ಸೌಕರ್ಯವಿಲ್ಲದೇ ಸೊರಗುತ್ತಿದೆ ಗ್ರಂಥಾಲಯ

ಗಾಳಿ-ಬೆಳಕಿಲ್ಲದೇ ಉಸಿರುಗಟ್ಟೋ ವಾತಾವರಣಮಳೆಗಾಲದಲ್ಲಿ ಕಟ್ಟಡ ಸೋರಿ ಪುಸ್ತಕಗಳು ಹಾಳು

Team Udayavani, Nov 6, 2019, 10:45 AM IST

6–November-1

ಜೇವರ್ಗಿ: ಹೆಸರಿಗೆ ತಾಲೂಕು ಕೇಂದ್ರ, ಇಲ್ಲಿಂದ ಆಯ್ಕೆಯಾಗಿ ಹೋದವರು ಮುಖ್ಯಮಂತ್ರಿಯಾಗಿ ಆಡಳಿತ ಕೂಡ ನಡೆಸಿದ್ದಾರೆ. ಇಷ್ಟಾದರೂ ಇಲ್ಲಿನ ತಾಲೂಕು ಗ್ರಂಥಾಲಯ ಸ್ವಂತ ಕಟ್ಟಡ, ಮೂಲಸೌಲಭ್ಯವಿಲ್ಲದೇ ಸೊರಗುತ್ತಿರುವುದು ದುರಂತ.

ಗ್ರಂಥಾಲಯಗಳು ಸಾಮಾನ್ಯರ ವಿಶ್ವವಿದ್ಯಾಲಯ. ಸಾರ್ವಜನಿಕರಲ್ಲಿ ಓದಿನ ಅಭಿರುಚಿ ಬೆಳೆಸಲು ಸ್ಥಾಪನೆಗೊಂಡಿವೆ. 1965 ರಲ್ಲಿ ಅಂದಿನ ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸಿತ್ತು. ಇದರ ಧ್ಯೇಯ, ಉದ್ದೇಶಗಳೇನೇ ಇದ್ದರೂ ಪಟ್ಟಣದಲ್ಲಿರುವ ಗ್ರಂಥಾಲಯ ಸ್ವಂತ ಕಟ್ಟಡ, ಮೂಲಸೌಕರ್ಯವಿಲ್ಲದೇ ಸೊರಗುತ್ತಿದೆ.

ಸ್ವಂತ ಕಟ್ಟಡವೇ ಇಲ್ಲ: ಹೇಳಿಕೊಳ್ಳಲು ಗ್ರಂಥಾಲಯವಿದೆ. ಆದರೆ ಇದಕ್ಕೆ ಸ್ವಂತ ಕಟ್ಟಡವಿಲ್ಲ. ಸುಣ್ಣ-ಬಣ್ಣ ಕಾಣದ ಹಳೆ ತಹಶೀಲ್ದಾರ್‌ ಕಚೇರಿಯ ಎರಡು ಕೋಣೆಗಳಲ್ಲಿ ನಡೆಸಲಾಗುತ್ತಿದೆ. ಬಹುತೇಕ ಎಲ್ಲ ಕಿಟಕಿಗಳು ಒಡೆದು ಹೋಗಿವೆ. ವ್ಯವಸ್ಥಿತ ಗಾಳಿ, ಬೆಳಕಂತೂ ಇಲ್ಲವೇ ಇಲ್ಲ. ಚಿಕ್ಕದಾದ ಕುರಿದೊಡ್ಡಿ ಸ್ಥಳದಂತಿದೆ.

