ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭ

ಆಕರ್ಷಕ ಗಣಪನ ಮೂರ್ತಿ ತಯಾರಿಸಿ ಮಾರಾಟಕ್ಕಿಟ್ಟ ಕಲಾವಿದರು•ಮನೆ-ಮನದಲ್ಲಿ ವಿಘ್ನ ನಿವಾರಕನ ಆರಾಧನೆ

Team Udayavani, Sep 1, 2019, 11:43 AM IST

1-September-15

ಕಡೂರು: ಶ್ರೀ ಗಣೇಶ ಹಬ್ಬದ ಪ್ರಯುಕ್ತ ಗಣಪತಿ ಮೂರ್ತಿ ನಿರ್ಮಿಸುತ್ತಿರುವ ಹೊಳೆಯಪ್ಪ ಮತ್ತು ಅವರ ಪುತ್ರ ದೀಪು

•ಎ.ಜೆ.ಪ್ರಕಾಶಮೂರ್ತಿ
ಕಡೂರು
: ವಿಘ್ನ ನಿವಾರಕ ಶ್ರೀ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣಪತಿ ತಯಾರಕರು ತಮ್ಮ ಕೈಚಳಕದಿಂದ ತಯಾರಿಸಿದ ಆಕರ್ಷಕ ಗಣಪನ ಮೂರ್ತಿಗಳ ಮಾರಾಟಕ್ಕೆ ಸಿದ್ಧವಾಗಿದ್ದಾರೆ.

ಪ್ರತಿ ಬಾರಿ ಗಣೇಶೋತ್ಸವಕ್ಕೂ ಮೊದಲೇದೊಡ್ಡ ಪಟ್ಟಣಗೆರೆ ಕುಂಬಾರ ಹೊಳೆಯಪ್ಪ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕಾಯಕ ಆರಂಭಿಸುತ್ತಾರೆ. ವಿವಿಧ ಭಂಗಿಯ ಗಣಪತಿಗಳ ತಯಾರಿಕೆಯಲ್ಲಿ ಇಡೀ ಕುಟುಂಬ ಸದಸ್ಯರು ಭಾಗಿಯಾಗುತ್ತಾರೆ. ಸೋಮವಾರ ಗಣಪತಿ ಮೂರ್ತಿಗಳು ಭರದಿಂದ ಮಾರಾಟವಾಗಲಿವೆ.

ಚಿಕ್ಕಮಗಳೂರು ಸಮೀಪದ ಮುತ್ತಾವರ ಕೆರೆ ಮುಂತಾದ ಕಡೆ ಗಣಪತಿ ಮೂರ್ತಿ ತಯಾರಿಕೆಗೆ ಅಗತ್ಯ ಮಣ್ಣನ್ನು ತಂದು ಹದ ಮಾಡಿಕೊಂಡು ಮೂರ್ತಿ ತಯಾರಿಸಲು ಆರಂಭಸಲಾಗುತ್ತದೆ. ಈ ಕಲಾವಿದರ ಕೈಯಲ್ಲಿ ಅರಳಿದ ಗಣಪ ಮೂರ್ತಿಗಳು ಜಿಲ್ಲಾದ್ಯಂತ ಖ್ಯಾತಿ ಗಳಿಸಿವೆ.

ಹೊಳೆಯಪ್ಪನವರ ಕುಟುಂಬಕ್ಕೆ ಗಣಪತಿ ಹಬ್ಬದ ಮೊದಲೆರೆಡು ತಿಂಗಳು ಇದೇ ಕಾಯಕ. ಆದರಲ್ಲಿಯೇ ಸಂಪೂರ್ಣ ಸಯಯ ಕಳೆಯುತ್ತಾರೆ. ಈ ಬಾರಿ ಸಂಗೊಳ್ಳಿ ರಾಯಣ್ಣ ಗಣಪ, ನಾರಾಯಣನ ಭಂಗಿಯ ಗಣಪ, ಗೌರಿ ತೊಡೆಯ ಮೇಲೆ ಕುಳಿತಿರುವ ಗಣಪನ ಮೂರ್ತಿಗಳು ಹೊಳೆಯಪ್ಪನವರ ಕಲೆಗೆ ಸಾಕ್ಷಿಯಾಗಿವೆ.

