Udayavni Special

ಸದೃಢ ರಾಷ್ಟ್ರ ನಿರ್ಮಾಣ ಶಿಕ್ಷಕರ ಗುರಿಯಾಗಲಿ

ವಾಗ್ದೇವಿ ವಿಲಾಸ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಬೆಲಗೂರು ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ ಸಲಹೆ

Team Udayavani, Jun 14, 2019, 4:42 PM IST

14-June-35

ಕಡೂರು: ಬೀರೂರು ಹೊರವಲಯದಲ್ಲಿ ಆರಂಭಗೊಂಡ ವಾಗ್ದೇವಿ ವಿಲಾಸ ಶಾಲೆಯನ್ನು ಬೆಲಗೂರು ಮಾರುತಿ ಪೀಠದ ಬಿಂದು ಮಾಧವ ಶರ್ಮ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಶಾಸಕ ಬೆಳ್ಳಿಪ್ರಕಾಶ್‌, ಶಾಲೆ ಸಂಸ್ಥಾಪಕ ಕೆ.ಹರೀಶ್‌ ಇತರರಿದ್ದರು.

ಕಡೂರು: ಧರ್ಮ ಮತ್ತು ಅಧರ್ಮ ಪ್ರತಿಯೊಬ್ಬ ಮನುಷ್ಯನ ವಿವೇಚನಾ ಶಕ್ತಿಗೆ ಬಿಟ್ಟಿದ್ದು. ವಿಜ್ಞಾನಿ, ರಾಜಕಾರಣಿ, ಸಾಧು ಸಂತರ ಧ್ಯೇಯ ಉತ್ತಮ ರಾಷ್ಟ್ರ ನಿರ್ಮಾಣದ ಕನಸಾಗಿದೆ. ಶಿಕ್ಷಕರು ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಅವಧೂತರಾದ ಬೆಲಗೂರು ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ ಹೇಳಿದರು.

ಬೀರೂರು ಸಮೀಪದ ಅಜ್ಜಂಪುರ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ವಾಗ್ದೇವಿ ವಿಲಾಸ ಶಾಲೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಾಲೆ ಆರಂಭಗೊಂಡಿದೆ. ನಮ್ಮ ಮಕ್ಕಳು ದೇಶದ ಸತøಜೆಗಳಾಗಬೇಕೆಂಬ ಆಶಯದಿಂದ ಇಸ್ರೋ ನಿವೃತ್ತ ವಿಜ್ಞಾನಿ ಹರೀಶ್‌ ಅವರು ಸ್ಥಾಪಿಸಿರುವ ಶಾಲೆ ಹೆಮ್ಮರವಾಗಿ ಬೆಳೆದು ಉನ್ನತ ಶಿಕ್ಷಣ ನೀಡಲಿ ಎಂದು ಹಾರೈಸಿದರು.

ನಾಯಕತ್ವದ ಗುಣ ಅಗತ್ಯ: ಪ್ರಾಸ್ತಾವಿಕವಾಗಿ ಮಾತನಾಡಿದ ವಾಗ್ದೇವಿ ವಿಲಾಸ ಶಾಲೆ ಸ್ಥಾಪಕ ಹಾಗೂ ಇಸ್ರೋ ನಿವೃತ್ತ ವಿಜ್ಞಾನಿ ಕೆ.ಹರೀಶ್‌, ಸಮಾಜದಲ್ಲಿ ನಾಯಕತ್ವದ ಗುಣ ಪ್ರೇರೇಪಿಸುವ ವ್ಯಕ್ತಿತ್ವದ ಅಗತ್ಯವಿದೆ. ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎನ್ನುವ ಪೋಷಕರ ಮತ್ತು ಮಕ್ಕಳ ಕನಸನ್ನು ಶಿಕ್ಷಣ ಪೂರೈಸಬಲ್ಲದು ಎಂದರು.

