Udayavni Special

ಸಮರ್ಪಕವಾಗಿಲ್ಲ ನೆರೆ ಪರಿಹಾರ

ಸುರಪುರ-ಹುಣಸಗಿ ತಾಲೂಕಿನಲ್ಲಿ 3223 ರೈತರಿಗೆ ನಷ್ಟ ಜನಪ್ರತಿನಿಧಿಗಳು ಮುತುವರ್ಜಿ ವಹಿಸಲಿ

Team Udayavani, Dec 9, 2019, 2:53 PM IST

December-10

„ಬಾಲಪ್ಪ ಎಂ.ಕುಪ್ಪಿ
ಕಕ್ಕೇರಾ:
ಕೃಷ್ಣಾನದಿ ನೆರೆ ಹಾವಳಿಯಿಂದ ಹಾನಿಗೀಡಾದ ಕೆಲವು ರೈತರಿಗೆ ಇನ್ನು ಪರಿಹಾರ ಹಣ ಸಿಗದೆ ಕಷ್ಟ ಅನುಭವಿಸುವಂತಾಗಿದೆ. ಐದು ತಿಂಗಳು ಗತಿಸಿದರೂ ರೈತರಿಗೆ ಸಿಗಬೇಕಾದ ನೆರವು ಇವರೆಗೂ ದೊರಕಿಲ್ಲ. ಹೀಗಾಗಿ ರೈತರು ತೊಂದರೆ ಪಡುವಂತಾಗಿದೆ. ಕೃಷ್ಣಾ ನದಿ ನೆರೆಹಾವಳಿಯಿಂದ ಅನೇಕ ರೈತರು ನಷ್ಟ ಹೊಂದಿದ್ದಾರೆ. ನದಿ ತೀರದ ಭತ್ತ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಲಾವೃತ್ತವಾಗಿ ರೈತರು ಭಾರಿ ನಷ್ಟ ಹೊಂದಬೇಕಾಯಿತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಹಾಗೂ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ಬೆಳೆ ಹಾನೀಗಿಡಾಗುವಂತೆ ಮಾಡಿತು. ಹೀಗಾಗಿ ಹಾನಿಗೊಳಗಾದ ಕೆಲ ರೈತರಿಗೆ ಬೆಳೆ ಹಾನಿ ಪರಿಹಾರ ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದರೆ.

ಇನ್ನೂ ಕೆಲ ರೈತರಿಗೆ ಹಾನಿ ಪರಿಹಾರ ದೊರೆಯದೆ ವಿಳಂಬವಾಗಿದೆ. ಸಮೀಕ್ಷೆ ಮಾಡಿ ಐದು ತಿಂಗಳು ಗತಿಸಿದರೂ ಪರಿಹಾರ ಬಂದಿಲ್ಲ ಎಂದು ಕೃಷ್ಣಾನದಿ ತೀರದ ರೈತರು ನೋವು ತೋಡಿಕೊಂಡಿದ್ದಾರೆ.

ನೆರೆ ಹಾವಳಿಯಿಂದಾಗಿ ಶಹಾಪುರ ತಾಲೂಕು 4680 ಹೆಕ್ಟೇರ್‌, ಸುರಪುರ-4495 ಹೆಕ್ಟೇರ್‌ ಮತ್ತು ಯಾದಗಿರಿ ತಾಲೂಕಿನಲ್ಲಿ 331 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 9506 ಸಾವಿರ ಹೆಕ್ಟೇರ್‌ ಪ್ರದೇಶದ ರೈತರ ಬೆಳೆ ಹಾನಿಯಾದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ.