ಗಣಪತಿ ಮೂರ್ತಿ ಮಾಡಿಸಲು ಮುಂಗಡ ನೀಡಿದವರು ತಮ್ಮದೇ ಆಯ್ಕೆಯ ಡಿಸೈನ್‌ನೀಡುತ್ತಾರೆ. ಅದೇ ರೀತಿ ಹೊಳೆಯಪ್ಪ ಗಣಪತಿ ಮೂರ್ತಿಗಳನ್ನು ತಯಾರಿಸಿಕೊಡುತ್ತಾರೆ. ಹೊಳೆಯಪ್ಪ ಮತ್ತು ಮಕ್ಕಳು ಸುಮಾರು 850ಕ್ಕೂ ಹೆಚ್ಚು ವಿವಿಧಭಂಗಿಗಳ ಗಣಪತಿ ಮೂರ್ತಿ ನಿರ್ಮಿಸಿದ್ದಾರೆ. ಕಡೂರಿನ ಸಾರ್ವಜನಿಕ ಪ್ರಸನ್ನ ಗಣಪತಿ ಸಮಿತಿಯವರು ಪ್ರತಿಷ್ಠಾಪನೆ ಮಾಡುವ ಗಣಪನ ಮೂರ್ತಿಯನ್ನು ಕಳೆದ 36 ವರ್ಷಗಳಿಂದ ಇವರೇ ನಿರ್ಮಿಸುತ್ತಿದ್ದಾರೆ. ಹೊರ ಜಿಲ್ಲೆಗಳಿಗೂ ಇವರು ಗಣಪತಿ ಮೂರ್ತಿ ತಯಾರಿಸಿಕೊಡುತ್ತಾರೆ.

ಕಳೆದ ನಾಲ್ಕು ದಶಕಗಳಿಂದ ಗಣೇಶನ ಮೂರ್ತಿ ಮಾಡಿಕೊಂಡು ಬರುತ್ತಿರುವ ನಮ್ಮ ಕುಟುಂಬ ಕುಂಬಾರಿಕೆ(ಕುಡುಕೆ-ಮಡಿಕೆ)ಗಳಿಂದಲೇ ಜೀವನ ನಡೆಸುತ್ತಿದೆ. ಇದೀಗ ಕುಡಿಕೆ- ಮಡಿಕೆಗಳಿಗೆ ಬೇಡಿಕೆ ಇಲ್ಲದ ಕಾರಣಕುಲಕಸುಬಿಗೆ ಹಿನ್ನೆಡೆಯಾಗಿದೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಗೌರಿ -ಗಣೇಶಹಬ್ಬದ ಮೂರು ತಿಂಗಳು ಗಣೇಶನ ಮೂರ್ತಿಮಾಡಿಕೊಂಡು ಜೀವನ ನಿರ್ವಹಣೆ ಮಾಡಬೇಕಾಗಿದೆ ಎನ್ನುತ್ತಾರೆ ಕಲಾವಿದರು.

ಕಡೂರು ಇತಿಹಾಸದಲ್ಲಿಯೇ ಸುಮಾರು 40 ವರ್ಷಗಳ ಕಾಲ ಗಣೇಶ ಮೂರ್ತಿ ನಿರ್ಮಿಸಿ ಸೇವೆ ನೀಡುತ್ತಿದ್ದು, ಪುರಸಭೆ ಆಡಳಿತ ನಮ್ಮನ್ನು ಪರಿಗಣಿಸಿ ಗಣೇಶನನ್ನು ನಿರ್ಮಿಸಲು ಒಂದು ಸ್ಥಳ ನೀಡಿದರೆ ಇದೇಕಾಯಕ ಮುನ್ನಡೆಸಲು ಅನುಕೂಲ ವಾಗುತ್ತದೆ ಎಂಬುದು ಹೊಳೆಯಪ್ಪನವರ ಕುಟುಂಬದ ಆಶಯವಾಗಿದೆ.

ಗಣಪತಿ ತಯಾರಿಕೆ ಕಾಯಕ ಖುಷಿ ಕೊಡುತ್ತೆ
ಮಣ್ಣಿನ ಗಣಪತಿಗಳು ಮಣ್ಣಿನವೇ ಹೊರೆತು ಪಿಒಪಿ ಬಳಸಿಲ್ಲ. ಬಣ್ಣವೂ ನೈಸರ್ಗಿಕ. ಆದ್ದರಿಂದ ಪರಿಸರ ಹಾನಿ ಇಲ್ಲ. ಅಲ್ಲದೇ, ಬಣ್ಣದ ಬಳಕೆಯೂ ಮಿತವಾಗಿರುತ್ತದೆ. ಹತ್ತಿಯನ್ನು ಅಳವಡಿಸಿರುವುದರಿಂದ ಬಣ್ಣ ಮತ್ತು ಸಮಯದ ಉಳಿತಾಯವಾಗಿದೆ. ಗಣಪತಿ ಬಯಸಿ ಬರುವವರ ಕಲ್ಪನೆಗಳನ್ನು ಮೂರ್ತಿ ರೂಪಕ್ಕಿಳಿಸುವ ಕಾಯಕ ಖುಷಿ ಕೊಡುತ್ತದೆ ಎನ್ನುತ್ತಾರೆ ಹೊಳೆಯಪ್ಪ ಮತ್ತು ಅವರ ಮಗ ದೀಪು.

ಟಾಪ್ ನ್ಯೂಸ್

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.