ಅಧಿಕಾರಕ್ಕಾಗಿ ಕಾಂಗ್ರೆಸ್‌-ಜೆಡಿಎಸ್‌ ಕಸರತ್ತು

ರಾಜ್ಯದಲ್ಲಿ ಮೈತ್ರಿ ಸರ್ಕಾರ‌ವಿದ್ದರೂ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳದ ಉಭಯ ಪಕ್ಷಗಳ ನಾಯಕರು

Team Udayavani, May 18, 2019, 5:25 PM IST

ಕಡೂರು: ಮೇ.29ರಂದು ನಡೆಯಲಿರುವ ಕಡೂರು ಪುರಸಭೆ ಚುನಾವಣೆಗೆ ಪ್ರಮುಖ ಮೂರು ರಾಜಕೀಯ ಪಕ್ಷಗಳು 23 ವಾರ್ಡ್‌ಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್‌ 23, ಕಾಂಗ್ರೆಸ್‌ 22 ಹಾಗೂ ಬಿಜೆಪಿ 18 ವಾರ್ಡ್‌ಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಸಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮೈತ್ರಿ ಸರ್ಕಾರವಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿ ಶತಾಯಗತಾಯವಾಗಿ ಕಡೂರು ಪುರಸಭೆ ಅಧಿಕಾರವನ್ನು ಜೆಡಿಎಸ್‌ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮತ್ತು ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಪಣತೊಟ್ಟಿದ್ದಾರೆ. ಅದಕ್ಕಾಗಿ ಎಲ್ಲಾ 23 ವಾರ್ಡ್‌ಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

23 ಅಭ್ಯರ್ಥಿಗಳಲ್ಲಿ 8 ಮಂದಿ ಹಳಬರಿಗೆ ಟಿಕೆಟ್ ನೀಡಲಾಗಿದೆ. ಮೀಸಲಾತಿ ಅದಲು ಬದಲಾಗಿರುವ ಕಾರಣದಿಂದ ಕೆಲವು ಕಾರ್ಯಕರ್ತರ ಪತ್ನಿಯವರಿಗೆ ಅವಕಾಶ ನೀಡಲಾಗಿದೆ. ಯುವಕರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಎಲ್ಲಾ ವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ತಿಳಿಸಿದ್ದಾರೆ.

ಪುರಸಭೆ ರಚನೆಯಾದಗಿನಿಂದ ಹಿಡಿದು ಈವ‌ರೆಗೆ ಬಹುತೇಕ ಆಡಳಿತ ನಡೆಸಿದ ದಾಖಲೆ ಕಾಂಗ್ರೆಸ್‌ ಪಕ್ಷಕ್ಕಿದೆ. ಕಳೆದ ಬಾರಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿದ್ದರೂ ಸದಸ್ಯರ ಬದಲಾವಣೆಯಿಂದ ಬಿಜೆಪಿ ಉಪಾಧ್ಯಕ್ಷರ ಸ್ಥಾನ ಪಡೆದು ಆಡಳಿತ ಹಂಚಿಕೆಯಾಗಿತ್ತು. ಆದರೆ ಈ ಬಾರಿಯ ಅಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್‌ 23 ವಾರ್ಡ್‌ ಗಳಲ್ಲಿ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 12ನೇ ವಾರ್ಡ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ‘ಬಿ’ ಫಾರಂ ನೀಡಲು ಗೊಂದಲವಾಗಿದ್ದರಿಂದ ಯಾರಿಗೂ ಸಹ ‘ಬಿ’ ಫಾರಂ ನೀಡದಿರಲು ತೀರ್ಮಾನಿಸಲಾಯಿತು ಎಂದು ಕಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಸೂರು ಚಂದ್ರಮೌಳಿ ತಿಳಿಸಿದ್ದಾರೆ.