ಜಿಲ್ಲೆಯಲ್ಲಿ 7461 ರೈತರು ನೆರೆ ಹಾವಳಿ ಪರಿಹಾರ ಪಡೆಯಲು ಅರ್ಹರಿದ್ದಾರೆ. ಹೀಗಾಗಿ ಅವರಲ್ಲಿ ಇನ್ನೂ ಅನೇಕ ರೈತರಿಗೆ ಪರಿಹಾರವೇ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸುರಪುರ ತಾಲೂಕಿನಲ್ಲಿ ಸುರಪುರ ಹಾಗೂ ಹುಣಸಗಿ ತಾಲೂಕು ಒಳಗೊಂಡು 3223 ರೈತರು ನೆರೆ ಹಾವಳಿಗೆ ತುತ್ತಾಗಿದ್ದಾರೆ.

ಸತತವಾಗಿ ಕೃಷ್ಣಾ ನದಿಗೆ ಪ್ರವಾಹ ಆವರಿಸಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೃಷ್ಣಾ ನದಿ ತೀರದ ಬೆಂಚಿಗಡ್ಡಿ, ತಿಂಥಣಿ, ಬಂದೊಡ್ಡಿ, ಅರಳ್ಳಳ್ಳಿ, ಬಂಡೊಳ್ಳಿ, ಮುಷ್ಠಳಿ, ದೇವಾಪುರ, ಲಿಂಗದಳ್ಳಿ, ನಾರಾಯಣಪುರ ಹತ್ತಿರದ ಮೇಲಿನಗಡ್ಡಿ, ಜಂಜಿಗಡ್ಡಿ, ಹುಣಸಿಹೊಳೆ ಸೇರಿದಂತೆ ಅನೇಕ ಗ್ರಾಮಗಳ ರೈತರ ಬೆಳೆ ಹಾನಿಯಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸಮೀಕ್ಷೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾಗಿದೆ.

ಆದರೆ ತಾಂತ್ರಿಕ ಕಾರಣದಿಂದಾಗಿ ಕೆಲವು ರೈತರಿಗೆ ಪರಿಹಾರ ಹಣ ಸಿಕ್ಕಿಲ್ಲ ಎಂದು ಮಾತು ಕೇಳಿ ಬರುತ್ತಿದೆ. ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಕಡ್ಡಾಯವಾಗಿದೆ. ಆದ್ದರಿಂದ ಖಾತೆಗೆ ಆಧಾರ ಜೋಡಣೆ ಮಾಡಿದ್ದರೆ ಮಾತ್ರ ರೈತರ ಖಾತೆಗೆ ಸರಕಾರದಿಂದ ನೆರವು ಸಿಗುತ್ತದೆ. ಹೀಗಾಗಿ ಆಧಾರ ಜೋಡಣೆ ಹೊಂದಿರದ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುವುದಿಲ್ಲ. ಈ ಕುರಿತು ರೈತರು ಕೂಡ ಒಮ್ಮೆ ಬ್ಯಾಂಕ್‌ ಖಾತೆ ಪರಿಶೀಲಿಸಿ ಆಧಾರ್‌ ನೋಂದಾಯಿಸಬೇಕು.

ಇಷ್ಟೇ ರೈತರಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಲು ಯಾವುದೇ ವಿವರ ಲಭ್ಯವಿಲ್ಲ. ಆದರೆ ಆಧಾರ ಲಿಂಕ್‌ ಹೊಂದಿದ ರೈತರಿಗೆ ಮಾತ್ರ ಪರಿಹಾರ ದೊರೆಯಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ನೆರೆ ಹಾವಳಿಯಿಂದ ಬೆಳೆ ಹಾನಿಯಾದ ಬಗ್ಗೆ ಜನಪ್ರತಿನಿಧಿಗಳು ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಆದರೆ ಇವರೆಗೂ ಪರಿಹಾರ ಬರದೇ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡುವಂತಾಗಿದೆ.

ಹೀಗಾಗಿ ಕ್ಷೇತ್ರದ ಶಾಸಕರು ಹಾಗೂ ಸಂಸದರು ಸರಕಾರಕ್ಕೆ ಪ್ರಸ್ತಾಪಿಸಿ ಪರಿಹಾರ ದೊರಕಿಸಿಕೊಡುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ ಎಂಬುದು ರೈತರ ಒತ್ತಾಯವಾಗಿದೆ.