ಮುಖ್ಯವಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಪುಸ್ತಕಗಳಿದ್ದರೂ ಯಾವುದೇ ಬಂದೋಬಸ್ತ್ ಇಲ್ಲ. ಓದುಗರು ಇಲ್ಲಿ ಕೂತರೇ ಉಸಿರುಗಟ್ಟುವ ವಾತಾವರಣ. ಒಮ್ಮೆ ಇಲ್ಲಿ 15-20 ಜನ ಕುಳಿತುಕೊಳ್ಳಲು ಮಾತ್ರ ಅವಕಾಶವಿದೆ. ಇಲ್ಲೊಂದು ಗ್ರಂಥಾಲಯವಿದೆ ಎನ್ನುವುದಕ್ಕೆ ನಾಮಫಲಕವೂ ಇಲ್ಲ. ಇಲ್ಲಿ ಓದಲು ಬರುವವರಿಗೆ ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲದೇ ಪ್ರಕೃತಿ ಬಾಧೆಗೆ ಅಲೆದಾಡುವ ದುಸ್ಥಿತಿಯಿದೆ. ಮಳೆಗಾಲದಲ್ಲಿ ಕಟ್ಟಡ ಸೋರುವುದರಿಂದ ಅನೇಕ ಪುಸ್ತಕಗಳು ಹಾಳಾಗಿವೆ.

16143 ಪುಸ್ತಕಗಳಿವೆ: ಒಟ್ಟಾರೆ 16143 ಪುಸ್ತಕಗಳು ಇಲ್ಲಿವೆ. ಕಳೆದ 2017 ರಿಂದ ಇಲ್ಲಿಯವರೆಗೆ 3000 ಪುಸ್ತಕಗಳು ಸೇರ್ಪಡೆಗೊಂಡಿವೆ. 1012 ಜನ ನೋಂದಣಿ ಮಾಡಿಕೊಂಡಿದ್ದಾರೆ. ಮೂವರು ಸಿಬ್ಬಂದಿ ಇದ್ದಾರೆ. 13 ದಿನ ಪತ್ರಿಕೆ (11 ಕನ್ನಡ, 2 ಇಂಗ್ಲಿಷ್‌), 10 ವಾರ, ಮಾಸಿಕ ಪತ್ರಿಕೆಗಳು ಬರುತ್ತವೆ. 20 ಜನ ಕೂರಬಹುದಾದ ಕೊಠಡಿ ಇಲ್ಲಿದೆ.

ಮಹಿಳಾ ಓದುಗರು ಬರೋದಿಲ್ಲ: ಮಹಿಳೆಯರಿಗೆ ಓದಲು ಪ್ರತ್ಯೇಕ ಕೊಠಡಿ ಇಲ್ಲ. ಇರುವುದೊಂದೇ ಕೊಠಡಿ. ಎಲ್ಲರೂ ಅಲ್ಲಿಯೇ ಕೂರಬೇಕು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಸೌಕರ್ಯ ಇಲ್ಲದಿರುವುದಕ್ಕೆ ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು ಗ್ರಂಥಾಲಯದ ಕಡೆ ಸುಳಿಯುವುದಿಲ್ಲ.

ಮೂಟೆಗಳಲ್ಲಿ ಪುಸ್ತಕಗಳು: ಪ್ರತಿ ವರ್ಷವೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಗುತ್ತದೆ. ಆದರೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸ್ಥಳದ ಅಭಾವದಿಂದ ಸರಬರಾಜಾದ ಪುಸ್ತಕಗಳ ಮೂಟೆಗಳನ್ನೇ ಬಿಚ್ಚಿಲ್ಲ.

ಅದೇ ರೀತಿ ಮೂಟೆಗಳನ್ನು ಗುಜರಿ ಅಂಗಡಿಗಳಲ್ಲಿ ಇಟ್ಟಂತೆ ಜೋಡಿಸಲಾಗಿದೆ. ಸೂಕ್ತ ನಿವೇಶನಕ್ಕಾಗಿ ಗ್ರಂಥಾಲಯದ ಮೇಲ್ವಿಚಾರಕರು, ಓದುಗರು ನಿರಂತರವಾಗಿ ತಹಶೀಲ್ದಾರ್‌, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೊಬ್ಬರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ಕಾರ್ಯ ಪ್ರವೃತ್ತರಾಗಿಲ್ಲ.

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.