ಕೆಲವೇ ವಾರ್ಡ್‌ಗಳಲ್ಲಿ ಗೆಲುವು ಪಡೆಯುತ್ತಿದ್ದ ಬಿಜೆಪಿ, ಕಳೆದ ಬಾರಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಒಂದು ದೊಡ್ಡ ಸಾಧನೆಯಾಗಿತ್ತು. ಮೂರು ಪಕ್ಷಗಳು ಬಲವಾಗಿರುವುದರಿಂದ ಬಿಜೆಪಿ 18 ವಾರ್ಡ್‌ಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಉಳಿದ 5 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಕಳೆದ ಬಾರಿ ಗೆಲುವು ಪಡೆದಿದ್ದ ಪುಷ್ಪ್ಪಾಲತಾ ಸೋಮೇಶ್‌ ಅವರಿಗೆ ಮಾತ್ರ ಈ ಬಾರಿ ಟಿಕೆಟ್ ನೀಡಿದ್ದು, ಉಳಿದಂತೆ ಎಲ್ಲಾ ಹೊಸಬರಿಗೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ತಾಲೂಕು ಕಾರ್ಯದರ್ಶಿ ಬಂಕ್‌ ಮಂಜು ತಿಳಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳು: 1ನೇ ವಾರ್ಡ್‌ನಲ್ಲಿ ಕೆ.ಎಂ. ಮೋಹನ್‌ ಕುಮಾರ್‌, ನೇ ವಾರ್ಡ್‌ನಲ್ಲಿ ಬಿ.ಜಿ. ಹಾಲಮ್ಮ, 3ನೇ ವಾರ್ಡ್‌ನಲ್ಲಿ ಕೆ.ಜಿ.ಕೃಷ್ಣಮೂರ್ತಿ, 4ನೇ ವಾರ್ಡ್‌ನಲ್ಲಿ ಭಾಗ್ಯಮ್ಮ, 5ನೇ ವಾರ್ಡ್‌ನಲ್ಲಿ ಎಂ. ಮಾದಪ್ಪ, 6ನೇ ವಾರ್ಡ್‌ನಲ್ಲಿ ಎಚ್.ಟಿ. ಮಮತ, 7ನೇ ವಾರ್ಡ್‌ನಲ್ಲಿ ಮೀನಾ ಚಂದ್ರಶೇಖರ್‌, 8ನೇ ವಾರ್ಡ್‌ನಲ್ಲಿ ಕೆ.ಇ.ಮಲ್ಲೇಶಪ್ಪ, 9ನೇ ವಾರ್ಡ್‌ ನಲ್ಲಿ ಕೆ.ಬಿ.ಜಯಲಕ್ಷ್ಮೀ, 10ನೇ ವಾರ್ಡ್‌ನಲ್ಲಿ ಜಮೀಲಾ, 11ನೇ ವಾರ್ಡ್‌ನಲ್ಲಿ ಕೆ.ಪಿ.ರಂಗನಾಥ್‌, 13ನೇ ವಾರ್ಡ್‌ನಲ್ಲಿ ಕವಿತಾ, 14ನೇ ವಾರ್ಡ್‌ನಲ್ಲಿ ಎಸ್‌.ಶ್ರೀಕಾಂತ್‌, 15ನೇ ವಾರ್ಡ್‌ನಲ್ಲಿ ಬಿ.ಜರೀನ, 16ನೇ ವಾರ್ಡ್‌ನಲ್ಲಿ ಸೈಯದ್‌ ಇಕ್ಬಾಲ್, 17ನೇ ವಾರ್ಡ್‌ ನಲ್ಲಿ ಸೈಯಾದ ಯಾಸೀನ್‌, 18ನೇ ವಾರ್ಡ್‌ನಲ್ಲಿ ಎಚ್.ಎಂ.ರವಿಕುಮಾರ್‌, 19ನೇ ವಾರ್ಡ್‌ನಲ್ಲಿ ಎಚ್.ಬಿ.ಶಿಲ್ಪ, 20ನೇ ವಾರ್ಡ್‌ನಲ್ಲಿ ಫರ್ವಿಜ್‌, 21ನೇ ವಾರ್ಡ್‌ನಲ್ಲಿ ಬಿ.ಜ್ಯೋತಿ, 22ನೇ ವಾರ್ಡ್‌ ನಲ್ಲಿ ಎನ್‌.ಬಷೀರ್‌ ಸಾಬ್‌, 23ನೇ ವಾರ್ಡ್‌ನಲ್ಲಿ ಎಲ್.ಕೆ.ಅಣ್ಣಾನಾಯ್ಕ ಕಣಕ್ಕಿಳಿದಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗಳು: 1ನೇ ವಾರ್ಡ್‌ನಲ್ಲಿ ಪಂಗಲಿ ತಿಮ್ಮಯ್ಯ, 2ನೇ ವಾರ್ಡ್‌ನಲ್ಲಿ ಒಬಾÛನಾಯಕ, 3ನೇ ವಾರ್ಡ್‌ನಲ್ಲಿ ಕೆ.