ಶಿಕ್ಷಣದಿಂದ ಬದುಕು ಹಸನು: ಇಂದು ಶಿಕ್ಷಣ ಎಂದರೆ ಬೃಹತ್‌ ಕಟ್ಟಡಗಳು, ಐಷಾರಾಮಿ ಸೌಲಭ್ಯಗಳ ನಡುವೆ ಕಲಿತರೆ ಗುಣಮಟ್ಟದ ಶಿಕ್ಷಣ ಎನ್ನುವ ಮನೋಭಾವವಿದೆ. ಉತ್ತಮ ಕಲಿಕಾ ವಾತಾವರಣ, ಮಕ್ಕಳ ಅಂತಃಸತ್ವವನ್ನು ಗುರುತಿಸಿ ಅವರ ವ್ಯಕ್ತಿತ್ವವನ್ನು ಉಜ್ವಲಗೊಳಿಸುವ, ಎದುರಾಗಬಹುದಾದ ಕಷ್ಟಕರ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯ ಮೂಲಕ ಬದುಕನ್ನು ಹಸನಾಗಿಸುವುದೇ ಶಿಕ್ಷಣ ಎಂದು ತಿಳಿಸಿದರು. ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬೆಳ್ಳಿಪ್ರಕಾಶ್‌, ಬಯಲು ಸೀಮೆ, ಗ್ರಾಮೀಣ ಪ್ರದೇಶದ ಮಕ್ಕಳ ಜೀವನಕ್ಕೆ ಬೆಳಕು ನೀಡಬಲ್ಲ ಶಿಕ್ಷಣ ಕ್ರಾಂತಿ ನಗರ ಪ್ರದೇಶದಲ್ಲಿ ಅಸ್ತಿತ್ವ ಕಂಡುಕೊಂಡವರ ಸಹಕಾರದಿಂದ ಸಾಧ್ಯವಾಗಲಿ ಎನ್ನುವುದು ತಮ್ಮ ಆಶಯವಾಗಿದೆ. ಭದ್ರ ಬುನಾದಿ ಹೊಂದಿದ ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಹಕರಿಸಬೇಕು. ಮಕ್ಕಳಲ್ಲಿ ಕನಸು ಬಿತ್ತುವ ಜತೆಗೆ ಅವರಲ್ಲಿ ರಾಜಕೀಯ ಪ್ರಜ್ಞೆಯನ್ನೂ ಬೆಳೆಸಬೇಕು. ಉತ್ತಮ ಸಮಾಜಕ್ಕೆ ಪ್ರಬುದ್ಧ ರಾಜಕಾರಣಿಗಳ ಅಗತ್ಯವಿದೆ. ಇಲ್ಲಿ ಕಲಿಯುವ ಮಕ್ಕಳು ಸಂಸ್ಕಾರವಂತರಾಗಲೆಂದು ಹಾರೈಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಭಾನುಪ್ರಕಾಶ್‌, ಬೆಲಗೂರು ಆಡಳಿತ ಮಂಡಳಿ ವ್ಯವಸ್ಥಾಪಕ ಗುರುದತ್ತ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಗಣೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್‌ ಒಡೆಯರ್‌, ಬಿಜೆಪಿ ಮುಖಂಡ ಅರೆಕಲ್ ಪ್ರಕಾಶ್‌, ಸುಂದರಮ್ಮ ಕೃಷ್ಣಮೂರ್ತಿ, ಶಾಲೆನ್‌ ಸಬ್ರಿನೋ, ವಿನೋದ್‌ ಗೋಕರೆ, ವಿನಯ್‌ ಭಟ್, ಶ್ರೀಧರಯ್ಯ, ಪರಮೇಶ್ವರಪ್ಪ ಮತ್ತು ಪೋಷಕರು, ಮಕ್ಕಳು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರಿನ ಮಾಜಿ ಕೇಂದ್ರ ಸಚಿವರಿಗೆ ಕೋವಿಡ್ ಸೋಂಕು ದೃಢ

ಮಂಗಳೂರಿನ ಮಾಜಿ ಕೇಂದ್ರ ಸಚಿವರೊಬ್ಬರಿಗೆ ಕೋವಿಡ್ ಸೋಂಕು ದೃಢ

ಗುರುಪುರ ಬಂಗ್ಲೆಗುಡ್ಡೆ ಬಳಿ ಕುಸಿದ ಗುಡ್ಡ

ಗುರುಪುರ 4 ಮನೆಗಳ ಮೇಲೆ ಕುಸಿದು ಬಿದ್ದ ಗುಡ್ಡ, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ

