇ ಪಾರ್ಕ್‌. ಇದೂ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಲಕ್ಷಗಟ್ಟಲೇ ವೆಚ್ಚಮಾಡಿದ ಪಾರ್ಕ್‌ಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಇದ್ದರೆ ನಿರ್ಮಿಸಿ ಏನು ಪ್ರಯೋಜನ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಪಟ್ಟಣ ಪಂಚಾಯಿತಿ ವತಿಯಿಂದ ಕಳೆದ ಎರಡು ವರ್ಷಗಳ ಹಿಂದೆ 37 ಲಕ್ಷ ರೂ. ವೆಚ್ಚದಲ್ಲಿ ಗಂಗಾಂಬಿಕಾ ಬಡಾವಣೆಯಲ್ಲಿ ಪಾರ್ಕ್‌ ನಿರ್ಮಿಸಲಾಯಿತು.

ಈ ಉದ್ಯಾನವನದ ರಕ್ಷಾ ಗೋಡೆ ಹೊರತುಪಡಿಸಿ ನೆರಳಿಗೆ ಒಂದು ಗಿಡ ಮರ ಕೂಡ ಇಲ್ಲ. ಇರುವ ಗಿಡ, ಸಸ್ಯಗಳು ನೀರು, ನಿರ್ವಹಣೆ ಇಲ್ಲದೇ ಬಿಸಿಲಿನ ತಾಪಕ್ಕೆ ಸಂಪೂರ್ಣವಾಗಿ ಒಣಗಿ ಹೋಗಿವೆ.

10 ಲಕ್ಷ ರೂ. ವೆಚ್ಚದಲ್ಲಿ ಹಸು ,ಆನೆ, ನವಿಲು ಮೊದಲಾದ ಕಲಾಕೃತಿಗಳನ್ನು ಕಲೆ ಮತ್ತು ಶಿಲ್ಪ ನಿಗಮದ ವತಿಯಿಂದ ನಿರ್ಮಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು. ಕಲಾಕೃತಿಗಳಿಗೆ ಸೂಕ್ತ ಭದ್ರತೆ ಇಲ್ಲದೆ ಇಲ್ಲಿ ಬರುವ ಮಕ್ಕಳು ಅವುಗಳನ್ನು ಮುಟ್ಟಿ ವಿರೂಪಗೊಳಿಸಿದ್ದಾರೆ.

ಇಲ್ಲಗಳೇ ಬಹಳ: ಉದ್ಯಾನವನಲ್ಲಿ ಬೋರ್‌ವೆಲ್ ಇದ್ದರೂ ನಿರ್ವಹಣೆ ಇಲ್ಲದೇ ದುರಸ್ತಿಗೆ ಬಂದಿದೆ. ಹೀಗಾಗಿ ಗಿಡ, ಮರಗಳು, ವಿವಿಧ ಅಲಂಕಾರಿಕ ಸಸ್ಯಗಳು ನೀರಿಲ್ಲೇ ಒಣಗಿವೆ.

ಉದ್ಯಾನವನಕ್ಕೆ ಬರುವ ವಿಹಾರಿಗಳಿಗೆ ಕುಳಿತುಕೊಳ್ಳಲು ಒಂದೂ ಆಸನದ ವ್ಯವಸ್ಥೆ ಇಲ್ಲ. ಹೀಗಾಗಿ ಜನ ಇತ್ತ ಸುಳಿಯುವುದೇ ಇಲ್ಲ. ಕುಡಿಯಲು ನೀರು, ಶೌಚಾಲಯದ ವ್ಯವಸ್ಥೆ ಇಲ್ಲ. 37 ಲಕ್ಷ ರೂ ವೆಚ್ಚದ ಈ ಉದ್ಯಾನವನ ಹೆಸರಿಗೆ ಮಾತ್ರ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಪವನ್‌.

ಉದ್ಯಾನವನ ನಿರ್ಮಾಣವಾಗಿ ಸುಮಾರು 3 ವರ್ಷಗಳಾಗುತ್ತಿವೆ. ಮೊದಲು ಉದ್ಯಾನವನ ಹಚ್ಚ ಹಸಿರಿನಿಂದ ಕೂಡಿರುತ್ತಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಇಂಥ ದುಸ್ಥಿತಿಗೆ ತಲುಪಿದೆ.
ಅಂಜಿನಪ್ಪ,
ನರೇಂದ್ರಪ್ಪ, ಸ್ಥಳಿಯ ನಿವಾಸಿಗಳು.

ಉದ್ಯಾನವನದ ಕೊಳವೆಬಾವಿಯಲ್ಲಿ ನೀರಿಲ್ಲ. ಹೀಗಾಗಿ ಗಿಡಗಳು ಒಣಗಿವೆ. ನಿರ್ವಹಣೆಗೆ ಸಿಬ್ಬಂದಿ ನೇಮಕಕ್ಕೆ ಅವಕಾಶವಿಲ್ಲ. ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕಲಾಕೃತಿಗಳಿಗೆ ಧಕ್ಕೆಯಾಗಿದೆ. ಉದ್ಯಾನವನ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು.
ಕಂಪಳಮ್ಮ,
  ಪಪಂ ಮುಖ್ಯಾಧಿಕಾರಿ, ಜಗಳೂರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