ಎಸ್‌.ರಮೇಶ್‌, 4ನೇ ವಾರ್ಡ್‌ನಲ್ಲಿ ಲತಾ ಲಕ್ಕಣ್ಣ, 5ನೇ ವಾರ್ಡ್‌ನಲ್ಲಿ ಪುಟ್ಟರಾಜ್‌, 6ನೇ ವಾರ್ಡ್‌ನಲ್ಲಿ ಪದ್ಮಾಶಂಕರ್‌, 7ನೇ ವಾರ್ಡ್‌ನಲ್ಲಿ ಶಾಂತಾ ಮಂಜುನಾಥ್‌, 8ನೇ ವಾರ್ಡ್‌ನಲ್ಲಿ ಭಂಡಾರಿ ಶ್ರೀನಿವಾಸ್‌, 9ನೇ ವಾರ್ಡ್‌ನಲ್ಲಿ ಕೆ.ಎನ್‌.ಆಶಾ, 10ನೇ ವಾರ್ಡ್‌ನಲ್ಲಿ ನಾಜೀಯಾಬಾನು, 11ನೇ ವಾರ್ಡ್‌ ನಲ್ಲಿ ಮನು(ಮರುಗುದ್ದು), 12ನೇ ವಾರ್ಡ್‌ ನಲ್ಲಿ ಜೆ.ಬಿ.ವೀಣಾ, 13ನೇ ವಾರ್ಡ್‌ನಲ್ಲಿ ಲಕ್ಷ್ಮೀ ತಿಪ್ಪೇಶ್‌, 14ನೇ ವಾರ್ಡ್‌ನಲ್ಲಿ ಗೆೋವಿಂದಸ್ವಾಮಿ, 15ನೇ ವಾರ್ಡ್‌ನಲ್ಲಿ ವಿಜಯಲಕ್ಷ್ಮೀ , 16ನೇ ವಾರ್ಡ್‌ ನಲ್ಲಿ ಜಯಮ್ಮ, 17ನೇ ವಾರ್ಡ್‌ನಲ್ಲಿ ತನ್ವೀರ್‌ ಅಹಮದ್‌, 18ನೇ ವಾರ್ಡ್‌ನಲ್ಲಿ ಜಿ.ಸೋಮಯ್ಯ, 19ನೇ ವಾರ್ಡ್‌ ನಲ್ಲಿ ಪುಷ್ಪಾ ಮಂಜುನಾಥ್‌, 20ನೇ ವಾರ್ಡ್‌ನಲ್ಲಿ ನಾಗೇಂದ್ರ, 21ನೇ ವಾರ್ಡ್‌ನಲ್ಲಿ ತಿಪ್ಪಮ್ಮ, 22ನೇ ವಾರ್ಡ್‌ನಲ್ಲಿ ಹನಿಫ್‌ ಅಹಮದ್‌, 23ನೇ ವಾರ್ಡ್‌ ನಲ್ಲಿ ಕೆ.ವಿ.ಮಂಜುನಾಥ್‌ ಸ್ಪರ್ಧೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು: 1ನೇ ವಾರ್ಡ್‌ನಲ್ಲಿ ಸಂತೋಷ್‌, 3ನೇ ವಾರ್ಡ್‌ನಲ್ಲಿ ರಾಘವೇಂದ್ರ, 5ನೇ ವಾರ್ಡ್‌ನಲ್ಲಿ ಯತಿರಾಜ್‌,6ನೇ ವಾರ್ಡ್‌ ನಲ್ಲಿ ಹೇಮಾವತಿ,7ನೇ ವಾರ್ಡ್‌ನಲ್ಲಿ ಮಂಜುಳ ಶಾಮಿಯಾನ ಚಂದ್ರು, 9ನೇ ವಾರ್ಡ್‌ನಲ್ಲಿ ವಿಜಯ ರಾಜಗೋಪಾಲ್, 10ನೇ ವಾರ್ಡ್‌ನಲ್ಲಿ ಲತಾರಾಜು, 11ನೇ ವಾರ್ಡ್‌ನಲ್ಲಿ ಅರುಣ್‌ಕುಮಾರ್‌, 12ನೇ ವಾರ್ಡ್‌ನಲ್ಲಿ ವಾಣಿ ತಿಮ್ಮಯ್ಯ, 14ನೇ ವಾರ್ಡ್‌ನಲ್ಲಿ ಗೋಪಿಕುಮಾರ್‌, 15ನೇ ವಾರ್ಡ್‌ನಲ್ಲಿ ಹೀನಾ ಕೌನ್ಸರ್‌, 16ನೇ ವಾರ್ಡ್‌ ನಲ್ಲಿ ಆರ್‌.ಆನಂದಮೂರ್ತಿ, 17ನೇ ವಾರ್ಡ್‌ನಲ್ಲಿ ಜೆ.ಎಂ. ಪ್ರದೀಪ್‌, 19ನೇ ವಾರ್ಡ್‌ ನಲ್ಲಿ ಪುಷ್ಪಾ ಲತಾಸೋಮೇಶ್‌, 20ನೇ ವಾರ್ಡ್‌ನಲ್ಲಿ ಗೋವಿಂದಪ್ಪ, 21ನೇ ವಾರ್ಡ್‌ನಲ್ಲಿ ಅನುಸೂಯ, 22ನೇ ವಾರ್ಡ್‌ನಲ್ಲಿ ಸಂದೇಶ್‌ ಕುಮಾರ್‌(ಸುಬ್ಬಣ್ಣ), 23ನೇ ವಾರ್ಡ್‌ನಲ್ಲಿ ಆರ್‌.ಎಂ. ಬಸವರಾಜು ಕಣಕ್ಕಿಳಿದಿದ್ದಾರೆ.