ಬೆಳ್ತಂಗಡಿ: ಪೊಲೀಸ್ ಕಣ್ಗಾವಲಲ್ಲಿ ಬಿಗಿ ಲಾಕ್ ಡೌನ್

ಬೆಳ್ತಂಗಡಿ: ಪೊಲೀಸ್ ಕಣ್ಗಾವಲಲ್ಲಿ ಬಿಗಿ ಲಾಕ್ ಡೌನ್

ಲಾಕ್ ಡೌನ್ ಕರ್ಫ್ಯೂ ಮೀರಿ ರಸ್ತೆಗೆ ಬಂದವರಿಗೆ ಪೊಲೀಸ್ ಲಾಠಿರುಚಿ

ಲಾಕ್ ಡೌನ್ ಕರ್ಫ್ಯೂ ಮೀರಿ ರಸ್ತೆಗೆ ಬಂದವರಿಗೆ ಪೊಲೀಸ್ ಲಾಠಿ ರುಚಿ

ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ತುರ್ತು ಸ್ಥಳಾಂತರ

ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ರೋಗಿಗಳ ತುರ್ತು ಸ್ಥಳಾಂತರ

covid19-india-21

ದೇಶದಲ್ಲಿ ಕೋವಿಡ್-19 ರುದ್ರನರ್ತನ: ಒಂದೇ ದಿನ 613 ಬಲಿ, 24,850 ಜನರಿಗೆ ಸೋಂಕು

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಳೆತ ಮೊಟ್ಟೆ ವಿತರಣೆ: ಆಕ್ರೋಶ

ಕೊಳೆತ ಮೊಟ್ಟೆ ವಿತರಣೆ: ಆಕ್ರೋಶ

ಮಂಗಳೂರಿನ ಮಾಜಿ ಕೇಂದ್ರ ಸಚಿವರಿಗೆ ಕೋವಿಡ್ ಸೋಂಕು ದೃಢ

ಮಂಗಳೂರಿನ ಮಾಜಿ ಕೇಂದ್ರ ಸಚಿವರೊಬ್ಬರಿಗೆ ಕೋವಿಡ್ ಸೋಂಕು ದೃಢ

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸಿಗೆ ಅಭಿನಂದನೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸಿಗೆ ಅಭಿನಂದನೆ

ಕೋವಿಡ್‌ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಕೋವಿಡ್‌ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಭಯ ಬಿಟ್ಟು ಮುನ್ನೆಚ್ಚರಿಕೆ ವಹಿಸಿ

ಭಯ ಬಿಟ್ಟು ಮುನ್ನೆಚ್ಚರಿಕೆ ವಹಿಸಿ

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

ಕೊಳೆತ ಮೊಟ್ಟೆ ವಿತರಣೆ: ಆಕ್ರೋಶ

ಕೊಳೆತ ಮೊಟ್ಟೆ ವಿತರಣೆ: ಆಕ್ರೋಶ

ಮಂಗಳೂರಿನ ಮಾಜಿ ಕೇಂದ್ರ ಸಚಿವರಿಗೆ ಕೋವಿಡ್ ಸೋಂಕು ದೃಢ

ಮಂಗಳೂರಿನ ಮಾಜಿ ಕೇಂದ್ರ ಸಚಿವರೊಬ್ಬರಿಗೆ ಕೋವಿಡ್ ಸೋಂಕು ದೃಢ

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸಿಗೆ ಅಭಿನಂದನೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸಿಗೆ ಅಭಿನಂದನೆ

ಕೋವಿಡ್‌ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಕೋವಿಡ್‌ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ

ಭಯ ಬಿಟ್ಟು ಮುನ್ನೆಚ್ಚರಿಕೆ ವಹಿಸಿ

ಭಯ ಬಿಟ್ಟು ಮುನ್ನೆಚ್ಚರಿಕೆ ವಹಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.