ಈಗಾಗಲೇ ಸರಕಾರದಿಂದ ನೇರವಾಗಿ ಕೆಲ ರೈತರ ಖಾತೆಗೆ ಪರಿಹಾರ ಹಣ ಬಂದಿದೆ. ರೈತರು ಕಡ್ಡಾಯವಾಗಿ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಬೇಕು. ತಾಲೂಕಿನಲ್ಲಿ ಪರಿಹಾರ ದೊರಕದೆ ಇದ್ದ ರೈತರ ಮಾಹಿತಿ ಪಡೆದು ಪರಿಹಾರಕ್ಕಾಗಿ ಮತ್ತೂಮೆ ಸರಕಾರಕ್ಕೆ ಪ್ರಸ್ತಾಪಿಸಲಾಗುವುದು. ಬಹುತೇಕ ರೈತರಿಗೆ ಪರಿಹಾರ ದೊರಕಿದೆ.
.ನಿಂಗಣ್ಣ ಬಿರಾದಾರ,
ತಹಶೀಲ್ದಾರ್‌ ಸುರಪುರ

ಪ್ರವಾಹದಿಂದ 3 ಎಕರೆ ಭತ್ತ ನಾಶವಾಗಿದೆ. ಅಧಿಕಾರಿಗಳು ಅಗತ್ಯ ದಾಖಲಾತಿ ಪಡೆದಿದ್ದಾರೆ. ಇನ್ನು ಖಾತೆಗೆ ಪರಿಹಾರ ಹಣ ಜಮಾ ಆಗಿಲ್ಲ. ಜೀವನ ದುಸ್ಥಿತಿಯಾಗಿದೆ. ನಮಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು.
.ದೇವಿಂದ್ರಪ್ಪ ಬಿ. ಅಂಬಿಗೇರ,
ಹಾನಿಗೀಡಾದ ರೈತ ತಿಂಥಣಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ದಕ್ಷಿಣ ಕನ್ನಡದಲ್ಲಿ 11 ಮಂದಿಯಲ್ಲಿ ಸೋಂಕು ದೃಢ

ದಕ್ಷಿಣ ಕನ್ನಡ ಮೂರು ವರ್ಷದ ಮಗು ಸೇರಿ 11 ಮಂದಿಗೆ ಕೋವಿಡ್ ಸೋಂಕು ದೃಢ

ಕೋವಿಡ್ ಆತಂಕದ ನಡುವೆ ಅಸ್ಸಾಂನಲ್ಲಿ ಧಾರಾಕಾರ ಮಳೆ, 7 ಜಿಲ್ಲೆ ಜಲಾವೃತ

ಕೋವಿಡ್ ಆತಂಕದ ನಡುವೆ ಅಸ್ಸಾಂನಲ್ಲಿ ಧಾರಾಕಾರ ಮಳೆ, 7 ಜಿಲ್ಲೆ ಜಲಾವೃತ, ಜನಜೀವನ ಅಸ್ತವ್ಯಸ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮೂರು ದಿನದಲ್ಲಿ 1533 ಜನರ ಸ್ಯಾಂಪಲ್‌ ರವಾನೆ

ಮೂರು ದಿನದಲ್ಲಿ 1533 ಜನರ ಸ್ಯಾಂಪಲ್‌ ರವಾನೆ

ವಿದ್ಯುತ್‌ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ

ವಿದ್ಯುತ್‌ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮೂರು ದಿನದಲ್ಲಿ 1533 ಜನರ ಸ್ಯಾಂಪಲ್‌ ರವಾನೆ

ಮೂರು ದಿನದಲ್ಲಿ 1533 ಜನರ ಸ್ಯಾಂಪಲ್‌ ರವಾನೆ

ವಿದ್ಯುತ್‌ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ

ವಿದ್ಯುತ್‌ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.