106 ನಾಮಪತ್ರ ಕ್ರಮಬದ್ಧ
ಕಡೂರು: ಕಡೂರು ಪುರಸಭೆಗೆ ಮೇ.29ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ 132 ನಾಮಪತ್ರ ಸ್ವೀಕರಿಸಲಾಗಿದೆ.ಇವುಗಳಲ್ಲಿ 26 ನಾಮಪತ್ರ ತಿರಸ್ಕೃತಗೊಂಡಿದ್ದು,106 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳಾದ ಡಾ| ದೇವರಾಜನಾಯ್ಕ, ರಾಜಪ್ಪ ತಿಳಿಸಿದ್ದಾರೆ. ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದಿದ್ದು, ತಿರಸ್ಕೃತಗೊಂಡಿರುವ ನಾಮಪತ್ರಗಳಲ್ಲಿ ಕೆಲವು ಪಕ್ಷದ ‘ಬಿ’ ಫಾರಂ ನೀಡದಿರುವುದು ಕಾರಣವಾಗಿದ್ದರೆ, ಮತ್ತೆ ಕೆಲವು ಕಾರಣಗಳಿಂದ ತಿರಸ್ಕೃತವಾಗಿವೆ. ನಾಮಪತ್ರ ಹಿಂಪಡೆಯಲು ಮೇ.20ರಂದು 3 ಗಂಟೆಯೊಳಗೆ ಗಡುವು ನೀಡಲಾಗಿದ್ದು, ನಂತರ ಪಕ್ಷೇತರರಿಗೆ ಚಿಹ್ನೆಗಳನ್ನು ನೀಡಲಾಗುವುದು. ಅಂತಿಮ ಪಟ್ಟಿ ಅಂದೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